ಬಾಲಿವುಡ್ ಐಕಾನ್ ಅಮಿತಾಭ್ ಬಚ್ಚನ್ ಮತ್ತು ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಪ್ರೊಜೆಕ್ಟ್ ಕೆ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಮುಂಬರುವ ಮೋಸ್ಟ್ ಎಕ್ಸ್ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ 'ಪ್ರಾಜೆಕ್ಟ್ ಕೆ' ನಿರ್ಮಾಪಕರು ಮಹಾಶಿವರಾತ್ರಿಯ ಈ ಸಂದರ್ಭದಲ್ಲಿ ತಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿರುವ ವೈಜಯಂತಿ ಫಿಲ್ಮ್ಸ್ 12-1-24ಕ್ಕೆ ಪ್ರೊಜೆಕ್ಟ್ ಕೆ ತೆರೆಕಾಣಲಿದೆ ಎಂದು ಬರೆದಿದ್ದಾರೆ. ಜೊತೆಗೆ ಮಹಾಶಿವರಾತ್ರಿಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಹೊರಬಂದ ಕೆಲವೇ ಕ್ಷಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ. ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಿ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.
ಚಿತ್ರ ನಿರ್ಮಾಪಕರು ಜನವರಿ 9ರಂದು ಚಿತ್ರದ ಪೋಸ್ಟರ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದರು. ಒಂದರ ನಂತರ ಒಂದರಂತೆ ನಿಗೂಢ ಪೋಸ್ಟರ್‌ಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಪೋಸ್ಟರ್ ರಿಲೀಸ್ಗೂ ಮುನ್ನ ನಾಯಕ ನಟಿ ದೀಪಿಕಾ ಪಡುಕೋಣೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಫಸ್ಟ್ ಲುಕ್ ಅನ್ನು ಅನಾವರಣಗೊಳಿದ್ದರು 'ಎ ಹೋಪ್ ಇನ್ ದಿ ಡಾರ್ಕ್' ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಂದ ದೀಪಿಕಾರ ಮೊದಲ ನೋಟ ಸೋಶಿಯಲ್ ಮೀಡಿಯಾದ ಬಿಸಿ ಏರಿಸಿತ್ತು.
- " class="align-text-top noRightClick twitterSection" data="
">
ಕೆಲ ದಿನಗಳ ಹಿಂದೆ ಚಿತ್ರ ತಯಾರಕರು ಪ್ರಭಾಸ್ ಮತ್ತು ಅಮಿತಾಭ್ ಬಚ್ಚನ್ ಅವರ ಪಾತ್ರಗಳ ಪೋಸ್ಟರ್‌ಗಳನ್ನು ಅನಾವರಣಗೊಳಿಸಿದ್ದರು. ಪ್ರತೀ ಪೋಸ್ಟರ್ಗಳು ನಾಗ್ ಅಶ್ವಿನ್ ನಿರ್ದೇಶನದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದೆ ತನ್ನದೇ ಕಥೆಯನ್ನು ಹೇಳಿದೆ. ಉದಾಹರಣೆಗೆ ನಟ ಪ್ರಭಾಸ್ ಅವರ ಪೋಸ್ಟರ್, "ಹೀರೋಗಳು ಹುಟ್ಟುವುದಿಲ್ಲ, ಅವರು ಉದಯಿಸುತ್ತಾರೆ" ಎಂಬ ಕ್ಯಾಪ್ಷನ್ನೊಂದಿಗೆ ಬಂದಿತ್ತು. ಅಮಿತಾಬ್ ಬಚ್ಚನ್ ಅವರ ಪೋಸ್ಟರ್‌ನಲ್ಲಿ "ಲೆಜೆಂಡ್ಸ್ಗಳು ಅಮರ'' ಎಂಬ ಟ್ಯಾಗ್ಲೈನ್ ಇತ್ತು.
ಇದನ್ನೂ ಓದಿ: ಸ್ಮೃತಿ ಇರಾನಿ ಪುತ್ರಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಶಾರುಖ್ ಖಾನ್
ಪ್ರಾಜೆಕ್ಟ್ ಕೆ ನಾಗ್ ಅಶ್ವಿನ್ ನಿರ್ದೇಶನದ ವೈಜ್ಞಾನಿಕ ಚಿತ್ರವಾಗಿದ್ದು, ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ದಿಶಾ ಪಟಾನಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಏಕಕಾಲಕ್ಕೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರಿಸಲಾಗುತ್ತಿದೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತ ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಪೌರಾಣಿಕ ಹಾಗೂ ಫ್ಯಾಂಟಸಿ ಕಥೆಯನ್ನು ಒಳಗೊಂಡಿರಲಿದೆ ಎಂಬ ಮಾಹಿತಿ ಇದೆ. ಬಾಲಿವುಡ್ನ ಇಬ್ಬರು ಬಹು ಬೇಡಿಕೆ, ಪ್ರತಿಭಾನ್ವಿತ ಕಲಾವಿದರೊಂದಿಗೆ ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಆದಿಯೋಗಿ ಪ್ರತಿಮೆಯ ದರ್ಶನ ಪಡೆದ ಸೂಪರ್ ಸ್ಟಾರ್ ರಜನಿಕಾಂತ್
ನಟ ಅಮಿತಾಭ್ ಬಚ್ಚನ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ, ನಾಗಾರ್ಜುನ ನಟನೆಯ ಮನಂ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. ಆದರೆ ದೀಪಿಕಾ ಪಡುಕೋಣೆ ಅವರಿಗಿದು ಮೊದಲ ತೆಲುಗು ಸಿನಿಮಾ. ಈ ಮೊದಲು ಕೇವಲ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.