ETV Bharat / entertainment

'ಪುನೀತ್ ಪರ್ವ' ನೋಡುತ್ತಲೇ ಹೃದಯಾಘಾತಕ್ಕೊಳಗಾಗಿ ಅಪ್ಪು ಅಭಿಮಾನಿ ಕೊನೆಯುಸಿರು! - puneeth parva

ಟಿವಿಯಲ್ಲಿ 'ಪುನೀತ್ ಪರ್ವ' ಕಾರ್ಯಕ್ರಮ ವೀಕ್ಷಿಸುತ್ತಿದ್ದ ಅಪ್ಪು ಅಭಿಮಾನಿ ಗಿರಿರಾಜ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

puneeth rajkumar fan died by heart attack
ಅಪ್ಪು ಅಭಿಮಾನಿ ಸಾವು
author img

By

Published : Oct 22, 2022, 11:45 AM IST

Updated : Oct 22, 2022, 12:08 PM IST

ಬೆಂಗಳೂರು: ಶುಕ್ರವಾರ ಸಂಜೆ ಅರಮನೆ ಮೈದಾನದಲ್ಲಿ ಪುನೀತ ಪರ್ವ ಹೆಸರಿನಲ್ಲಿ ನಡೆದ ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಉಳಿದ ಕೋಟ್ಯಂತರ ಅಭಿಮಾನಿಗಳು ತಾವಿದ್ದ ಜಾಗದಿಂದಲೇ ಟಿವಿ, ಮೊಬೈಲ್​ ಮೂಲಕ ಲೈವ್​ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಹೀಗೆ 'ಪುನೀತ್ ಪರ್ವ' ಕಾರ್ಯಕ್ರಮ ವೀಕ್ಷಿಸುತ್ತಿದ್ದಂತೆ ಓರ್ವ ಅಭಿಮಾನಿ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.

ಅಪ್ಪು ಅಭಿಮಾನಿ ಸಾವು

ಮಲ್ಲೇಶ್ವರನಲ್ಲಿರುವ ಅಪ್ಪು ಅಭಿಮಾನಿ ಗಿರಿರಾಜ್ ಮನೆಯಲ್ಲಿ ಟಿವಿ ಮೂಲಕ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ನಿತ್ಯ ಅಪ್ಪು ಫೋಟೋಗೆ ಪೂಜೆ ಮಾಡ್ತಿದ್ದ ಗಿರಿರಾಜ್ ನಿನ್ನೆ ಪುನೀತ್ ಪರ್ವ ಕಾರ್ಯಕ್ರಮ ‌ನೋಡಿ ಬೇಸಗೊಂಡಿದ್ದರು. ''ಛೇ ಇಂಥ ಮನುಷ್ಯ ಹೋದರಲ್ಲಾ'' ಎಂದು ಪದೇ ಪದೆ ಹೇಳಿ ಬೇಸರ ಪಟ್ಟಿದ್ದರು. ರಾತ್ರಿ ಸುಮಾರು‌ 10:30ರ ಹೊತ್ತಿಗೆ ಬಾತ್ ರೂಂಗೆ ಹೋದವರು ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಅಪ್ಪು ಅವರನ್ನ ಇನ್ಫೋಸಿಸ್ ಮುಖ್ಯಸ್ಥೆ ಏನಂತಾ ಕರೆಯುತ್ತಿದ್ದರು ಗೊತ್ತಾ?

ಕಳೆದ ವರ್ಷ ಪುನೀತ್​ ರಾಜ್​ಕುಮಾರ್​​ ಇಹಲೋಕ ತ್ಯಜಿಸಿದ ವೇಳೆ ಗಿರಿರಾಜ್‌ ಅಪ್ಪು ಅಗಲಿಕೆಯಿಂದ ತುಂಬಾನೇ‌ ಕುಗ್ಗಿ ಹೋಗಿದ್ದರಂತೆ. ಮನೆಯಲ್ಲಿ ಅಪ್ಪು ಫೋಟೋ ಇಟ್ಟು ಪೂಜೆ ಮಾಡುತ್ತಿದ್ದರು. ಪುನೀತ್​ ಅವರ ಒಂದು ವಿಡಿಯೋ ನೋಡಿ ನನಗೂ ಅಪ್ಪು ರೀತಿ ಊಟ ಮಾಡಿಸು ಅಂತಾ ಅಮ್ಮನಲ್ಲಿ ಕೇಳಿ ಊಟ ಮಾಡಿಸಿಕೊಂಡಿದ್ದರಂತೆ.

ಬ್ಯಾಂಕ್​ವೊಂದರಲ್ಲಿ ಕೆಲಸ‌‌ ಮಾಡುತ್ತಿದ್ದ ಗಿರಿರಾಜ್ (29) ಕಿರಿ ವಯಸ್ಸಿನಲ್ಲೇ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ‌ ಮುಗಿಲು ಮುಟ್ಟಿದೆ. ಕುಸಿದು ಬಿದ್ದ ಮಗನನ್ನು ಮಲ್ಲೇಶ್ವರ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ, ಮಗ ಮೃತಪಟ್ಟಿದ್ದಾನೆಂದು ವೈದ್ಯರು ತಿಳಿಸಿದರೆಂದು ಮೃತನ ತಂದೆ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಪ್ಪು ಅವರದ್ದು ನಗುವಿನ ಮುಖ.. ಪುನೀತ್​ ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ: ಬಾಲಿವುಡ್​ ನಟ ಅಮಿತಾಬ್​ ಬಚ್ಚನ್​

Last Updated : Oct 22, 2022, 12:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.