ETV Bharat / entertainment

Project K Movie: 'ಪ್ರಾಜೆಕ್ಟ್ ಕೆ' ಅಂದ್ರೆ ಏನು? - ಪ್ರಭಾಸ್

ಪ್ರಾಜೆಕ್ಟ್ ಕೆ ಅಂದ್ರೆ ಏನೆಂಬುದನ್ನು ಚಿತ್ರತಂಡ ಇಂದು ಸಂಜೆ ಅನಾವರಣಗೊಳಿಸಲಿದೆ.

Project K movie updates
ಪ್ರಾಜೆಕ್ಟ್ ಕೆ ಅಪ್​ಡೇಟ್ಸ್
author img

By

Published : Jul 8, 2023, 5:35 PM IST

ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ, ನಾಗ್ ಅಶ್ವಿನ್ ನಿರ್ದೇಶನದ ವೈಜ್ಞಾನಿಕ, ಆ್ಯಕ್ಷನ್ ಚಿತ್ರ 'ಪ್ರಾಜೆಕ್ಟ್ ಕೆ' ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ. ಈ ಸಿನಿಮಾ ಭಾರತದಲ್ಲಿ ಈವರೆಗೆ ನಿರ್ಮಾಣವಾದ ಪ್ರಾಜೆಕ್ಟ್​ಗಳ ಪೈಕಿ ಅತ್ಯಂತ ದುಬಾರಿ ಯೋಜನೆ ಎಂದು ಹೇಳಲಾಗುತ್ತಿದೆ.

'ಪ್ರಾಜೆಕ್ಟ್ ಕೆ' ಅಂದ್ರೆ ಏನು? ಸೂಪರ್​ ಸ್ಟಾರ್ ಕಮಲ್ ಹಾಸನ್ ಅವರು ಚಿತ್ರದ ಭಾಗವಾಗಲಿದ್ದಾರೆ ಎಂದು ಚಿತ್ರ ತಯಾರಕರು ಘೋಷಿಸಿದಾಗಿನಿಂದ ಪ್ರಾಜೆಕ್ಟ್ ಕೆ ಸುತ್ತಲಿನ ಕುತೂಹಲ ದುಪ್ಪಟ್ಟಾಯಿತು. ಹಿರಿಯ, ಪ್ರತಿಭಾನ್ವಿತ, ಬಹುಬೇಡಿಕೆ ನಟರಾದ ಅಮಿತಾಭ್​ ಬಚ್ಚನ್ ಮತ್ತು ಕಮಲ್ ಹಾಸನ್ ಅವರು ಲಾಂಗ್​ ಬ್ರೇಕ್​ ಬಳಿಕ ಮತ್ತೆ ಒಂದಾಗುತ್ತಿದ್ದಾರೆ ಎಂಬುದನ್ನರಿತ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು. ಚಿತ್ರದ ಬಗ್ಗೆ ವಿವರಗಳನ್ನು ಬಿಟ್ಟುಕೊಡದ ನಿರ್ಮಾಪಕರು ಈಗ 'ಪ್ರಾಜೆಕ್ಟ್ ಕೆ' ಅಂದ್ರೆ ಏನೆಂದು ಬಹಿರಂಗಪಡಿಸಲು ಸಿದ್ಧರಾಗಿದ್ದಾರೆ.

ಸಂಜೆ 7:10ಕ್ಕೆ ಬಹಿರಂಗ: ಸಿನಿಮಾ ಪ್ರೊಡಕ್ಷನ್ ಹೌಸ್ ವೈಜಯಂತಿ ಮೂವೀಸ್ ಇಂದು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದೆ. '' ProjectK ಎಂದರೇನು? ಜಗತ್ತು ಈ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿದೆ, ಹತ್ತಿರ ಬನ್ನಿ, ಇಂದು ಸಂಜೆ 7:10ಕ್ಕೆ " ಎಂದು ಬರೆದುಕೊಂಡಿದ್ದಾರೆ. ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಮುಂಬರುವ ಈ ಚಿತ್ರದ ಅಪ್​ಡೇಟ್ಸ್ ಅಭಿಮಾನಿಗಳ ಕುತೂಹಲ ಹೆಚ್ಚಳಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು: ಈ ಉತ್ಸಾಹದ ನಡುವೆ ಮತ್ತೊಂದು ಗಮನಾರ್ಹ ವಿಷಯವೇನು ಗೊತ್ತೇ?. ಪ್ರಾಜೆಕ್ಟ್ ಕೆ ಚಿತ್ರತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಿದೆ. ಜುಲೈ 19 ರಂದು ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಈವೆಂಟ್‌ನಲ್ಲಿ (San Diego Comic-Con event) ಪ್ರಾಜೆಕ್ಟ್ ಕೆ ಯ ಫಸ್ಟ್ ಗ್ಲಿಂಪ್ಸ್ ಅನ್ನು ಅನಾವರಣಗೊಳಿಸಲಿದ್ದಾರೆ. ಪ್ರಾಜೆಕ್ಟ್ ಕೆ ತಂಡವು 'ಇದು ಪ್ರಾಜೆಕ್ಟ್ ಕೆ: ಭಾರತದ ಮೈಥೋ-ಸೈನ್ಸ್-ಫಿಕ್ಷನ್ ಎಪಿಕ್‌ನ ಮೊದಲ ನೋಟ' ಎಂಬ ಶೀರ್ಷಿಕೆಯ ಕಾರ್ಯಕ್ರಮ ಆಯೋಜಿಸಲಿದೆ. ಚಿತ್ರದ ಪೂರ್ಣ ಶೀರ್ಷಿಕೆ, ಟೀಸರ್ ಮತ್ತು ಬಿಡುಗಡೆ ದಿನಾಂಕವನ್ನು ಈ ಗ್ರ್ಯಾಂಡ್ ಈವೆಂಟ್‌ನಲ್ಲಿ ಅಧಿಕೃತವಾಗಿ ಘೋಷಿಸಲಾಗುತ್ತದೆ. ಅಮೆರಿಕದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇತ್ತೀಚಿನ ವರದಿಗಳ ಪ್ರಕಾರ ನಾಯಕ ನಟನಿಗೆ ಪ್ರತಿಸ್ಪರ್ಧಿಯಾಗಿ ನಟಿಸುತ್ತಿರುವ ಕಮಲ್ ಹಾಸನ್ ಅವರೂ ಕೂಡ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.

ಇದನ್ನೂ ಓದಿ: Rishab Shetty birthday Photos: 'ಸಾಯುವವರೆಗೂ ಸಿನಿಮಾಗಳ ಮೂಲಕ ನಿಮ್ಮ ಋಣ ತೀರುಸುತ್ತೇನೆ' - ರಿಷಬ್ ಶೆಟ್ಟಿ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಪ್ರಾಜೆಕ್ಟ್​ ಕೆ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದಾರೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್​, ಕಮಲ್​ ಹಾಸನ್, ದಿಶಾ ಪಟಾನಿ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಅವರಿಗಿದು ಚೊಚ್ಚಲ ತೆಲುಗು ಚಿತ್ರ. ಈ ಸಿನಿಮಾಗಾಗಿ ತಾರೆಯರು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ? ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

ಇದನ್ನೂ ಓದಿ: Watch Video: ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ರಿಷಬ್ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.