ಸ್ಯಾಂಡಲ್‌ವುಡ್‌ಗೆ ಹೊಸ ಪ್ರತಿಭೆಗಳಿಂದ ಕೂಡಿದ ಚಿತ್ರತಂಡವೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಕರ್ಣನ್.ಎಸ್ ಎಂಬವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಸಿನಿಮಾ ಧೀರ ಭಗತ್ ರಾಯ್ ತೆರೆಗೆ ಬರಲು ಸಜ್ಜಾಗಿದೆ.
ಆ್ಯಕ್ಷನ್ ಪೊಲಿಟಿಕಲ್ ಡ್ರಾಮಾ ಆಧಾರಿತ 'ಧೀರ ಭಗತ್ ರಾಯ್' ಅಧಿಕಾರಕ್ಕಾಗಿ ನಡೆಯುವ ಹೋರಾಟ, ಪ್ರೀತಿ, ಮಮತೆಯ ಸುತ್ತ ನಡೆಯುವ ಬಾಂಧವ್ಯದ ಕಥೆಯಾಗಿದೆ. ಪ್ರತಿ ಪಾತ್ರಗಳ ಅಭಿನಯ ನೋಡುಗರ ಮನಮುಟ್ಟಲಿದೆ ಎಂದು ಚಿತ್ರತಂಡ ಹೇಳಿದೆ. ರಾಕೇಶ್ ದಳವಾಯಿ ಹೀರೋ ಆಗಿ ನಟಿಸುತ್ತಿದ್ದಾರೆ. ಸುಚರಿತ ಸಹಾಯರಾಜ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
ಇನ್ನುಳಿದಂತೆ, ಶರತ್ ಲೋಹಿತಾಶ್ವ ವಿಲನ್ ಖದರ್‌ನಲ್ಲಿದ್ದಾರೆ. ಪ್ರವೀಣ್ ಎಚ್.ಸಿ, ತ್ರಿವಿಕ್ರಮ್ ಮಠ ಕೊಪ್ಪಳ, ಸುಧೀರ್ ಕುಮಾರ್ ಮುರೊಳ್ಳಿ, ಗೋವಿಂದ್, ಶಶಿಕುಮಾರ್, ಫಾರೂಕ್ ಅಹ್ಮದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿದೆ.
ಶ್ರೀ ಓಂ ಸಿನಿ ಎಂಟರ್ಟೈನರ್ಸ್ ನಿರ್ಮಾಣದ ಸಿನಿಮಾಗೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ವಿಶ್ವ ಎನ್.ಎಂ. ಸಂಕಲನ, ಎಂ.ಸೆಲ್ವಂ ಜಾನ್ ಛಾಯಾಗ್ರಹಣ, ಕರಿಯಪ್ಪ ಎಸ್.ಪಾಲವ್ವನ ಹಳ್ಳಿ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಇದನ್ನೂ ಓದಿ :'ದಿ ಕಾಶ್ಮೀರ್ ಫೈಲ್ಸ್' ನಟ ಅನುಪಮ್ ಖೇರ್ಗೆ ಪಂಡಿತರಿಂದ ಪೂಜೆ - ವಿಡಿಯೋ