ETV Bharat / entertainment

'ಶಾಂತಿ ಮತ್ತು ನೆಮ್ಮದಿ ಅನುಭವಿಸಿದೆ': ಕಾಮಾಖ್ಯ ದೇವಿಯ ದರ್ಶನ ಪಡೆದ ಪ್ರೀತಿ ಜಿಂಟಾ - ಬಾಲಿವುಡ್​ ನಟಿ ಪ್ರೀತಿ ಜಿಂಟಾ

ನಟಿ ಪ್ರೀತಿ ಜಿಂಟಾ ಅಸ್ಸೋಂನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

Preity Zinta
ಪ್ರೀತಿ ಜಿಂಟಾ
author img

By

Published : Apr 8, 2023, 5:09 PM IST

ಇಂದು ಬಾಲಿವುಡ್​ ನಟಿ ಪ್ರೀತಿ ಜಿಂಟಾ ಅಸ್ಸೋಂನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ದೃಶ್ಯಗಳನ್ನು ನಟಿ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಪ್ರೀತಿ ಗುಲಾಬಿ ಬಣ್ಣದ ಸಲ್ವಾರ್​ ಧರಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಜೊತೆಗೆ ತಲೆಗೆ ಶಾಲ್​ ಮತ್ತು ಮುಖಕ್ಕೆ ಮಾಸ್ಕ್​ ಹಾಕಿಕೊಂಡಿದ್ದರು. ವಿಡಿಯೋ ಕ್ಲಿಪ್​ನಲ್ಲಿ ದೇವಾಲಯದ ಪರಸರ, ಕೊಳ, ಸುತ್ತಮುತ್ತಲಿನ ಅಂಗಡಿಗಳು ಕಾಣುತ್ತವೆ. ಜೊತೆಗೆ ದೇವಸ್ಥಾನದ ಪೂಜಾರಿಯಿಂದ ನಟಿ ಉಡುಗೊರೆಯನ್ನು ಸ್ವೀಕರಿಸುತ್ತಿರುವುದನ್ನು ನೋಡಬಹುದು.

ಪ್ರೀತಿ ಕಾಮಾಖ್ಯ ದೇವಾಲಯದ ಸುತ್ತಮುತ್ತಲಿನಲ್ಲಿ ಹಲವು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಅವರು ತಮ್ಮ ಕೊಲಾಜ್​ ವಿಡಿಯೋಗೆ ವಾಂಜೆಲಿಸ್​ ಅವರ ಚಾರಿಯಟ್ಸ್​ ಆಫ್​ ಫೈರ್​ ಹಾಡನ್ನು ಸೇರಿಸಿದ್ದಾರೆ. ನಟಿ ಪ್ರೀತಿ ಕಾಮಾಖ್ಯ ದೇವಿಯ ದರ್ಶನ ಪಡೆದು ಸಂತೃಪ್ತಗೊಂಡಿದ್ದಾರೆ. "ಪ್ರಸಿದ್ಧ ಕಾಮಾಖ್ಯ ದೇವಿಯ ದರ್ಶನಕ್ಕೆಂದೇ ನಾನು ಗುವಾಹಟಿಗೆ ತೆರಳಿದ್ದೆ. ನಾನು ಪ್ರಯಾಣಿಸುತ್ತಿದ್ದ ವಿಮಾನವು ಹಲವು ಗಂಟೆಗಳ ಕಾಲ ವಿಳಂಬವಾಗಿದ್ದು ರಾತ್ರಿಯಿಡೀ ಎಚ್ಚರವಾಗಿದ್ದೆ. ನಾನು ದೇವಾಲಯವನ್ನು ಪ್ರವೇಶಿಸಿದ ನಂತರ ಅದು ಯೋಗ್ಯವಾಗಿದೆ ಎಂದು ತೋರುತ್ತದೆ. ದೇವಸ್ಥಾನದ ಓಳಗಡೆಗೆ ಹೋದಾಗ ಬಹಳ ಶಾಂತಿ ಮತ್ತು ನೆಮ್ಮದಿಯ ಭಾವವನ್ನು ಅನುಭವಿಸಿದೆ" ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 41ನೇ ವಸಂತಕ್ಕೆ ಕಾಲಿಟ್ಟ 'ಸ್ಟೈಲಿಶ್​ ಪುಷ್ಪರಾಜ್​'; ನಟ ಅಲ್ಲು ಅರ್ಜುನ್​ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ

ಮುಂದುವರೆದು, "ಇಂತಹ ಅದ್ಭುತ ಕ್ಷಣವನ್ನು ಆನಂದದಿಂದ ಕಳೆಯಲು ಸಹಕರಿಸಿದ ಅಲ್ಲಿನ ಎಲ್ಲಾ ವ್ಯವಸ್ಥಾಪಕರಿಗೆ ಧನ್ಯವಾದಗಳು. ನಿಮ್ಮಲ್ಲಿ ಯಾರಿಗಾದರೂ ಗುವಾಹಟಿ ಕಾಮಾಖ್ಯ ದೇವಸ್ಥಾನಕ್ಕೆ ಹೋಗುವ ಅವಕಾಶ ಸಿಕ್ಕರೆ ಖಂಡಿತ ತಪ್ಪಿಸಿಕೊಳ್ಳಬೇಡಿ. ಏಕೆಂದರೆ ನೀವು ಅಲ್ಲಿಗೆ ಹೋಗಿ ಬಂದ ಮೇಲೆ ಖಂಡಿತ ನನಗೆ ಧನ್ಯವಾದ ಹೇಳಬಹುದು. ಜೈ ಮಾ ಕಾಮಾಖ್ಯ, ಜೈ ಮಾತಾ ಡಿ. ದೇವರು ನಿಮ್ಮನ್ನು ಯಾವಾಗಲೂ ರಕ್ಷಿಸಲಿ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆಂಪು ಗುಲಾಬಿಯಾದ ಕಿಯಾರಾ ಅಡ್ವಾಣಿ! ಫ್ಯಾಷನ್ ಪ್ರಪಂಚದ ಮೇರು ತಾರೆಗೆ ಕಾಮೆಂಟ್​ಗಳ ಸುರಿಮಳೆ

ಪ್ರೀತಿ ಜಿಂಟಾ, 1998 ರಲ್ಲಿ ತೆರೆ ಕಂಡ 'ದಿಲ್​​ ಸೆ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. 2008 ರಲ್ಲಿ ​​ಕಿಂಗ್ಸ್​​ ಇಲೆವೆನ್ ಪಂಜಾಬ್​​​ ಕ್ರಿಕೆಟ್​​ ತಂಡದ ಮಾಲೀಕರಾದರು. ಸದ್ಯ ಅವರೇ ಪಂಜಾಬ್​ ಕಿಂಗ್ಸ್​ ಒಡತಿಯಾಗಿದ್ದಾರೆ. 2016 ರಲ್ಲಿ ಅಮೆರಿಕದ ಜೀನ್ ಜೊತೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ 2021 ರ ನವೆಂಬರ್​ ತಿಂಗಳಿನಲ್ಲಿ ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ಮಕ್ಕಳಿಗೆ ಜೈ ಹಾಗೂ ಜಿಯಾ (Jai and Gia) ಎಂದು ನಾಮಕರಣ ಮಾಡಿದ್ದಾರೆ. ಸದ್ಯ ನಟಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: 'ಪುಷ್ಪಾ2' ಪೋಸ್ಟರ್​​​ ಬಿಡುಗಡೆ:​ ಅಲ್ಲು ಅರ್ಜುನ್​ ಸೀರೆ ಲುಕ್​ಗೆ ಸಮಂತಾ ಕಾಮೆಂಟ್​ ಹೀಗಿತ್ತು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.