ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ತಮ್ಮ ಪತಿ ಜೀನ್ ಗುಡೆನಫ್ ಮತ್ತು ಪುಟಾಣಿ ಮಕ್ಕಳಾದ ಜೈ ಮತ್ತು ಗಿಯಾ ಜೊತೆ ಶಿಮ್ಲಾದ ಹತೇಶ್ವರಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಪ್ರವಾಸಕ್ಕಾಗಿ ಪ್ರೀತಿ ಹಳದಿ ಬಣ್ಣದ ಸೂಟ್ ಆಯ್ಕೆ ಮಾಡಿಕೊಂಡರು. ದೇವಾಲಯಕ್ಕೆ ಪ್ರವೇಶಿಸುವಾಗ ಅವರು ದುಪ್ಪಟ್ಟವನ್ನು ತಲೆ ಮೇಲೆ ಹಾಕಿಕೊಂಡರು. ಮಕ್ಕಳು ಬ್ಲೂ ಬಣ್ಣದ ದಿರಿಸಿನಲ್ಲಿ ಮತ್ತು ಜೀನ್ ಬ್ಲ್ಯಾಕ್ ಡ್ರೆಸ್ನಲ್ಲಿ ಕಾಣಿಸಿಕೊಂಡರು.
- " class="align-text-top noRightClick twitterSection" data="
">
ದೇವಸ್ಥಾನಕ್ಕೆ ಭೇಟಿ ನೀಡಿದ ಕ್ಷಣಗಳನ್ನು ಪ್ರೀತಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ನಾನು ಚಿಕ್ಕವಳಿದ್ದಾಗ ಶಿಮ್ಲಾ- ಹಿಮಾಚಲ ಪ್ರದೇಶದ ಹತ್ಕೋಟಿಯಲ್ಲಿರುವ ಹಟೇಶ್ವರಿ ಮಾತಾ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಿದ್ದೆ. ಈ ದೇವಾಲಯವು ನನ್ನ ಬಾಲ್ಯದಲ್ಲಿ ದೊಡ್ಡ ಪಾತ್ರ ವಹಿಸಿದೆ. ನಾನು ಯಾವಾಗಲೂ ದೇವಸ್ಥಾನದೊಂದಿಗೆ ಸಂಪರ್ಕ ಹೊಂದಿದ್ದೇನೆ" ಎಂದು ಕ್ಯಾಪ್ಶನ್ ಬರೆದಿದ್ದಾರೆ.
- " class="align-text-top noRightClick twitterSection" data="
">
ಮುಂದುವರೆದು, "ಈಗ ನಾನು ತಾಯಿಯಾಗಿದ್ದೇನೆ. ನನ್ನ ಮಕ್ಕಳು ಮೊದಲ ಬಾರಿಗೆ ಭೇಟಿ ನೀಡಿದ ಈ ದೇವಾಲಯವು ಅದ್ಭುತ ಮತ್ತು ಪುರಾತನವಾಗಿದೆ. ನಮ್ಮ ಭೇಟಿಯ ಸ್ನೀಕ್ ಪೀಕ್ ಇಲ್ಲಿದೆ. ಜೈ ಮತ್ತು ಗಿಯಾ ಈ ಪ್ರವಾಸವನ್ನು ನೆನೆಪಿನಲ್ಲಿಟ್ಟುಕೊಳ್ಳುವುದಿಲ್ಲ. ಹೀಗಾಗಿ ನಾವು ಮತ್ತೊಮ್ಮೆ ಇಲ್ಲಿಗೆ ಬರಬೇಕಾಗುತ್ತದೆ. ಆ ತಾಯಿ ನಮ್ಮನ್ನು ಖಂಡಿತ ಕರೆಸಿಕೊಳ್ಳುತ್ತಾರೆ. ಜೈ ಮಾ ದುರ್ಗಾ, ಜೈ ಮಹಿಷಾಸುರಮರ್ಧಿನಿ. ನಿಮ್ಮಲ್ಲಿ ಯಾರಿಗಾದರೂ ಈ ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶ ಸಿಕ್ಕಿದರೆ ಖಂಡಿತ ತಪ್ಪಿಸಿಕೊಳ್ಳಬೇಡಿ. ಇದು ಅತ್ಯಂತ ಸುಂದರವಾಗಿದೆ. ಹೀಗಾಗಿ ನೀವು ಭೇಟಿ ನೀಡಿದ ನಂತರ ನನಗೆ ಧನ್ಯವಾದ ಹೇಳಬಹುದು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಗೆ ಕಾಂತಾರ ಸ್ಟಾರ್ ರಿಷಬ್ ಕುಟುಂಬ ಭೇಟಿ, ಪೂಜೆ ಸಲ್ಲಿಕೆ
ಪ್ರೀತಿ ಜಿಂಟಾ ಪರ್ವತಗಳ ಮಡಿಲಲ್ಲಿ ತನ್ನ ಪತಿ ಮತ್ತು ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ನಡೆಯುತ್ತಿರುವ ಐಪಿಎಲ್ ಪಂದ್ಯಗಳ ನಡುವೆ ಬಿಡುವು ಮಾಡಿಕೊಂಡು, ಪ್ರೀತಿ ತನ್ನ ಮಕ್ಕಳ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ. ಜೈ ಜೊತೆ ಉದ್ಯಾನದಲ್ಲಿ ನಡೆಯುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ ಪ್ರೀತಿ ತನ್ನ ಪತಿ ಜೀನ್ ಗುಡ್‌ನಫ್ ಜೊತೆಗಿನ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಪ್ರೀತಿ ಜಿಂಟಾ, 1998 ರಲ್ಲಿ ತೆರೆ ಕಂಡ 'ದಿಲ್ ಸೆ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. 2008 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕ್ರಿಕೆಟ್ ತಂಡದ ಮಾಲೀಕರಾದರು. ಸದ್ಯ ಅವರೇ ಪಂಜಾಬ್ ಕಿಂಗ್ಸ್ ಒಡತಿಯಾಗಿದ್ದಾರೆ. 2016 ರಲ್ಲಿ ಅಮೆರಿಕದ ಜೀನ್ ಜೊತೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ಲಾಸ್ ಏಂಜಲೀಸ್‌ನಲ್ಲಿ ವಿವಾಹವಾದರು. ಬಳಿಕ 2021 ರ ನವೆಂಬರ್ ತಿಂಗಳಿನಲ್ಲಿ ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ಮಕ್ಕಳಿಗೆ ಜೈ ಹಾಗೂ ಜಿಯಾ (Jai and Gia) ಎಂದು ನಾಮಕರಣ ಮಾಡಿದ್ದಾರೆ. ಸದ್ಯ ನಟಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಕನ್ನಡತಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್ನಲ್ಲಿ ಆಫರ್ ಮೇಲೆ ಆಫರ್: ಮುಂದಿನ ಹಿಂದಿ ಚಿತ್ರ ಯಾವುದು?