ETV Bharat / entertainment

'ಕಾಂತಾರ ಸಿನಿಮಾದಲ್ಲಿ ಪುನೀತ್​ ಅಭಿನಯಿಸಬೇಕಿತ್ತು, ರಿಷಬ್‌ ಹೆಸರು ಸೂಚಿಸಿದ್ದೇ ಅಪ್ಪು' - Puneeth in Kantara

ಕಾಂತಾರ ಸಿನಿಮಾದ ಮುಖ್ಯ ಪಾತ್ರದಲ್ಲಿ ಪುನೀತ್​ ರಾಜ್​ಕುಮಾರ್ ಸರ್ ನಟಿಸಬೇಕಿತ್ತು. ನಾವು ಒಂದು ನಿರ್ದಿಷ್ಟ ಸೀಸನ್‌ನಲ್ಲಿ ಸಿನಿಮಾ ಶೂಟಿಂಗ್ ಮಾಡಬೇಕಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದ ಮುಖ್ಯ ಪಾತ್ರಕ್ಕೆ ನಟ ರಿಷಬ್ ಶೆಟ್ಟಿ ಅವರ ಹೆಸರನ್ನು ಪುನೀತ್ ಸರ್ ಸೂಚಿಸಿದ್ದರು ಎಂಬ ಅಚ್ಚರಿ ಸಂಗತಿಯೊಂದನ್ನು ಕಾರ್ತಿಕ್‌ ಗೌಡ ಬಾಯಿ ಬಿಟ್ಟಿದ್ದಾರೆ.

Puneeth rajkumar was supposed to act in Kantara movie
'ಕಾಂತಾರ ಸಿನಿಮಾದಲ್ಲಿ ಪುನೀತ್​ ಅಭಿನಯಿಸಬೇಕಿತ್ತು, ರಿಷಬ್‌ ಹೆಸರು ಸೂಚಿಸಿದ್ದೇ ಅಪ್ಪು'
author img

By

Published : Sep 20, 2022, 3:06 PM IST

ಹಾಡು ಹಾಗೂ ಟ್ರೈಲರ್​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ ಕಾಂತಾರ. ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಇದೇ ತಿಂಗಳ 30ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಕರಾವಳಿ ಸೊಗಡಿನ ಕಂಬಳ ಕ್ರೀಡೆ ಜೊತೆಗೆ ಊರು ಮತ್ತು ಅರಣ್ಯ ಇಲಾಖೆಯ ಬಗೆಗಿನ ಕಥೆ ಆಧರಿಸಿರುವ ಕಾಂತಾರ ಚಿತ್ರ ತಂಡದಿಂದ ಸುದ್ದಿಯೊಂದು ಹೊರ ಬಿದ್ದಿದೆ. ಕಾಂತಾರ ಸಿನಿಮಾಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಹೀರೋ ಆಗಬೇಕಿತ್ತು ಅನ್ನೋದು ರಿವೀಲ್ ಆಗಿದೆ.

ಕಾಂತಾರ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ಅಡಿ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಈ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ತಿಕ್ ಗೌಡ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ quotation and answer ನಡೆಸಿದ್ದರು.

ಅದರಲ್ಲಿ ಸಾಕಷ್ಟು ಪ್ರೇಕ್ಷಕರು ಕಾಂತಾರ ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದ್ದರು. ಅದರಲ್ಲಿ ಒಂದು ಪ್ರಶ್ನೆ ಬಹಳ ಇಂಟರೆಸ್ಟಿಂಗ್ ಆಗಿತ್ತು. ಒಬ್ಬ ವ್ಯಕ್ತಿ ಕಾಂತಾರ ಸಿನಿಮಾದ ಒಂದು ಕ್ಲಿಪ್ ಆದರೂ ಅಪ್ಪು ಸರ್​ಗೆ ತೋರಿಸಿದ್ದೀರಾ ಅಂತಾ ಕೇಳಿದ್ದಾರೆ. ಆ ಪ್ರಶ್ನೆಗೆ ಕಾರ್ತಿಕ್ ಗೌಡ ಅಚ್ಚರಿ ಉತ್ತರ ನೀಡಿದ್ದಾರೆ.

ಇದು ಯಾರಿಗೂ ಗೊತ್ತಿರದ ಮಾಹಿತಿ. ಕಾಂತಾರ ಸಿನಿಮಾದ ಮುಖ್ಯ ಪಾತ್ರದಲ್ಲಿ ಅಪ್ಪು ಸರ್ ನಟಿಸಬೇಕಿತ್ತು. ನಾವು ಒಂದು ನಿರ್ದಿಷ್ಟ ಸೀಸನ್‌ನಲ್ಲಿ ಸಿನಿಮಾ ಶೂಟಿಂಗ್ ಮಾಡಬೇಕಿತ್ತು. ಆದರೆ, ಡೇಟ್ಸ್ ಸಮಸ್ಯೆಯಿಂದ ಮುಖ್ಯ ಪಾತ್ರಕ್ಕೆ ರಿಷಬ್‌ ಅವರ ಹೆಸರನ್ನು ಪುನೀತ್ ಸರ್ ಸೂಚಿಸಿದ್ದರು ಎಂಬ ಅಚ್ಚರಿ ಸಂಗತಿಯೊಂದಯನ್ನ ಕಾರ್ತಿಕ್‌ ಗೌಡ ಬಾಯಿ ಬಿಟ್ಟಿದ್ದಾರೆ.

ಸದ್ಯ ಈ ವಿಷಯ ಸ್ಯಾಂಡಲ್​​ವುಡ್​ನಲ್ಲಿ ಟಾಕ್ ಆಪ್ ದಿ ನ್ಯೂಸ್ ಆಗಿದೆ. ಪುನೀತ್ ರಾಜ್​ಕುಮಾರ್ ಅಭಿಮಾನಿಗಳು ಖುಷಿ ಜೊತೆಗೆ ಬೇಸರ ಕೂಡ ಮಾಡಿಕೊಳ್ಳುತ್ತಿದ್ದಾರೆ. ಪುನೀತ್ ರಾಜ್​ಕುಮಾರ್ ಇರಬೇಕಿತ್ತು ಅಂತಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕನ್ನಡ, ತೆಲುಗಿನಲ್ಲಿ ರೆಡಿಯಾಗ್ತಿದೆ ಡಾಲಿ ಧನಂಜಯ್ ಅಭಿನಯದ 26ನೇ ಸಿನಿಮಾ

ಇದೊಂದು ಆ್ಯಕ್ಷನ್‌ ಡ್ರಾಮಾ ಸಿನಿಮಾವಾಗಿದ್ದು, ಫ್ಯಾಂಟಸಿ ಕೂಡ ಇರಲಿದೆ. ಕರಾವಳಿ ಸೊಗಡನ್ನು ಈ ಸಿನಿಮಾದ ಮೂಲಕ ತೋರಿಸಲು ನಿರ್ದೇಶಕ ರಿಷಬ್ ಮುಂದಾಗಿದ್ದಾರೆ. ದೇಶಾದ್ಯಂತ ರಿಲೀಸ್ ಮಾಡಲು ಹೊಂಬಾಳೆ ಫಿಲ್ಮ್ ಸಂಸ್ಥೆ ಪ್ಲ್ಯಾನ್ ಮಾಡಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ ಜೋಡಿಯಾಗಿದ್ದು, ಬಹುಭಾಷೆ ನಟ ಕಿಶೋರ್ ಈ ಚಿತ್ರದಲ್ಲಿ ಅರಣ್ಯ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗೆ ಸಾಕಷ್ಟು ವಿಶೇಷತೆಗಳಿರೋ ಕಾಂತಾರ ಸಿನಿಮಾ ಸಹಜವಾಗಿ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.