ETV Bharat / entertainment

ಲಾಸ್ ಏಂಜಲೀಸ್‌ಗೆ ಮರಳಿದ ಪ್ರಿಯಾಂಕಾ.. ಯೋಗಿ ಸರ್ಕಾರದ ಯೋಜನೆ ಶ್ಲಾಘಿಸಿದ ಚೋಪ್ರಾ

ನವೆಂಬರ್ 1 ರಂದು ಬೆಳಗ್ಗೆ ಭಾರಕ್ಕೆ ಬಂದಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅವರು ಲಾಸ್ ಏಂಜಲೀಸ್‌ಗೆ ಮರಳಿದ್ದಾರೆ.

author img

By

Published : Nov 9, 2022, 1:02 PM IST

Priyanka Chopra back to Los Angeles
ಗ್ಲೋಬಲ್ ಐಕಾನ್​​​ ಪ್ರಿಯಾಂಕಾ ಚೋಪ್ರಾ

ಮೂರು ವರ್ಷಗಳ ಬಳಿಕ ತವರಿಗೆ ಆಗಮಿಸಿದ್ದ ಗ್ಲೋಬಲ್ ಐಕಾನ್​​​ ಪ್ರಿಯಾಂಕಾ ಚೋಪ್ರಾ ಲಾಸ್ ಏಂಜಲೀಸ್‌ಗೆ ಮರಳಿದ್ದಾರೆ. ಪ್ರಿಯಾಂಕಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡಿದ್ದು, ಲಾಸ್ ಏಂಜಲೀಸ್‌ಗೆ ಹಿಂದಿರುಗಿರುವ ವಿಚಾರವನ್ನು ತಿಳಿಸಿದ್ದಾರೆ.

UNICEFನ ರಾಯಭಾರಿಯಾಗಿ ಉತ್ತರ ಪ್ರದೇಶದ ಕೆಲವು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡುವುದರ ಜೊತೆಗೆ ತಮ್ಮ ಹೇರ್‌ಕೇರ್ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಪ್ರಿಯಾಂಕಾ ಕೆಲ ದಿನಗಳ ಕಾಲ ಭಾರತದಲ್ಲಿದ್ದರು. 3 ವರ್ಷಗಳ ನಂತರ ನವೆಂಬರ್ 1 ರಂದು ಬೆಳಗ್ಗೆ ಅವರು ಭಾರತಕ್ಕೆ ಬಂದಿದ್ದರು. ಭಾರತದಲ್ಲಿ ತಂಗಿದ್ದಾಗ, ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ತಾರತಮ್ಯವನ್ನು ಕೊನೆಗೊಳಿಸಲು UNICEF ಮತ್ತು ಅದರ ಪಾಲುದಾರರು ಮಾಡುತ್ತಿರುವ ಕೆಲಸವನ್ನು ನೋಡಲು ಪ್ರಿಯಾಂಕಾ ಚೋಪ್ರಾ ಉತ್ತರ ಪ್ರದೇಶದ ಲಕ್ನೋಗೆ ಭೇಟಿ ನೀಡಿದ್ದರು. ಪ್ರಿಯಾಂಕಾ ಅವರು ಈ ಭೇಟಿಯ ಹಲವಾರು ಚಿತ್ರಗಳು ಮತ್ತು ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

Priyanka Chopra
ಪ್ರಿಯಾಂಕಾ ಚೋಪ್ರಾ ಇನ್​ಸ್ಟಾ ಸ್ಟೋರಿ

ಭಾರತಕ್ಕೆ ಭೇಟಿ ವೇಳೆ, ಲಕ್ನೋದ ಔರಂಗಾಬಾದ್‌ನ ಶಾಲೆಗಳಿಗೆ ಭೇಟಿ ನೀಡಿದರು, ಅಲ್ಲಿ ಚಿಕ್ಕ ಮಕ್ಕಳನ್ನು ಭೇಟಿಯಾದರು. ಲಾಲ್‌ಪುರದ ಅಂಗನವಾಡಿಗೂ ಭೇಟಿ ನೀಡಿದರು. ತಮ್ಮ ಭೇಟಿಯ ಸಂದರ್ಭದಲ್ಲಿ ಪ್ರಿಯಾಂಕಾ ಅವರು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಮಹಿಳೆಯರ ರಕ್ಷಣೆ ಬಗ್ಗೆ ಜವಾಬ್ದಾರಿಯುತ ವರ್ತನೆ ಮತ್ತು ರಾಜ್ಯದಲ್ಲಿ ಅವರ ಸ್ಥಿತಿಯ ಸುಧಾರಣೆ ವಿಚಾರವಾಗಿ ಶ್ಲಾಘಿಸಿದರು.

ಕಳೆದ ಎರಡು ದಿನಗಳ ಭೇಟಿಯಲ್ಲಿ, ನಾನು ಇಲ್ಲಿ ದೊಡ್ಡ ಬದಲಾವಣೆಯನ್ನು ಕಂಡಿದ್ದೇನೆ. ವಾಸ್ತವವಾಗಿ ಉತ್ತರ ಪ್ರದೇಶಕ್ಕೆ ಈ ಬದಲಾವಣೆಯ ಅಗತ್ಯವಿದೆ ಎಂದು ಪ್ರಿಯಾಂಕಾ ಹೇಳಿದರು. ಜೊತೆಗೆ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಧನಾತ್ಮಕ ಬದಲಾವಣೆಯನ್ನೂ ಪ್ರಿಯಾಂಕಾ ಪ್ರಸ್ತಾಪಿಸಿದರು. ಇಲ್ಲಿನ ಒನ್ ಸ್ಟಾಪ್ ಸೆಂಟರ್ (ಆಶ ಜ್ಯೋತಿ ಸೆಂಟರ್)ಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತನಾಡಿದ್ದೇನೆಂದು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: ಮೂರು ವರ್ಷಗಳ ಬಳಿಕ ಭಾರತಕ್ಕೆ ಹಾರಿ ಬಂದ ಪಿಗ್ಗಿ!

ಅಷ್ಟೇ ಅಲ್ಲದೇ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ರೂಪಿಸಿರುವ ಯೋಜನೆಗಳು ಮತ್ತು ಕೋವಿಡ್ ಸಮಯದಲ್ಲಿ ಅನಾಥರಾದ ಮಕ್ಕಳ ಬೆಳವಣಿಗೆಗೆ ರೂಪಿಸಿರುವ ಯೋಜನೆಗಳನ್ನು ಮತ್ತಷ್ಟು ಶ್ಲಾಘಿಸಿದರು. ಇದರೊಂದಿಗೆ ಯೋಜನೆಗಳ ಮಾಹಿತಿಯನ್ನು ನಿರ್ಗತಿಕರಿಗೆ ತಲುಪಿಸಿ ಅವರಲ್ಲಿ ಅರಿವು ಮೂಡಿಸುವಂತೆ ಪ್ರಿಯಾಂಕಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ದೇಹದ ಅಸಮತೋಲನ ಕಾಯಿಲೆಗೆ ಒಳಗಾದ ನಟ ವರುಣ್ ಧವನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.