ETV Bharat / entertainment

ಬೆಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿ ಕೇಸ್: ಸಿದ್ಧಾಂತ್ ಕಪೂರ್​ಗೆ ಮತ್ತೆ ಪೊಲೀಸ್​ ನೋಟಿಸ್​ ಸಾಧ್ಯತೆ - ಸಿದ್ಧಾಂತ್ ಕಪೂರ್​ಗೆ ಮತ್ತೆ ಸಂಕಷ್ಟ

ಬೆಂಗಳೂರಿನ ಐಷಾರಾಮಿ ಹೋಟೆಲ್​ ಮೇಲೆ ನಡೆದ ದಾಳಿ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಬಾಲಿವುಡ್‌ನ ಹಿರಿಯ ನಟ ಶಕ್ತಿ ಕಪೂರ್ ಪುತ್ರ, ಸಿದ್ಧಾಂತ್ ಕಪೂರ್​ಗೆ ಪೊಲೀಸರು ನೋಟಿಸ್​ ನೀಡುವ ಸಾಧ್ಯತೆ ಇದೆ.

police-likely-to-issue-notice-to-siddhanth-kapoor-in-drugs-case
ಡ್ರಗ್ಸ್ ಪಾರ್ಟಿ ಪ್ರಕರಣ : ಸಿದ್ಧಾಂತ್ ಕಪೂರ್​ಗೆ ಮತ್ತೆ ಪೊಲೀಸ್​ ನೋಟಿಸ್​ ಸಾಧ್ಯತೆ
author img

By

Published : Jul 20, 2022, 11:35 AM IST

ಬೆಂಗಳೂರು: ನಗರದ ದಿ ಪಾರ್ಕ್ ಹೋಟೆಲ್ ಮೇಲೆ ಹಲಸೂರು ಪೊಲೀಸರು ನಡೆಸಿದ ದಾಳಿ ಪ್ರಕರಣದಲ್ಲಿ ಬಾಲಿವುಡ್ ನಟ ಹಾಗೂ ಡಿ.ಜೆ ಸಿದ್ಧಾಂತ್ ಕಪೂರ್​​ಗೆ ಇನ್ನೂ ಸಂಕಷ್ಟ ತಪ್ಪಿಲ್ಲ. ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟನಿಗೆ ಮತ್ತೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ಜೂನ್ 13ರ ರಾತ್ರಿ ಡ್ರಗ್ಸ್ ಪಾರ್ಟಿ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಹಲಸೂರಿನ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪಾರ್ಟಿಯಲ್ಲಿದ್ದ ಬಾಲಿವುಡ್‌ನ ಹಿರಿಯ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್‌ನನ್ನು ಬಂಧಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಸಿದ್ಧಾಂತ್ ಮಾದಕ ಸೇವಿಸಿರುವುದು ದೃಢಪಟ್ಟಿದ್ದು ನಂತರ ಬಂಧಿಸಲಾಗಿದೆ. ಬಳಿಕ ವಿಚಾರಣೆಯ ವೇಳೆ, "ಅಂದು ತಾನು ನೇರವಾಗಿ ಮಾದಕ ಸೇವಿಸಿಲ್ಲ, ನೀರಿನಲ್ಲಿ ಯಾರೋ ಮಾದಕವಸ್ತು ಬೆರೆಸಿ ಕೊಟ್ಟಿರಬಹುದು" ಎಂದು ಸಿದ್ಧಾಂತ್ ತಿಳಿಸಿದ್ದರು.

police-likely-to-issue-notice-to-siddhanth-kapoor-in-drugs-case
ಸಿದ್ಧಾಂತ್ ಕಪೂರ್

ಇದನ್ನೂ ಓದಿ: ಡ್ರಗ್ಸ್‌ ಪಾರ್ಟಿ: ಜಾಮೀನಿನ ಮೇಲೆ ಹೊರ ಬಂದ ಶಕ್ತಿ ಕಪೂರ್ ಮಗ ಸಿದ್ದಾಂತ್ ಕಪೂರ್

ಪೊಲೀಸರು ಸಿದ್ಧಾಂತ್ ಕಪೂರ್ ಸೇರಿ ನಾಲ್ವರನ್ನು ಬಂಧಿಸಿದ್ದರು. ಸುಮಾರು 35 ಮಂದಿ ಸಿಕ್ಕಿಬಿದ್ದಿದ್ದರು. ಈ ವೇಳೆ ನಡೆಸಿದ ಪರೀಕ್ಷೆಯಲ್ಲಿ ಐವರು ಡ್ರಗ್ಸ್​ ಸೇವಿಸಿರುವುದು ಸಾಬೀತಾಗಿತ್ತು. ಸಿದ್ಧಾಂತ್ ಕಪೂರ್ ಹಾಗೂ ನಾಲ್ವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ ಸೆಕ್ಷನ್ 22ಎ, 22ಬಿ ಮತ್ತು 27ಬಿ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಸದ್ಯ ಪ್ರಕರಣದಲ್ಲಿ ಮತ್ತಷ್ಟು ಸಾಕ್ಷ್ಯಾಧಾರ ಲಭ್ಯವಾಗಿದ್ದು ಸಿದ್ಧಾಂತ್​​​ಗೆ ಒಂದು ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ವಾಟ್ಸ್​​ ಆ್ಯಪ್ ಹಾಗೂ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸುತ್ತಿರುವ ಮಾಹಿತಿ ದೊರೆತಿದೆ.

ಇದನ್ನೂ ಓದಿ: ಹರಿಯಾಣ ಡಿಎಸ್​ಪಿ ಮಾದರಿ ಜಾರ್ಖಂಡ್​ ಮಹಿಳಾ ಪಿಎಸ್​ಐ ಹತ್ಯೆ?: ಆರೋಪಿ ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.