ETV Bharat / entertainment

ಮದುವೆಗೇಕೆ ಆಹ್ವಾನಿಸಲಿಲ್ಲ? ಕರಣ್​ ಜೋಹರ್ ಪ್ರಶ್ನೆಗೆ ಪ್ರಿಯಾಂಕಾ ಚೋಪ್ರಾ ಉತ್ತರ ಹೀಗಿತ್ತು! - ಪ್ರಿಯಾಂಕಾ ಕರಣ್ ಫೈಟ್​

ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಸೀಸನ್ 6ರ ವಿಡಿಯೋ ಕ್ಲಿಪ್ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪ್ರಿಯಾಂಕಾ ಚೋಪ್ರಾ ಮತ್ತು ಕರಣ್ ಜೋಹರ್ ಸಂಭಾಷಣೆ ಸಖತ್​ ಸದ್ದು ಮಾಡುತ್ತಿದೆ.

Priyanka Chopra Karan Johar
ಪ್ರಿಯಾಂಕಾ ಚೋಪ್ರಾ ಕರಣ್ ಜೋಹರ್
author img

By

Published : May 30, 2023, 6:45 PM IST

ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಅವರು ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್‌ ಬಗ್ಗೆ ಮಾತನಾಡಿ ಸಖತ್​ ಸುದ್ದಿಯಾಗಿದ್ದರು. ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವಗಳ ಬಗ್ಗೆ ಸಂದರ್ಶನವೊಂದರಲ್ಲಿ ಸಾಕಷ್ಟು ಹಂಚಿಕೊಂಡಿದ್ದರು. ಅವರ ಹೇಳಿಕೆಗಳು ಸಾಕಷ್ಟು ಸಂಚಲನ ಸೃಷ್ಟಿಸಿತ್ತು.

ಸದ್ಯ ಚಲನಚಿತ್ರ ನಿರ್ಮಾಪಕ, ನಿರೂಪಕ ಕರಣ್ ಜೋಹರ್ ಅವರ ಚಾಟ್ ಶೋ 'ಕಾಫಿ ವಿತ್ ಕರಣ್' ಸೀಸನ್ 6ರಲ್ಲಿ ಪ್ರಿಯಾಂಕಾ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋ ಕ್ಲಿಪ್‌ನಲ್ಲಿ, ಕರಣ್​​​ ಜೋಹರ್​, ಮದುವೆಗೆ ಆಹ್ವಾನಿಸದ ಬಗ್ಗೆ ಪ್ರಿಯಾಂಕಾರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ ಕೊಟ್ಟ ಉತ್ತರ ನೆಟ್ಟಿಗರ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, 2018ರಲ್ಲಿ ಅಮೆರಿಕನ್​ ಗಾಯಕ ನಿಕ್​ ಜೋನಾಸ್​ ಜೊತೆ ಮದುವೆಯಾದ ಬಗ್ಗೆ ನಟಿ ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದಾರೆ. ತನ್ನ ಹಾಗೂ ನಿಕ್ ಅವರ ಸಂಬಂಧಿಕರು ಮತ್ತು ಸ್ನೇಹಿತರಿಗೆ ಆಹ್ವಾನದ ಸಂಖ್ಯೆಯನ್ನು ಏಕೆ ಸೀಮಿತಗೊಳಿಸಲು ನಿರ್ಧರಿಸಿದೆ ಎಂಬ ಬಗ್ಗೆ ಅವರು ವಿವರಿಸಿದ್ದಾರೆ. "ನಮ್ಮ ಮದುವೆಯು ತುಂಬಾ ಮೋಜಿನ ಮದುವೆಯಾಗಿತ್ತು. ಏಕೆಂದರೆ ಅದು ಕೇವಲ ಕುಟುಂಬಸ್ಥರ ನಡುವೆ ನಡೆಯಿತು" ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ಕರಣ್ ಅವರು ನಟಿಯ ಮಾತಿಗೆ ಅಡ್ಡಿಪಡಿಸಿ ಪ್ರಶ್ನಿಸಿದರು. "ನೀವು ನಮ್ಮಲ್ಲಿ (ಬಾಲಿವುಡ್​) ಯಾರನ್ನೂ ಕರೆಯಲಿಲ್ಲ" ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಪ್ರಿಯಾಂಕಾ ಚೋಪ್ರಾ, "ನಿಮ್ಮ ಬಹಳಷ್ಟು ಕೆಲಸಗಳಿಗೆ / ಈವೆಂಟ್​ಗಳಿಗೆ ನನಗೂ ಆಹ್ವಾನ ಬಂದಿರಲಿಲ್ಲ" ಎಂದು ನಗುತ್ತಲೇ ತಿಳಿಸಿದ್ದಾರೆ.

ಈ ನಿರ್ದಿಷ್ಟ ವಿಡಿಯೋ ಕ್ಲಿಪ್ ಟ್ವಿಟರ್​​, ಇನ್​ಸ್ಟಾಗ್ರಾಮ್​​ ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೆಟ್ಟಿಗರು, ಅಭಿಮಾನಿಗಳು ಇದನ್ನು ವ್ಯಾಪಕವಾಗಿ ಶೇರ್​ ಮಾಡುತ್ತಿದ್ದಾರೆ. ಪ್ರಿಯಾಂಕಾ ಅಭಿಮಾನಿಗಳು ನಟಿಯ ಬೋಲ್ಡ್​​ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, "ನಾನು ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಬೋಲ್ಡ್​ ಉತ್ತರವನ್ನು ಪ್ರೀತಿಸುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, "ನಾನು ಪ್ರಿಯಾಂಕಾ ಅವರನ್ನು ಪ್ರೀತಿಸುತ್ತೇನೆ ಮತ್ತು ಸರಿಯಾದ ಸಮಯ ಬಂದಾಗ ಅವರ ಹಿಂತಿರುಗಿಸುವ ಶೈಲಿಯನ್ನು ಪ್ರೀತಿಸುತ್ತೇನೆ'' ಎಂದು ಹೇಳಿದ್ದಾರೆ.

ಇದನ್ನೂ ಓದಿ: Bigg Boss OTT 2 ಶೀಘ್ರದಲ್ಲೇ ಆರಂಭ: ಸ್ಪರ್ಧಿಗಳ್ಯಾರು? ಇಲ್ಲಿದೆ ಕೆಲ ಮಾಹಿತಿ!

ಬಾಲಿವುಡ್​ನಲ್ಲಿ ಮಿಂಚಿ, ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್​ ಸಿಂಗರ್​ ನಿಕ್ ಜೋನಾಸ್ ರಾಜಸ್ಥಾನದ ಜೋಧ್‌ಪುರದ ಉಮೈದ್ ಭವನ್ ಅರಮನೆಯಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯಗಳ ಪ್ರಕಾರ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸದ್ಯ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್‌ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಮ್ಮ ಕೆಲಸಗಳಲ್ಲಿಯೂ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕನ್ನಡ ಚಿತ್ರರಂಗದ ಕನಸುಗಾರ'...ರವಿಚಂದ್ರನ್ ಅಪರೂಪದ ಚಿತ್ರಗಳಿವು!​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.