ETV Bharat / entertainment

ರಾಜಸ್ಥಾನದ 'ದಿ ಒಬೆರಾಯ್ ಉದಯ್​​​ವಿಲಾಸ್‌'ನಲ್ಲಿ ಹಸೆಮಣೆ ಏರಲಿದ್ದಾರೆ ಪರಿಣಿತಿ - ರಾಘವ್ - Oberoi Udaivilas in Udaipur

ರಾಜಸ್ಥಾನದ ಐಷಾರಾಮಿ ಪ್ಯಾಲೇಸ್ ಹೋಟೆಲ್​​ 'ದಿ ಒಬೆರಾಯ್ ಉದಯ್​​​ವಿಲಾಸ್‌'ನಲ್ಲಿ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಮದುವೆ ಆಗಲಿದ್ದಾರೆ.

Parineeti Raghav wedding place
ರಾಜಸ್ಥಾನದಲ್ಲಿ ಪರಿಣಿತಿ ರಾಘವ್ ಮದುವೆ
author img

By

Published : Jun 9, 2023, 2:19 PM IST

ಹಿಂದಿ ಚಿತ್ರರಂಗದಲ್ಲಿ ಮತ್ತೊಂದು ಮದೆವೆಗೆ ಭರ್ಜರಿ ತಯಾರಿಗಳು ನಡೆಯುತ್ತಿದೆ. ಬಿ ಟೌನ್ ಸುಂದರಿ ಮನೆಯಲ್ಲಿ ಗಟ್ಟೆಮೇಳ ಬಾರಿಸಲು ಸಿದ್ಧತೆಗಳು ನಡೆಯುತ್ತಿವೆ. 'ಹಸಿ ತೊ ಫಸಿ' ಖ್ಯಾತಿಯ ನಟಿ ಪರಿಣಿತಿ ಚೋಪ್ರಾ ಅವರ ಮದುವೆ ಬಗ್ಗೆ ಅಭಿಮಾನಿಗಳು ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಮದುವೆ ಬಗ್ಗೆ ಮಾಹಿತಿ ಕೊಡುವಂತೆ ಆನ್​ಲೈನ್​ ಫ್ಲಾಟ್​ಪಾರ್ಮ್​ಗಳಲ್ಲಿ ನೆಟ್ಟಿಗರು ಬೇಡಿಕೆ ಇಡುತ್ತಿದ್ದಾರೆ.

ಹೌದು, ಪರಿಣಿತಿ ಚೋಪ್ರಾ ಇದೇ ವರ್ಷ ಮದುವೆಯಾಗಿ ಅತ್ತೆ ಮನೆಗೆ ಬಲಗಾಲಿಡೋದು ಬಹುತೇಕ ಖಚಿತ. ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು ನಟಿ ಪರಿಣಿತಿ ಅವರನ್ನು ವಧುವಾಗಿ ಮನೆಗೆ ಕರೆತರಲು ತಯಾರಿ ಆರಂಭಿಸಿದ್ದಾರೆ. ಕಳೆದ ತಿಂಗಳು ಮೇ 13ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದಿನಿಂದ ತಮ್ಮ ಮದುವೆಗೆ ತಯಾರಿ ನಡೆಸಿದ್ದಾರೆ. ಇತ್ತೀಚೆಗಷ್ಟೇ ಲಂಡನ್​ ವಿಡಿಯೋವೊಂದು ವೈರಲ್​ ಆಗಿ, ಮದುವೆ ಶಾಪಿಂಗ್‌ಗಾಗಿ ಅಲ್ಲಿಗೆ ತೆರಳಿದ್ದಾರೆ ಎಂದು ಹೇಳಲಾಗಿತ್ತು. ಈ ಮಧ್ಯೆ, ಪರಿಣಿತಿ ರಾಘವ್ ಮದುವೆ ಸ್ಥಳದ ಬಗ್ಗೆ ಒಂದು ದೊಡ್ಡ ಅಪ್ಡೇಟ್ ಕೂಡಾ ಹೊರಬಿದ್ದಿದೆ.

ಕೆಲ ದಿನಗಳ ಹಿಂದೆ ಪರಿಣಿತಿ ಮತ್ತು ರಾಘವ್ ಮದುವೆ ಸ್ಥಳದ ಅನ್ವೇಷಣೆಗಾಗಿ ರಾಜಸ್ಥಾನದ ಉದಯಪುರ ತಲುಪಿದ್ದರು. ಸದ್ಯದ ಮಾಹಿತಿ ಪ್ರಕಾರ, ಉದಯಪುರದ ಐಷಾರಾಮಿ ಅರಮನೆ 'ದಿ ಒಬೆರಾಯ್ ಉದಯ್​​​ವಿಲಾಸ್‌'ನಲ್ಲಿ ಪರಿಣಿತಿ ಮತ್ತು ರಾಘವ್ ಮದುವೆ ಆಗಲಿದ್ದಾರೆ. ಒಬೆರಾಯ್ ಉದಯ್​​​ವಿಲಾಸ್ ಬಹಳ ಸುಂದರ ಮತ್ತು ಐಷಾರಾಮಿ ಪ್ಯಾಲೇಸ್​​​​ ಹೋಟೆಲ್​ ಆಗಿದೆ.

ಈ ಅರಮನೆಯು ನಗರದ ಪಿಚೋಲಾ ಸರೋವರದ ದಡದಲ್ಲಿದೆ. ಸುಂದರವಾದ ಸರೋವರದ ಬಳಿಯ ಹಚ್ಚ ಹಸಿರಿನ ನಡುವೆ ಇದೆ. ವರದಿಗಳ ಪ್ರಕಾರ, ಪರಿಣಿತಿ ಮತ್ತು ರಾಘವ್ ಇಲ್ಲಿ ಅತ್ಯಂತ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ಆಗಲಿದ್ದಾರೆ. ಇದು ಡೆಸ್ಟಿನೇಶನ್ ವೆಡ್ಡಿಂಗ್ ಆಗಲಿದೆ. ಮಳೆಗಾಲದ ನಂತರ ಈ ಮದುವೆ ಸಮಾರಂಭ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪರಿಣಿತಿ ರಾಘವ್​ ಲಂಡನ್​ ವಿಡಿಯೋ ಶೇರ್ ಮಾಡಿದ ಅಭಿಮಾನಿ

ಪರಿಣಿತಿ ಚೋಪ್ರಾ ತಮ್ಮ ಸೋದರ ಸಂಬಂಧಿ, ಬಾಲಿವುಡ್​-ಹಾಲಿವುಡ್​ ತಾರೆ ಪ್ರಿಯಾಂಕಾ ಚೋಪ್ರಾ ಅವರಂತೆ ಡೆಸ್ಟಿನೇಷನ್ ವೆಡ್ಡಿಂಗ್ ಕನಸು ಕಾಣುತ್ತಿದ್ದು, ಅದು ಶೀಘ್ರದಲ್ಲೇ ನೆರವೇರಲಿದೆ. ಗ್ಲೋಬಲ್​ ಐಕಾನ್​​​ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕನ್ ಗಾಯಕ ನಿಕ್ ಜೋನಾಸ್ ಅವರೊಂದಿಗೆ ಜೈಪುರದ ಉಮೈದ್ ಭವನ್ ಅರಮನೆಯಲ್ಲಿ ರಾಯಲ್ ಆಗಿ ಮದುವೆ ಆಗಿದ್ದರು. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿತ್ತು. ​

ಇದನ್ನೂ ಓದಿ: ಇನ್​ಸ್ಟಾಗ್ರಾಮ್​ ಪೋಸ್ಟ್​ಗಳನ್ನೆಲ್ಲ ಡಿಲೀಟ್​ ಮಾಡಿದ ಕಾಜೋಲ್​: ಬ್ರೇಕ್​​ ಬೇಕೆಂದ ನಟಿ, ಅಭಿಮಾನಿಗಳಲ್ಲಿ ಆತಂಕ!

ಪ್ರಿಯಾಂಕಾ ಚೋಪ್ರಾ ಅಲ್ಲದೇ ವಿಕ್ಕಿ ಕೌಶಲ್ - ಕತ್ರಿನಾ ಕೈಫ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾಣಿ ಸೇರಿದಂತೆ ಅನೇಕ ಚಲನಚಿತ್ರ ತಾರೆಯರು ರಾಜಸ್ಥಾನದ ವಿವಿಧ ನಗರಗಳ ಐಷಾರಾಮಿ ಅರಮನೆಗಳಲ್ಲಿ ಅದ್ಧೂರಿಯಾಗಿ ಮದುವೆ ಆಗಿ ಗಮನ ಸೆಳೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.