ಬಾಲಿವುಡ್ನ ಬಹುನಿರೀಕ್ಷಿತ ಕಿಸಿ ಕ ಭಾಯ್ ಕಿಸಿ ಕಿ ಜಾನ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಟಿ ಪೂಜಾ ಹೆಗ್ಡೆ ಪಾದದ ಗಾಯದಿಂದ ಬಳಲುತ್ತಿದ್ದರೂ ಶೂಟಿಂಗ್ನಿಂದ ತಪ್ಪಿಸಿಕೊಂಡಿಲ್ಲ. ಇತ್ತೀಚೆಗೆ ತಮ್ಮ ಜನ್ಮ ದಿನವನ್ನೂ ನಟಿ ಸೆಟ್ನಲ್ಲೇ ಆಚರಿಸಿಕೊಂಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋ ಕ್ಲಿಪ್ ಒಂದನ್ನು ಪೂಜಾ ಹಂಚಿಕೊಂಡು, ಪಾದದ ಗಾಯದಿಂದ ಬಳಲುತ್ತಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು. ಮತ್ತೊಂದು ಪೋಸ್ಟ್‌ನಲ್ಲಿ ತಾವು ಶೂಟಿಂಗ್ಗೆ ತಯಾರಾಗುತ್ತಿರುವುದಾಗಿಯೂ ಹೇಳಿದ್ದರು.
![Pooja Hegde busy in shooting despite of ankle injury](https://etvbharatimages.akamaized.net/etvbharat/prod-images/61416313906_2110newsroom_1666334604_833.jpg)
ಇತ್ತೀಚೆಗೆ ಮುಂಬೈನಲ್ಲಿ ಕಿಸಿ ಕ ಭಾಯ್ ಕಿಸಿ ಕಿ ಜಾನ್ ಶೂಟಿಂಗ್ ಸೆಟ್‌ನಲ್ಲಿ ಪೂಜಾ ಅವರ ಬರ್ತ್ ಡೇ ಸೆಲೆಬ್ರೇಷನ್ ಆಗಿತ್ತು. ತನ್ನ ಕೆಲಸದ ಜೊತೆ ಹುಟ್ಟುಹಬ್ಬ ಕುರಿತು ಪೋಸ್ಟ್ ಮಾಡಿದ್ದ ಪೂಜಾ, "ಹೊಸ ವರ್ಷಕ್ಕೆ ಕಾಲಿಡಲು ನಾನು ಇಷ್ಟಪಡುವುದನ್ನು (ಶೂಟಿಂಗ್) ಮಾಡುವುದಕ್ಕಿಂತ ಉತ್ತಮವಾದು ಬೇರೆ ಇಲ್ಲ ಎಂದು ಭಾವಿಸುತ್ತೇನೆ'' ಎಂದಿದ್ದರು.
ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಪೂಜಾ ಹೆಗ್ಡೆ.. ಶೂಟಿಂಗ್ ಸೆಟ್‌ನಲ್ಲಿ ಸಲ್ಮಾನ್ ಜೊತೆ ಕೇಕ್ ಕತ್ತರಿಸಿದ ಕನ್ನಡತಿ