ETV Bharat / entertainment

110 ದಿನ ಮಗಳು ಆಸ್ಪತ್ರೆಯಲ್ಲಿದ್ದ ದಿನ ನೆನಪಿಸಿಕೊಂಡ ಪ್ರಿಯಾಂಕಾ ಚೋಪ್ರಾ - ಅಮ್ಮನಾಗಿ ಬಡ್ತಿ ಪಡೆದಿರುವ ಪ್ರಿಯಾಂಕಾ

ಅವಧಿ ಪೂರ್ವವಾಗಿ ಮಗಳು ಮಾಲ್ತಿ ಮೇರಿ ಹುಟ್ಟಿದಾಗ, ನಿಕ್​ ಜೋನಸ್​ ಈ ಕಠಿಣ ಸಂದರ್ಭದಲ್ಲಿ ಬೆಂಬಲವಾಗಿ ನಿಂತು ಸಹಾಯ ಮಾಡಿದರು ಎಂದು ನಟಿ ಪ್ರಿಯಾಂಕಾ ಚೋಪ್ರಾ ತಿಳಿಸಿದ್ದಾರೆ.

Priyanka Chopra recalls daughter's 110 days in hospital

author img

By

Published : Apr 28, 2023, 4:41 PM IST

Updated : Apr 30, 2023, 7:46 AM IST

ಬೆಂಗಳೂರು: ಜಾಗತಿಕ ಐಕಾನ್ ಆಗಿರುವ ಪ್ರಿಯಾಂಕಾ ಚೋಪ್ರಾ ಇದೀಗ ಮಾಲ್ತಿ ಮೇರಿ ತಾಯಿ ಕೂಡ. ಕಳೆದ ವರ್ಷ ಅಮ್ಮನಾಗಿ ಬಡ್ತಿ ಪಡೆದಿರುವ ಪ್ರಿಯಾಂಕಾ ಮಗಳ ಜನ್ಮದ ವೇಳೆ ಉಂಟಾಗಿರುವ ಒತ್ತಡದ ಕ್ಷಣಗಳ ಬಗ್ಗೆ ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ. ಅವಧಿ ಪೂರ್ವವಾಗಿ ಜನಿಸಿದ ಮಾಲ್ತಿ ಮೇರಿ ಉಳಿಸಿಕೊಳ್ಳಲು ನಡೆಸಿದ ಹೋರಾಟ ಕುರಿತು ತಿಳಿಸಿದ್ದಾರೆ. ಮಗು ಜನಿಸಿದಾಗ ಅವಳ ಉಳಿವಿಗೆ 100 ದಿನಗಳ ಕಾಲ ನವಜಾತ ಶಿಶುಗಳ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಅನುಭವಿಸಿದ ಕಷ್ಟದ ವೇಳೆ ಗಂಡ ನಿಕ್​ ಜೋನಸ್​ ಬೆಂಬಲ ಕುರಿತು ಹಂಚಿಕೊಂಡಿದ್ದಾರೆ.

ಟಿವಿ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಪ್ರಿಯಾಂಕಾ, ಮಾಲ್ತಿ ಮೇರಿ ಹುಟ್ಟಿದಾಗ ಅವಳ ಪಕ್ಕದಲ್ಲಿ ನಾನು ಅಥವಾ ನಿಕ್​ ಅನ್ನು ಸಮೀಪದಲ್ಲೇ ಇರುತ್ತಿದ್ದೆವು. ಮಗು ಹುಟ್ಟಿ ಮನೆಗೆ ಬಂದಾಗ ಕೆಲವು ದಿನಗಳ ಸಮಯದಲ್ಲಿ ಬಹುತೇಕ ರಾತ್ರಿಗಳಲ್ಲಿ ನಾನು ಸರಿಯಾಗಿ ನಿದ್ದೆಯನ್ನೇ ಮಾಡಲಿಲ್ಲ. ಪದೇ ಪದೆ ಹೋಗಿ ಮಗುವಿನ ಹೃದಯ ಬಡಿತ ಪರೀಕ್ಷಿಸುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ಮಗು ಹುಟ್ಟಿದ ಸಮಯಲ್ಲಿ ಗಂಡ ನಿಕ್​ ಜೋನಸ್​ ಬೆಂಬಲದ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಪ್ರಿಯಾಂಕಾ, ಮಗು ಜನನದ ವೇಳೆ ಆತ ವರ್ತಿಸಿದ ರೀತಿ ಗಂಡನ ಶಕ್ತಿಗೆ ಒಂದು ಉದಾಹರಣೆಯಾಗಿದೆ ಎಂದು ಬಣ್ಣಿಸಿದ್ದಾರೆ. ಮಗಳು ಹುಟ್ಟಿದಳು ಎಂದು ಕೇಳಿದಾಗ ಹೇಗೆ ನಾವು ಪ್ರತಿಕ್ರಿಯಿಸಬಹುದು ಎಂಬುದು ನನಗೆ ಗೊತ್ತಿರಲಿಲ್ಲ. ನನಗೆ ಅದರ ಬಗ್ಗೆ ಏನು ಐಡಿಯಾ ಇಲ್ಲದೇ ಹೋದಾಗ ಏನು ಮಾಡಲಿ ನೀವೇ ಹೇಳಿ ಎಂದರು. ಈ ವೇಳೆ ಇಬ್ಬರೂ ನಾವು ಆಸ್ಪತ್ರೆಗೆ ಕಾರು ಚಲಾಯಿಸಿಕೊಂಡು ಮುನ್ನಡೆದವು. ಆಕೆ ಹುಟ್ಟಿದಾಗಿನಿಂದ ನಮ್ಮಿಬ್ಬರಲ್ಲಿ ಯಾರನ್ನಾದರೂ ಒಬ್ಬರನ್ನು ಆಕೆ ನೋಡುತ್ತಲೇ ಇದ್ದಾಳೆ. ಯಾವಾಗಲೂ ನೋಡುತ್ತಲೇ ಇರುತ್ತಾಳೆ ಎಂದರು.

ಮಗು ಸರಿ ಸುಮಾರು 110 ದಿನ ಆಸ್ಪತ್ರೆಯಲ್ಲಿ ಇತ್ತು. ಇದು ನಮ್ಮ ಪರೀಕ್ಷೆಯಲ್ಲ, ಆಕೆಯ ಪರೀಕ್ಷೆ ಆಗಿತ್ತು. ನಾವು ಭಯಪಡದೇ, ದುರ್ಬಲಗೊಳ್ಳದೇ ಇರುವಷ್ಟು ಐಷಾರಾಮಿ ಹೊಂದಿಲ್ಲ ಎಂಬುದನ್ನು ಅರಿತೆ. ಆಕೆ ದುರ್ಬಲವಾಗಿದ್ದಳು ಎಂದು ತಿಳಿಸಿದ್ದಾರೆ. ಕಳೆದ ವರ್ಷ ಜನಿಸಿದ ಮಾಲ್ತಿ ಮೇರಿಯನ್ನು ಇತ್ತೀಚಿಗೆ ನಟಿ ಪ್ರಿಯಾಂಕಾ ಭಾರತಕ್ಕೂ ಕರೆ ತಂದಿದ್ದರು. ಮುಂಬೈನಲ್ಲಿ ನೀತ ಮುಖೇಶ್​ ಅಂಬಾನಿ ಕಲ್ಚರ್​ ಸೆಂಟರ್​ನಲ್ಲಿ ನಡೆದ ಕಾರ್ಯಕ್ರಮಕ್ಕೆ ಗಂಡ ಮಗುವಿನ ಸಮೇತ ಆಕೆ ಭಾರತಕ್ಕೆ ಆಗಮಿಸಿದ್ದರು. ಇದಾದ ಬಳಿಕ ತಮ್ಮ ಸಿಟಾಡೆಲ್​ ಪ್ರಚಾರ ಹಿನ್ನೆಲೆ ಆಕೆ ಮತ್ತೆ ಹಿಂದಿರುಗಿದಳು. ಇನ್ನು ಸಾಮಾಜಿಕ ಜಾಲತಾಣ ಸೇರಿದಂತೆ ಮಗಳ ಫೋಟೋಗಳನ್ನು ಆಗ್ಗಿಂದಾಗೆ ನಟಿ ಪ್ರಿಯಾಂಕಾ ಪೋಸ್ಟ್​ ಮಾಡುತ್ತಿರುತ್ತಾರೆ. ಅಲ್ಲದೇ, ಮಗಳನ್ನು ಕೂಡ ಅನೇಕ ಸಾರ್ವಜನಿಕ ಸಮಾರಂಭಗಳಲ್ಲಿ ಕರೆತರುತ್ತಿರುತ್ತಾರೆ.

ನಟಿ ಪ್ರಿಯಾಂಕಾ ತಮ್ಮ 30ನೇ ವಯಸ್ಸಿನಲ್ಲೇ ತಾಯಿಯ ಸಲಹೆಯಂತೆ ತಮ್ಮ ಅಂಡಾಣುವನ್ನು ಸಂರಕ್ಷಿಸಿಟ್ಟಿದ್ದರು. ಇದರಿಂದಾಗಿ ಬಾಡಿಗೆ ತಾಯ್ತನದ ಮೂಲಕ ಅವರು ಮಾಲ್ತಿ ಮೇರಿಯ ತಾಯಿಯಾಗಿದ್ದಾರೆ.

ಇದನ್ನೂ ಓದಿ: ಮುದ್ದು ಮಗಳೊಂದಿಗೆ ಮಕ್ಕಳಾದ ಸ್ಟಾರ್ ಕಪಲ್: ಪ್ರಿಯಾಂಕಾ ಚೋಪ್ರಾ ಫ್ಯಾಮಿಲಿ ಫೋಟೋ

Last Updated : Apr 30, 2023, 7:46 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.