ETV Bharat / entertainment

ಪ್ರಮೋದ್​ ಶೆಟ್ಟಿ- ಯುವ ಪ್ರತಿಭೆ ರೋಹಿತ್​ ನಟನೆಯ 'ರಕ್ತಾಕ್ಷ' ಸಿನಿಮಾದ ಮಾಸ್​ ಟೀಸರ್​ ರಿಲೀಸ್​ - ಈಟಿವಿ ಭಾರತ ಕನ್ನಡ

ಪ್ರಮೋದ್​ ಶೆಟ್ಟಿ ಮತ್ತು ಯುವ ನಟ ರೋಹಿತ್​ ನಟನೆಯ 'ರಕ್ತಾಕ್ಷ' ಸಿನಿಮಾದ ಮಾಸ್​ ಟೀಸರ್​ ರಿಲೀಸ್​ ಆಗಿದೆ.

Raktaksha
'ರಕ್ತಾಕ್ಷ'
author img

By

Published : Jul 25, 2023, 10:58 PM IST

ಸ್ಯಾಂಡಲ್​ವುಡ್​ಗೆ ಟ್ಯಾಲೆಂಟ್​ ಇರುವ ಪ್ರತಿಭೆಗಳ ಆಗಮನವಾಗುತ್ತಿದೆ. ಒಳ್ಳೆ ಕಂಟೆಂಟ್​​ನೊಂದಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಾಡೆಲಿಂಗ್​ ಕ್ಷೇತ್ರದಲ್ಲಿ ತನ್ನದೇ ಟ್ಯಾಲೆಂಟ್​ ತೋರಿಸಿದ್ದ ರೋಹಿತ್​ ಎಂಬ ಯುವ ನಟ ಬೆಳ್ಳಿ ಪರದೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಆರಂಭದಿಂದಲೂ ಟೈಟಲ್​ ಹಾಗೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ಸಿನಿಮಾ 'ರಕ್ತಾಕ್ಷ'. ಈಗಾಗಲೇ ಚಿತ್ರದ ಆ್ಯಕ್ಷನ್​ ಟೀಸರ್​ ರಿಲೀಸ್​ ಆಗಿದೆ.

ಪಂಚಿಂಗ್​ ಡೈಲಾಗ್​ ಹೊಡೆಯುತ್ತಾ ನಾಯಕ ರೋಹಿತ್​ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಸಿಕ್ಸ್​ ಪ್ಯಾಕ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟ ಪ್ರಮೋದ್​ ಶೆಟ್ಟಿ ಎದುರು ತೊಡೆ ತಟ್ಟಿ ರಗಡ್​ ಲುಕ್​​ನಲ್ಲಿ ಅಬ್ಬರಿಸಿದ್ದಾರೆ. ಕಿಲ್ಲಿಂಗ್​ ಲುಕ್​ ಮೂಲಕವೇ ಗಮನ ಸೆಳೆದಿರುವ ಈ ಯುವ ನಟ ರೋಹಿತ್​ ಕನ್ನಡ ಚಿತ್ರರಂಗದ ಭರವಸೆಯ ನಾಯಕ ಎನಿಸಿಕೊಂಡಿದ್ದಾರೆ. ಟೀಸರ್​ ಅಂತೂ ಪ್ರೇಕ್ಷಕರನ್ನು ಸೆಳೆದಿದ್ದು, ಧೀರೇಂದ್ರ ದಾಸ್​ ಸಂಗೀತ ಸಖತ್​ ಕಿಕ್​ ಕೊಟ್ಟಿದೆ.

Raktaksha movie teaser released
'ರಕ್ತಾಕ್ಷ' ಸಿನಿಮಾದ ಮಾಸ್​ ಟೀಸರ್​ ರಿಲೀಸ್​ ಕಾರ್ಯಕ್ರಮ

ಇದನ್ನೂ ಓದಿ: 'ಕ್ಯಾಪ್ಟನ್​ ಮಿಲ್ಲರ್' ಪೋಸ್ಟರ್​ ರಿಲೀಸ್​: ಯುದ್ಧಕ್ಕೆ ಸಿದ್ಧರಾಗಿ ನಿಂತಿದ್ದಾರೆ ಧನುಷ್- ಶಿವಣ್ಣ

ವಾಸುದೇವ್​ ಚೊಚ್ಚಲ ನಿರ್ದೇಶನವಿದು.. ಮಾಡೆಲಿಂಗ್​ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ರೋಹಿತ್​ 'ರಕ್ತಾಕ್ಷ' ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ಸಾಯಿ ಪ್ರೊಡಕ್ಷನ್​ ಬ್ಯಾನರ್​ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. 'ರಕ್ತಾಕ್ಷ' ಸಿನಿಮಾವನ್ನು ವಾಸುದೇವ ಎಸ್ ಎನ್ ನಿರ್ದೇಶನ ಮಾಡುತ್ತಿದ್ದಾರೆ. ಅಂದ ಹಾಗೆಯೇ ವಾಸುದೇವ್​ ಅವರು ಆ್ಯಕ್ಷನ್​ ಕಟ್​ ಹೇಳುತ್ತಿರುವ ಚೊಚ್ಚಲ ಸಿನಿಮಾವಿದು. ರೋಹಿತ್​ ಜೊತೆ ಒಂದಷ್ಟು ಉತ್ಸಾಹಿ ಪ್ರತಿಭೆಗಳು ಸೇರಿ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ.

ಚಿತ್ರತಂಡ ಹೀಗಿದೆ.. ರೋಹಿತ್​ ಜೊತೆಗೆ ಕೆಜಿಎಫ್​ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್​, ಪ್ರಭು, ವಿಶ್ವ, ಭದ್ರಿ ನಾರಾಯಣ, ಗುರುದೇವ ನಾಗರಾಜ, ಬಸವರಾಜ ಆದಾಪುರ ನಟಿಸಿದ್ದಾರೆ. ಇನ್ನೂ ಖಳನಾಯಕನ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಪ್ರಮೋದ್​ ಶೆಟ್ಟಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ದಾಸ್ ಸಂಗೀತ ನೀಡಿದ್ದಾರೆ. ಈಗಾಗಲೇ ವಸಿಷ್ಠ ಸಿಂಹ ಅವರು ಹಾಡಿರುವ ರಕ್ತಾಕ್ಷ ಟೈಟಲ್ ಟ್ರ್ಯಾಕ್​ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ ಟೀಸರ್ ಮೂಲಕ ರಕ್ತಾಕ್ಷ ಸಿನಿಮಾ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಸಿನಿ ಪ್ರೇಮಿಗಳಿಗೆ ಕುತೂಹಲ ಹೆಚ್ಚಿಸಿರುವ ಚಿತ್ರ ಬಿಡುಗಡೆಗೆ ತಯಾರಿ ನಡೆಸುತ್ತಿದೆ.

ಇದನ್ನೂ ಓದಿ: 'ಶತಮಾನಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ': ವರ್ಷವಿಡೀ ನರಸಿಂಹರಾಜು ಜನ್ಮದಿನೋತ್ಸವ ಆಚರಣೆಗೆ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.