ETV Bharat / entertainment

'ಹಿಂದೂಗಳ ಜೀವ ಮುಖ್ಯ': ಉದಯಪುರ ವ್ಯಕ್ತಿಯ ಶಿರಚ್ಛೇದ ಖಂಡಿಸಿದ ಖ್ಯಾತ ನಟಿ ಪ್ರಣಿತಾ

ರಾಜಸ್ಥಾನದಲ್ಲಿ ನಡೆದ ಹಿಂದೂ ವ್ಯಕ್ತಿಯ​ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ನಟಿ ಪ್ರಣಿತಾ, ಟ್ವಿಟರ್​ನಲ್ಲಿ ಹಿಂದೂಗಳ ಜೀವ ಮುಖ್ಯ ಎಂದು ತಿಳಿಸಿದ್ದಾರೆ.

Pranitha Subhas tweet on Udaipur murder case

author img

By

Published : Jun 29, 2022, 9:45 PM IST

ರಾಜಸ್ಥಾನದ ಉದಯಪುರದಲ್ಲಿ ನಡೆದ ಹಿಂದೂ ವ್ಯಕ್ತಿಯ ಭೀಕರ ಹತ್ಯೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ದಕ್ಷಿಣ ಭಾರತದ ಖ್ಯಾತ ನಟಿ ಪ್ರಣಿತಾ ಸುಭಾಷ್​ ಈ ಘಟನೆಯನ್ನು ಖಂಡಿಸಿದ್ದಾರೆ.

ಹಿಂದೂಗಳ ಜೀವ ಮುಖ್ಯ (Hindu Lives Matter) ಎಂದು ಬರೆದಿರುವ ಸ್ಲೇಟ್ ಕೈಯಲ್ಲಿ ಹಿಡಿದು ನಿಂತಿರುವ ಫೋಟೋವನ್ನು ನಟಿ ಟ್ವಿಟರ್​ನಲ್ಲಿ ಹಾಕಿಕೊಂಡಿದ್ದಾರೆ. ಈ ಮೂಲಕ ಹಿಂದೂಗಳ ಜೀವಕ್ಕೂ ಬೆಲೆ ಇದೆ ಎಂಬ ಸಂದೇಶ ಸಾರಿದ್ದಾರೆ.

ಈ ಹಿಂದೆ ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ್ದ ಪ್ರಣಿತಾ, ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಮರೆಮಾಚಲು ಕೆಲವರು 'ಹಿಂದೂ ಟೆರರ್'​ ಪದ ಬಳಕೆ ಮಾಡ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಆಸ್ಕರ್​ ಸಮಿತಿಯಲ್ಲಿ ನಟ ಸೂರ್ಯ! ಈ ಗೌರವ ಪಡೆದ ಮೊದಲ ತಮಿಳು ನಟ

ರಾಜಸ್ಥಾನದ ಉದಯಪುರದಲ್ಲಿ ಟೈಲರ್​ ಆಗಿದ್ದ ಹಿಂದೂ ವ್ಯಕ್ತಿ ಕನ್ಹಯ್ಯಲಾಲ್ ಎಂಬವರ ಮೇಲೆ ಇಬ್ಬರು ಮುಸ್ಲಿಂ ಯುವಕರು ನಿನ್ನೆ ಹಲ್ಲೆ ನಡೆಸಿ, ಅಮಾನವೀಯ ರೀತಿಯಲ್ಲಿ ಕೊಲೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.