ಹೈದರಾಬಾದ್: ನಾನು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಪೇಚಿಕೆ ಸಿಲುಕಿದ್ದ ಬಹುಭಾಷಾ ನಟಿ ರಾಶಿ ಖನ್ನಾ ಇಂದು ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಾಕಿ ಕಾರಣ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ವಿನಾಕಾರಣ ತಪ್ಪಾಗಿ ಅರ್ಥೈಸಲಾಗಿದೆ. ನಾನು ಹಾಗೆ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಬಗ್ಗೆ ಹರಿದಾಡುತ್ತಿರುವ ಟ್ರೋಲ್ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾನು ಸೌತ್ ಸಿನಿಮಾಗಳನ್ನು ದೂಷಿಸುತ್ತೇನೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಟ್ರೋಲ್ ಸಹ ಮಾಡಲಾಗುತ್ತದೆ. ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ನನಗೆ ಗೌರವವಿಲ್ಲವೆಂದು ಹೇಳಿ ಹೆಸರಿಗೆ ಧಕ್ಕೆ ತರುತ್ತಿದ್ದಾರೆ. ಆ ರೀತಿಯ ಹೇಳಿಕೆಗಳನ್ನು ನಾನು ನೀಡಿಲ್ಲ. ನಾನು ಮಾಡುವ ಪ್ರತಿಯೊಂದು ಭಾಷೆ ಮತ್ತು ಚಿತ್ರದ ಬಗ್ಗೆ ನನಗೆ ಬಹಳಷ್ಟು ಗೌರವವಿದೆ. ಆದ್ದರಿಂದ ದಯವಿಟ್ಟು ಅಪಪ್ರಚಾರ ನಿಲ್ಲಿಸಿ ಎಂದು ನಟಿ ಮನವಿ ಮಾಡಿದ್ದಾರೆ.
-
🙏🏻😊 pic.twitter.com/yQa1nOacEY
— Raashii Khanna (@RaashiiKhanna_) April 6, 2022 " class="align-text-top noRightClick twitterSection" data="
">🙏🏻😊 pic.twitter.com/yQa1nOacEY
— Raashii Khanna (@RaashiiKhanna_) April 6, 2022🙏🏻😊 pic.twitter.com/yQa1nOacEY
— Raashii Khanna (@RaashiiKhanna_) April 6, 2022
ರಾಶಿ ಖನ್ನಾ ‘ಮದ್ರಾಸ್ ಕೆಫೆ’ ಎಂಬ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಆದರೆ, ಮೊಲದ ಬಾಲಿವುಡ್ ಸಿನಿಮಾ ಸೋತಿದ್ದರಿಂದ ಅವರು ಸೌತ್ ಸಿನಿಮಾಗಳತ್ತ ಮುಖ ಮಾಡಿದ್ದರು. ಅಲ್ಲದೇ ನಟಿಸಿದ ಇಲ್ಲಿಯ ಹಲವು ಚಿತ್ರಗಳು ಹಿಟ್ ಆಗಿದ್ದರಿಂದ ಗ್ಲಾಮರ್ ಡಾಲ್ ಎಂದು ಗುರುತಿಸಿಕೊಂಡರು. ಸುಮಾರು ಒಂಬತ್ತು ವರ್ಷಗಳ ನಂತರ ‘ರುದ್ರ’ ಎಂಬ ವೆಬ್ ಸಿರೀಸ್ನಲ್ಲಿ ನಟಿಸಿ ಗಮನ ಸೆಳೆದರು. ಇದೇ ಖುಷಿಯಲ್ಲಿ ವಿವಿಧ ಆಂಗ್ಲ ನಿಯತಕಾಲಿಕೆಗಳಿಗೆ ನೀಡಿದ ಸಂದರ್ಶನದಲ್ಲಿ ಸೌತ್ ಇಂಡಸ್ಟ್ರಿಯ ಬಗ್ಗೆ ಬ್ಯಾಡ್ ಕಾಮೆಂಟ್ ಮಾಡಿದ್ದಾರೆ ಎಂದು ವರದಿಯಾಗಿತ್ತು.