ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿ ಒಂದು ವರ್ಷ ಸಮೀಪಿಸುತ್ತಿದೆ. ಆದ್ರೆ ಅಭಿಮಾನಿಗಳ ಮನದ ನೋವು ಕಡಿಮೆ ಆಗಿಲ್ಲ. ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಜನರು ದಿ. ಪುನೀತ್ ರಾಜ್ಕುಮಾರ್ ಅವರಿಗೆ ನಮನ ಸಲ್ಲಿಸುತ್ತಲೇ ಇದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ಕಲಾವಿದರು ಕೂಡ ಅಪ್ಪು ಅವರನ್ನು ಸ್ಮರಣೆ ಮಾಡುತ್ತಿದ್ದಾರೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾದಲ್ಲಿ ಬಲ್ಲಾಳದೇವ ಆಗಿ ಅಬ್ಬರಿಸಿದ್ದ ನಟ ರಾಣಾ ದಗ್ಗುಬಾಟಿ ಕಚೇರಿಯಲ್ಲಿ ಪವರ್ ಸ್ಟಾರ್ ಪುತ್ಥಳಿ ಇದೆ. ಪರಭಾಷೆಯ ಅನೇಕ ಸೆಲೆಬ್ರಿಟಿಗಳೊಂದಿಗೆ ಪುನೀತ್ ರಾಜ್ಕುಮಾರ್ ಉತ್ತಮ ಸ್ನೇಹ ಸಂಬಂಧ ಹೊಂದಿದ್ದರು. 'ಕರ್ನಾಟಕ ರತ್ನ'ನ ವ್ಯಕ್ತಿಕ್ತಕ್ಕೆ ಸ್ಟಾರ್ ನಟರೂ ಕೂಡ ಮನಸೋತಿದ್ದರು ಎಂಬುದಕ್ಕೆ ಇದೇ ಸಾಕ್ಷಿ.
-
The most beautiful memory came into my office today. Miss you my friend. #PuneethRajkumar pic.twitter.com/V8UghfeuX3
— Rana Daggubati (@RanaDaggubati) October 3, 2022 " class="align-text-top noRightClick twitterSection" data="
">The most beautiful memory came into my office today. Miss you my friend. #PuneethRajkumar pic.twitter.com/V8UghfeuX3
— Rana Daggubati (@RanaDaggubati) October 3, 2022The most beautiful memory came into my office today. Miss you my friend. #PuneethRajkumar pic.twitter.com/V8UghfeuX3
— Rana Daggubati (@RanaDaggubati) October 3, 2022
ಇದನ್ನೂ ಓದಿ: ರಾಘವನ ಪಾತ್ರ ಮಾಡಲು ನನಗೆ ಭಯವಾಗಿತ್ತು.. ಪ್ಯಾನ್ ಇಂಡಿಯಾ ನಟ ಪ್ರಭಾಸ್
ತಮ್ಮ ಕಚೇರಿಯಲ್ಲಿ ಪುನೀತ್ ಪುತ್ಥಳಿ ಇದೆ ಎಂಬುದನ್ನು ಸ್ವತಃ ನಟ ರಾಣಾ ದಗ್ಗುಬಾಟಿ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ. ‘ತುಂಬ ಸುಂದರವಾದ ಸ್ಮರಣಿಕೆ ಇಂದು ನನ್ನ ಕಚೇರಿಗೆ ಬಂತು. ಮಿಸ್ ಯೂ ಮೈ ಫ್ರೆಂಡ್ ಪುನೀತ್ ರಾಜ್ಕುಮಾರ್’ ಎಂದು ರಾಣಾ ದಗ್ಗುಬಾಟಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ರಾಣಾ ದಗ್ಗುಬಾಟಿ ಅಲ್ಲದೇ ಅಪ್ಪು ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.