ETV Bharat / entertainment

ಪುಷ್ಪಾ 2: ಫಹಾದ್​ ಫಾಸಿಲ್​ ಪ್ರಮುಖ ಭಾಗಗಳ ಚಿತ್ರೀಕರಣ ಮುಕ್ತಾಯ.. ಬಿಟಿಎಸ್​ ಫೋಟೋ ಹಂಚಿಕೊಂಡ ಚಿತ್ರತಂಡ - ಮೈತ್ರಿ ಮೂವಿ ಮೇಕರ್ಸ್

ಪೊಲೀಸ್​ ಭನ್ವರ್​ ಸಿಂಗ್ ಶೇಖಾವತ್​​ ಪಾತ್ರಧಾರಿ ಮಲಯಾಳಂ ನಟ ಫಹಾದ್​ ಫಾಸಿಲ್​ ತಮ್ಮ ಪ್ರಮುಖ ಭಾಗಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

Fahadh Faasil wraps up key schedule
ಫಹಾದ್​ ಫಾಸಿಲ್​ ಪ್ರಮುಖ ಭಾಗಗಳ ಚಿತ್ರೀಕರಣ ಮುಕ್ತಾಯ
author img

By

Published : May 18, 2023, 4:40 PM IST

ಬಹುನಿರೀಕ್ಷಿತ ಟಾಲಿವುಡ್​ನ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಅಭಿನಯದ ಹಾಗೂ ಸುಕುಮಾರನ್​ ನಿರ್ದೇಶನದ ಪುಷ್ಪ 2: ದಿ ರೂಲ್​ ಸಿನಿಮಾದ ಶೂಟಿಂಗ್​ ಭರದಿಂದ ಸಾಗುತ್ತಿದೆ. ಇದೀಗ ಚಿತ್ರತಂಡ ಚಿತ್ರದಲ್ಲಿ ಭ್ರಷ್ಟ ಪೊಲೀಸ್​ ಅಧಿಕಾರಿ ಭನ್ವರ್​ ಸಿಂಗ್​ ಶೇಖಾವತ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಲಯಾಳಂ ನಟ ಫಹಾದ್​ ಫಾಸಿಲ್​ ಅವರನ್ನು ಒಳಗೊಂಡ ಪ್ರಮುಖ ಭಾಗಗಳ ಶೂಟಿಂಗ್​ ಪೂರ್ಣಗೊಳಿಸಿರುವುದಾಗಿ ಅಪ್​ಡೇಟ್​ ನೀಡಿದೆ.

BTS(Behind the Screen) ತೆರೆಯ ಹಿಂದಿನ ಫೋಟೋವೊಂದನ್ನು ಸಿನಿಮಾ ತಯಾರಕರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, "#Pushpa2TheRule ನ ಪ್ರಮುಖ ವೇಳಾಪಟ್ಟಿ 'ಭನ್ವರ್ ಸಿಂಗ್ ಶೇಖಾವತ್' ಅಲಿಯಾಸ್​ #FahadhFaasil ಅವರೊಂದಿಗೆ ಪೂರ್ಣಗೊಂಡಿದೆ. ಈ ಬಾರಿ ಅವರು ಪ್ರತೀಕಾರದೊಂದಿಗೆ ಹಿಂತಿರುಗುತ್ತಾರೆ" ಎಂದು ಬರೆದುಕೊಂಡಿದೆ.

2021 ರಲ್ಲಿ ಬಿಡುಗಡೆಯಾಗಿದ್ದ ಪುಷ್ಪ: ದಿ ರೈಸ್​ ಸಿನಿಮಾದ ಸೀಕ್ವೆಲ್​ ಪುಷ್ಪ 2 ಮೊದಲ ಭಾಗಕ್ಕಿಂತಲೂ ಉತ್ತಮವಾಗಿದೆ ಎಂದು ಸಿನಿಮಾಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಎರಡನೇ ಭಾಗದಲ್ಲಿ ಮೊದಲನೇ ಭಾಗದ ಕೊನೇಯಲ್ಲಿ ಪ್ರಾರಂಭವಾಗಿದ್ದ ಫಹಾದ್​ ಫಾಸಿಲ್​ ಅವರ ಭನ್ವರ್​ ಸಿಂಗ್​ ಹಾಗೂ ಅಲ್ಲು ಅರ್ಜುನ್​ ಅವರ ಪುಷ್ಪಾ ಪಾತ್ರಗಳ ನಡುವಿನ ಮಹಾಕಾವ್ಯವನ್ನೇ ಪ್ರದರ್ಶಿಸಲಿದೆ ಎಂದು ಊಹಿಸಲಾಗಿದೆ. ಮೊದಲ ಭಾಗದ ಕ್ಲೈಮ್ಯಾಕ್ಸ್​ನಲ್ಲಿ ಭನ್ವರ್​ ಸಿಂಗ್​ ಪುಷ್ಪಾ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದು, ಅದರ ಮುಂದುವರಿದ ಅಧ್ಯಾಯ ಎರಡನೇ ಭಾಗದಲ್ಲಿ ಅದ್ಧೂರಿಯಾಗಿ ಮೂಡಿ ಬರಲಿದೆ.

ಅಲ್ಲು ಅರ್ಜುನ್​ ಅವರ ಜನ್ಮದಿನದಂದು ಏಪ್ರಿಲ್​ ತಿಂಗಳಲ್ಲಿ ಚಿತ್ರದ ನಿರ್ಮಾಪಕರು ಸೀಕ್ವೆಲ್​ ನಲ್ಲಿ ಅಲ್ಲು ಅರ್ಜುನ್​ ಅವರ ಫಸ್ಟ್​ ಲುಕ್​ ಹಾಗೂ ಗ್ಲಿಂಪ್ಸ್​ ವಿಡಿಯೋ ಬಿಡುಗಡೆ ಮಾಡಿದ್ದರು. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವಿಡಿಯೋ ದಾಖಲೆಯ ವೀಕ್ಷಣೆಯನ್ನೂ ಕಂಡಿತ್ತು. ಅಲ್ಲು ಅರ್ಜುನ್​ ಅವರು ಹಂಚಿಕೊಂಡಿದ್ದ ಫಸ್ಟ್​ ಲುಕ್​ ಫೋಟೋದಲ್ಲಿ ಪುಷ್ಪಾ ಹೀರೋ ಸೀರೆ ಉಟ್ಟು, ಬಳೆ ತೊಟ್ಟು, ನಿಂಬೆಹಣ್ಣಿನ ಹಾರವನ್ನೂ ಹಾಕಿಕೊಂಡು ಹೆಣ್ಣಿನಂತೆ ಶೃಂಗಾರ ಮಾಡಿಕೊಂಡಿದ್ದ ಹಿಂದೆಂದೂ ಕಾಣಿಸಿಕೊಂಡಿರದ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಪುಷ್ಪಾ ಸಿಗ್ನೇಚರ್​ ಪೋಸ್​ ಒಂದು ಭುಜವನ್ನು ಎತ್ತಿ ನಿಂತಿದ್ದ ಚಿತ್ರಕ್ಕೆ ಫ್ಯಾನ್ಸ್​ ಫಿದಾ ಆಗಿದ್ದರು.

ಪುಷ್ಪಾ ಸಿನಿಮಾಕ್ಕೆ ಬಂಡವಾಳ ಹೂಡಿರುವ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್​ ನೀಡಿರುವ ಮಾಹಿತಿ ಪ್ರಕಾರ, ಪುಷ್ಪ 2: ದಿ ರೂಲ್​ ಸಿನಿಮಾ ಮೊದಲ ಭಾಗಕ್ಕಿಂತ ದೊಡ್ಡ ಬಜೆಟ್, ದೊಡ್ಡ ಆ್ಯಕ್ಷನ್​ ಸೆಟ್​ ತುಣುಕುಗಳು, ದೊಡ್ಡ ತಾರಾಗಣದೊಂದಿಗೆ ದೊಡ್ಡ ಪ್ರಮಾಣದಲ್ಲಿ ಬರಲಿದೆ. ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ನಿಹಾರಿಕಾ ಕೊನಿಡೆಲಾ ಹಾಗೂ ವಿಜಯ್​​ ಸೇತುಪತಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ರೂಮರ್​ಗಳಿವೆ.

ಅಂತರರಾಷ್ಟ್ರೀಯ ಖ್ಯಾತಿಯ ಮಿರೋಸ್ಲಾ ಕುಬಾ ಬ್ರೋಜೆಕ್ ಛಾಯಾಗ್ರಹಣ, ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇನ್ನೂ ಘೋಷಿಸಿಲ್ಲವಾದರೂ, ಪುಷ್ಪ 2: ದಿ ರೂಲ್ 2024ರ ಜನವರಿಯಲ್ಲಿ ಥಿಯೇಟರ್‌ಗಳಲ್ಲಿ ವಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: 'ಪುಷ್ಪಾ ಸಿನಿಮಾದ ಶ್ರೀವಲ್ಲಿ ಪಾತ್ರಕ್ಕೆ ರಶ್ಮಿಕಾಗಿಂತ ನಾನೇ ಹೆಚ್ಚು ಸೂಕ್ತ': ಐಶ್ವರ್ಯಾ ರಾಜೇಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.