ETV Bharat / entertainment

'ಪುಷ್ಪಾ2' ಪೋಸ್ಟರ್​​​ ಬಿಡುಗಡೆ:​ ಅಲ್ಲು ಅರ್ಜುನ್​ ಸೀರೆ ಲುಕ್​ಗೆ ಸಮಂತಾ ಕಾಮೆಂಟ್​ ಹೀಗಿತ್ತು.. - ಅಲ್ಲು ಅರ್ಜುನ್​ ಹುಟ್ಟುಹಬ್ಬ

'ಪುಷ್ಪಾ 2' ಪೋಸ್ಟರ್​ ಅನ್ನು ಕೇವಲ ಚಿತ್ರ ತಂಡ ಮಾತ್ರವಲ್ಲದೇ, ಸಿನಿರಂಗದ ತಾರೆಗಳಾದ ಸಮಂತಾ ರುತ್​ ಪ್ರಭು, ದಿಶಾ ಪಟಾನಿ, ರಾಶಿ ಖನ್ನಾ ಸೇರಿದಂತೆ ಹಲವು ಮಂದಿ ಹಂಚಿಕೊಂಡು, ಚಿತ್ರ ತಂಡಕ್ಕೆ ಶುಭ ಕೋರಿದರು.

Pushpa 2 poster release: Samantha's comment on Allu Arjun's saree look was like this!

author img

By

Published : Apr 8, 2023, 3:01 PM IST

ಹೈದರಾಬಾದ್​: ಭಾರಿ ನಿರೀಕ್ಷೆ ಮೂಡಿಸಿದ್ದ ನಟ ಅಲ್ಲು ಅರ್ಜುನ್​ ಅಭಿನಯದ 'ಪುಷ್ಪಾ 2' ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ನಟ ಅಲ್ಲು ಅರ್ಜುನ್​ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೋಸ್ಟರ್​ ಅನ್ನು ಕೂಡ ಚಿತ್ರತಂಡ ಬಿಡುಗಡೆ ಮಾಡಿತು. ಶುಕ್ರವಾರ ಅಂದರೆ ಅಲ್ಲು ಅರ್ಜುನ್​ ಹುಟ್ಟು ಹಬ್ಬಕ್ಕೂ ಮುನ್ನ ಸಂಜೆ ಬಿಡುಗಡೆಯಾದ ಈ ಪೋಸ್ಟರ್​ ಅಭಿಮಾನಿಗಳಲ್ಲಿ ಕುತೂಹಲ ಜೊತೆಗೆ ಮೆಚ್ಚುಗೆ ಮೂಡಿಸಿತು. ಅಲ್ಲು ಅರ್ಜುನ್​ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಗಳಿಗೆ ಈ ಪೋಸ್ಟರ್​​ ಬಿಡುಗಡೆಗೊಳಿಸುವ ಮೂಲಕ ಮೈತ್ರಿ ಮೂವಿ ಮೇಕರ್ಸ್​ ದೊಡ್ಡ ಉಡುಗೊರೆ ನೀಡಿದೆ. ಟೀಸರ್​ ಮತ್ತು ಪೋಸ್ಟ್​ ಬಿಡುಗಡೆಯಾದ ಡಬಲ್​ ಸಂಭ್ರಮ ಇದೀಗ ಮನೆ ಮಾಡಿದ್ದು, ಚಿತ್ರ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ಅಭಿಮಾನಿಗಳು ತಿಳಿಸಿದ್ದಾರೆ.

ಸಮಂತಾ ಕಾಮೆಂಟ್​
ಸಮಂತಾ ಕಾಮೆಂಟ್​

'ಪುಷ್ಪಾ 1' ಯಶಸ್ಸಿನ ಬೆನ್ನಲ್ಲೇ ಇದೀಗ 'ಪುಷ್ಟಾ 2' ಪೋಸ್ಟರ್​ ಬಿಡುಗಡೆಯಾಗಿದ್ದು, ಈ ಪೋಸ್ಟರ್​ ಅನ್ನು ಕೇವಲ ಚಿತ್ರ ತಂಡ ಮಾತ್ರವಲ್ಲದೇ, ಸಿನಿರಂಗದ ತಾರೆಗಳಾದ ಸಮಂತಾ ರುತ್​ ಪ್ರಭು, ದಿಶಾ ಪಟಾನಿ, ರಾಶಿ ಖನ್ನಾ ಸೇರಿದಂತೆ ಹಲವು ಮಂದಿ ಹಂಚಿಕೊಂಡು, ಚಿತ್ರ ತಂಡಕ್ಕೆ ಶುಭ ಕೋರಿದರು.

ಕುತೂಹಲ ಮೂಡಿಸಿದ ಪೋಸ್ಟರ್​: 'ಪುಷ್ಪಾ 2' ಟೀಸರ್​ನಲ್ಲಿ ಗುಂಡೇಟು ತಿಂದು ಕಣ್ಮರೆಯಾದ ಅಲ್ಲು ಅರ್ಜುನ್​ ಬುದುಕುಳಿದು ಹುಲಿಯ ಮುಂದೆ ನಡೆದು ಹೋಗುವ ದೃಶ್ಯ ಕಂಡು ಬಂದಿದೆ. ಇನ್ನು ಪೋಸ್ಟರ್​ ಇದಕ್ಕಿಂತಲೂ ವಿಭಿನ್ನವಾಗಿದ್ದು, ಇದರಲ್ಲಿ ನಟ ಅಲ್ಲು ಅರ್ಜುನ್​ ಅವರು, ಸೀರೆಯಲ್ಲಿ ಆಭರಣಗಳನ್ನು ತೊಟ್ಟು ಕಂಗೊಳಿಸಿದ್ದು, ಅವರ ಅವತಾರ ಅನೇಕರಲ್ಲಿ ಕುತೂಹಲ ಮೂಡಿಸಿದೆ.

ಶುಭಾಶಯಗಳ ಮಹಾಪೂರ: ನಟ ಅಲ್ಲು ಅರ್ಜುನ್​ ಅವರ ಈ ಲುಕ್​ ಪೋಸ್ಟ್​ ಅನ್ನು ತಮ್ಮ ಇನ್ಸ್​ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ನಟಿ ಸಮಂತಾ ಭಾವುಕರಾಗಿ ಶುಭಾಶಯ ಕೋರಿದ್ದಾರೆ. ಹುಟ್ಟುಹಬ್ಬದ ಹಾರ್ದಿಕ ಶುಭಶಯಗಳು ಒನ್​ ಅಂಡ್​ ಓನ್ಲಿ ಅಲ್ಲು ಅರ್ಜುನ್​ ಎಂದು ಬರೆದಿದ್ದಾರೆ. ಅಲ್ಲದೇ, ನಿಮ್ಮಂತೆ ಕೆಲವೇ ಜನರು ನನಗೆ ಸ್ಫೂರ್ತಿ ನೀಡಿದ್ದಾರೆ. ದೇವರು ನಿಮಗೆ ಅದ್ಭುತ ಆರೋಗ್ಯ, ಶಕ್ತಿಯನ್ನು ಕೊಟ್ಟು ಕಾಪಾಡಲಿ ಎಂದು ಹರಸಿದ್ದಾರೆ.

ವಿಭಿನ್ನ ಪೋಸ್ಟರ್​​, ಟೀಸರ್​ಗಳ ಮೂಲಕ ಈಗಾಗಲೇ ಸುಕುಮಾರ್​ ನಿರ್ದೇಶನದ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಅಲ್ಲು ಅರ್ಜುನ್​ ಉಳಿದವರಿಗಿಂತ ಪ್ರಯೋಗಿಕ ನಟರಾಗಿದ್ದು, ಅವರನ್ನು ಶ್ಲಾಘಿಸುವ ಕಾಮೆಂಟ್​ಗಳ ಸುರಿಮಳೆಯನ್ನು ಪೋಸ್ಟರ್​ನಲ್ಲಿ ಕಾಣಬಹುದಾಗಿದೆ.

ಇನ್ನು, ಪೋಸ್ಟರ್​ ಬಿಡುಗಡೆ ಮಾಡುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್​ಗಳ ಸುರಿಮಳೆ ಸುರಿಸಿದ್ದಾರೆ. ಈ ವೇಳೆ ಒಬ್ಬರು ಪುಷ್ಪಾ ಅಲ್ಲ, ಬೆಂಕಿ ಅಲ್ಲು ಅರ್ಜುನ್​ ಎಂದಿದ್ದಾರೆ. ಮತ್ತೊಬ್ಬರು, ಬಗ್ಗೋ ಮಾತೆ ಇಲ್ಲ ಎಂದಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಕಾಮೆಂಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ರಾಶಿ ಖನ್ನಾ ಮತ್ತು ದಿಶಾ ಪಟಾನಿ ವಾವ್​ ಎಂದು ಎಮೋಜಿಗಳನ್ನು ಬಳಸಿದ್ದಾರೆ.

ಅಲ್ಲು ಅರ್ಜುನ್​ ರಕ್ತ ಚಂದನ ದರೋಡೆಕೋರನಾದಿ ನಟಿ ರಶ್ಮಿಕಾ ಮಂದಣ್ಣ, ಫಹದ್​ ಫಾಜಿಲ್​ ನಟಿಸಿದ್ದ ಪುಷ್ಪಾ: ದಿ ರೈಸ್​ ಚಿತ್ರ ಪಂಚ ಭಾಷೆಗಳಲ್ಲೂ ಯಶಸ್ಸು ಗಳಿಸಿತ್ತು. ಇದರ ಮುಂದುವರೆದ ಭಾಗ 2024ರ ಬೇಸಿಗೆಯಲ್ಲಿ ಬೆಳ್ಳಿತೆರೆಗೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಹ್ಯಾಪಿ ಬರ್ತ್ ಡೇ ಶ್ರೀವಲ್ಲಿ: ರಶ್ಮಿಕಾ ಮಂದಣ್ಣ ಫಸ್ಟ್ ಲುಕ್, ಪುಷ್ಪಾ 2 ಟೀಸರ್ ತುಣುಕು​ ರಿಲೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.