ETV Bharat / entertainment

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಮುಂದಿನ ಚಿತ್ರದ ಟೈಟಲ್​ - ಫಸ್ಟ್​ಲುಕ್​ ಅನಾವರಣ ​

ಪ್ಯಾನ್​ ಇಂಡಿಯಾ ​ಸ್ಟಾರ್ ಪ್ರಭಾಸ್​ ಅವರ ಮುಂದಿನ ಚಿತ್ರ ಘೋಷಣೆಯಾಗಿದೆ.

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಮುಂದಿನ ಚಿತ್ರ

author img

By ETV Bharat Karnataka Team

Published : Jan 15, 2024, 3:54 PM IST

Updated : Jan 15, 2024, 4:12 PM IST

ಮುಂಬೈ: ಟಾಲಿವುಡ್​ನ ಪ್ಯಾನ್​ ಇಂಡಿಯಾ ​ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಪ್ರಭಾಸ್ 'ಸಲಾರ್' ಚಿತ್ರದ ಮೂಲಕ ಮತ್ತೆ ಯಶಸ್ಸಿನ ಹಾದಿಗೆ ಮರಳಿದ್ದಾರೆ. ಇದೀಗ ಮಕರ ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಭಾಸ್​ ಅವರ ಮುಂದಿನ ಚಿತ್ರವನ್ನು ಘೋಷಿಸಲಾಗಿದೆ. ಹಬ್ಬದಂದು ಅಭಿಮಾನಿಗಳನ್ನು ಖುಷಿಪಡಿಸಿರುವ ನಿರ್ಮಾಪಕರು ಚಿತ್ರದ ಟೈಟಲ್ ಜೊತೆ ಫಸ್ಟ್​ಲುಕ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ.

ಮಾರುತಿ ದಾಸರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ 'ದಿ ರಾಜಾ ಸಾಬ್' ಎಂದು ಹೆಸರಿಡಲಾಗಿದೆ. ಇದೊಂದು ರೋಮ್ಯಾಂಟಿಕ್, ಹಾರರ್ ಚಿತ್ರವಾಗಿರಲಿದೆ. ದಿ ರಾಜಾ ಸಾಬ್ ಚಿತ್ರದ ಪೋಸ್ಟರ್​ ಕೂಡ ಬಿಡುಗಡೆಯಾಗಿದ್ದು, ಇದರಲ್ಲಿ​ ನಟ ಪ್ರಭಾಸ್​ ಲುಂಗಿ ತೊಟ್ಟು ವಿಭಿನ್ನವಾಗಿ ಡ್ಯಾಶಿಂಗ್‌ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಭಾಸ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಈ ಹಬ್ಬದಂದು ನಾನು ರಾಜಾ ಸಾಬ್‌ನ ಫಸ್ಟ್​ಲುಕ್​ ಅನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದೇನೆ ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ. ಮೂಲಗಳ ಪ್ರಕಾರ, 'ದಿ ರಾಜಾ ಸಾಬ್' ತೆಲುಗು ಸೇರಿದಂತೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿರುವ ಪ್ಯಾನ್​ ಇಂಡಿಯಾ ಚಿತ್ರ ಎನ್ನಲಾಗುತ್ತಿದೆ.

ಪ್ರಭಾಸ್ - ಮಾರುತಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿಜಿ ವಿಶ್ವಪ್ರಸಾದ್ ಮತ್ತು ವಿವೇಕ್ ಕೂಚಿಬೋಟ್ಲ ಜಂಟಿಯಾಗಿ ನಿರ್ಮಿಸಲಿದ್ದಾರೆ. ಪ್ರಭಾಸ್ ಅವರನ್ನು ಅವರದೇ ಶೈಲಿಯಲ್ಲಿ ತೆರೆ ಮೇಲೆ ಪ್ರಸ್ತುತ ಪಡಿಸಲಾಗುತ್ತದೆ ಎಂದು ನಿರ್ದೇಶಕ ಮಾರುತಿ ಹೇಳಿದ್ದು, ಚಿತ್ರದ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ಸಲಾರ್​ ಯಶಸ್ಸು: ಕಳೆದ ವರ್ಷ ಡಿ.22 ರಂದು ತೆರೆಕಂಡ ಪ್ರಶಾಂತ್​ ನೀಲ್​ ನಿರ್ದೇಶನದ 'ಸಲಾರ್​: ಪಾರ್ಟ್​​ 1 ಸೀಸ್​ಫೈರ್'​​ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಬಾರೀ ಸದ್ದು ಮಾಡಿ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ. ಹೆಚ್ಚಿನ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಈ ಸಿನಿಮಾ ಅಂದುಕೊಂಡಂತೆ ಮೊದಲ ದಿನವೇ 90.7 ಕೋಟಿ ರೂ. ಅನ್ನು ಗಲ್ಲಾ ಪೆಟ್ಟಿಗೆಯಲ್ಲಿ ಬಾಚಿಕೊಂಡಿತ್ತು. ಈ ಮೂಲಕ ಅಟ್ಲಿ ನಿರ್ದೇಶನದ, ಶಾರುಖ್​ ಖಾನ್​ ಅಭಿನಯದ 'ಜವಾನ್'​ ಚಿತ್ರದ ದಾಖಲೆಯನ್ನು ಧೂಳಿಪಟ ಮಾಡಿತು. ಈ ಚಿತ್ರ ಬಿಡುಗಡೆಯಾಗಿ ಜ.10ರ ವೇಳೆಗೆ ದಿನಗಳಲ್ಲಿ ದೇಶಿಯವಾಗಿ ₹400 ಕೋಟಿ ಗಳಿಕೆ ಮಾಡಿದ್ದರೆ, ಜಾಗತಿಕ ಮಟ್ಟದಲ್ಲಿ 700 ಕೋಟಿ ರೂಪಾಯಿ ಕ್ಲಬ್​​ಗೆ ಸೇರಿತ್ತು.

ಇದನ್ನೂ ಓದಿ: ಮಾಲ್ಡೀವ್ಸ್‌ ಟಿಕೆಟ್‌ ರದ್ದುಗೊಳಿಸಿ, ಲಕ್ಷದ್ವೀಪ ಪ್ರವಾಸ ಕೈಗೊಂಡ ನಟ ನಾಗಾರ್ಜುನ

Last Updated : Jan 15, 2024, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.