ETV Bharat / entertainment

ಮದುವೆ ವಿಷಯ ಕೇಳುತ್ತಿದ್ದಂತೆ ಕೆನ್ನೆ ಕೆಂಪು ಮಾಡಿಕೊಂಡ ನಟಿ ಪರಿಣಿತಿ ಚೋಪ್ರಾ - Parineeti Chopra marriage

ಸೋಮವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಪರಿಣಿತಿ ಚೋಪ್ರಾ ಕಾಣಿಸಿಕೊಂಡಿದ್ದರು.

actress Parineeti Chopra
ನಟಿ ಪರಿಣಿತಿ ಚೋಪ್ರಾ
author img

By

Published : Apr 25, 2023, 7:58 PM IST

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಈ ಜೋಡಿ ಡೇಟಿಂಗ್​ನಲ್ಲಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ವದಂತಿಗಳಿವೆ. ಈ ರೂಮರ್​ ನಡುವೆ ಲವ್ ಬರ್ಡ್ಸ್​ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಹಾಗಾಗಿ ಸಾರ್ವಜನಿಕವಾಗಿ ನಟಿ ಕಾಣಿಸಿಕೊಂಡಾಗಲೆಲ್ಲಾ, ಪಾಪರಾಜಿಗಳು ರಾಜಕಾರಣಿಯೊಂದಿಗಿನ ಅವರ ವಿವಾಹದ ವಿಷಯವನ್ನು ಕೇಳದೇ ಇರಲಾರರು.

ಸೋಮವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಚೆಲುವೆ ಪರಿಣಿತಿ ಚೋಪ್ರಾ ಬ್ಲ್ಯಾಕ್​ ಕೂಲ್​​ ಲುಕ್​ನಲ್ಲಿ ಕಾಣಿಸಿಕೊಂಡರು. ಅವರ ಬಳಿ ಪಾಪರಾಜಿಗಳು ಮದುವೆಯ ಬಗ್ಗೆ ವಿಚಾರಿಸುತ್ತಲೇ ಇದ್ದರು. ನಟಿ ಮುಂದೆ ಸಾಗುತ್ತಿದ್ದಂತೆ ಇದೇ ಪ್ರಶ್ನೆಯನ್ನು ಕೇಳುತ್ತಲೇ ಇದ್ದರು. ಮದುವೆ ವಿಚಾರಕ್ಕೆ ಪ್ರತಿಕ್ರಿಯೆ ಕೊಡಲಿಲ್ಲ. ಆದ್ರೆ ನಾಚಿ ನೀರಾಗುವುದನ್ನು ತಡೆದುಕೊಳ್ಳಲು ನಟಿಗೆ ಸಾಧ್ಯವಾಗಲಿಲ್ಲ. ಮದುವೆ ದಿನಾಂಕದ ಪ್ರಶ್ನೆಗೆ ಕೆನ್ನೆ ಕೆಂಪು ಮಾಡಿಕೊಂಡು, ಮುಗುಳ್ನಗುತ್ತಾ ಮುಂದೆ ಸಾಗಿದರು.

ಪಾಪರಾಜಿಗಳು ತಮ್ಮನ್ನು ತಾವು 'ಲಡ್ಕಿವಾಲೆ' (ವಧುವಿನ ಕಡೆಯವರು) ಎಂದು ಕರೆದುಕೊಂಡರು. ನಿಮ್ಮ ಮತ್ತು ರಾಘವ್ ಮದುವೆಗೆ ಹೆಣ್ಣಿನ ಕಡೆಯವರಾಗಿ ಹಾಜರಾಗುವುದಾಗಿ ತಿಳಿಸಿದರು. ನಗು ತಡೆಯಲಾಗದೇ ಪರಿಣಿತಿ ಚೋಪ್ರಾ ಪ್ರತಿಕ್ರಿಯಿಸಿದರು. ನೀವು ಹುಚ್ಚರಾಗಿದ್ದೀರಿ ಎಂದು ತಿಳಿಸಿದರು. ಬಳಿಕ ಪರಿಣಿತಿ ಪಾಪರಾಜಿಗಳಿಗೆ ಪೋಸ್ ನೀಡುವುದನ್ನು ನಿಲ್ಲಿಸಿದರು, ಹೊರಡುವ ಮೊದಲು ಕ್ಯಾಮರಾ ಕಡೆ ನೋಡಿ ಮುಗುಳ್ನಕ್ಕರು.

ಪಾಪರಾಜಿಯೋರ್ವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ತಕ್ಷಣ, ನೆಟ್ಟಿಗರು ಮತ್ತು ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಕಾಮೆಂಟ್‌ ವಿಭಾಗಕ್ಕೆ ಸೇರಿದರು. ಓರ್ವರು ಬ್ಲಶಿಂಗ್​ ಬ್ಲಶಿಂಗ್​ ಎಂದು ಕಾಮೆಂಟ್​ ಮಾಡಿದ್ದಾರೆ. ಮತ್ತೋರ್ವರು ನಿಮ್ಮ ಮದುವೆ ಬಗ್ಗೆ ನಾವು ಉತ್ಸುಕರಾಗಿದ್ದೇವೆಂದು ತಿಳಿಸಿದ್ದಾರೆ.

ಇದನ್ನೂ ಓದಿ: KKBKKJ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ: ಮಂಗಳೂರಿಗೆ ಬಂದು ಹೆಬ್ಬಲಸು, ಏಡಿ ಸುಕ್ಕ ಸವಿದ ಪೂಜಾ ಹೆಗ್ಡೆ

ಇತ್ತೀಚಿನ ವರದಿಗಳ ಪ್ರಕಾರ ಪರಿಣಿತಿ ಮತ್ತು ರಾಘವ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ತಮ್ಮ ಉಂಗುರದ ಬೆರಳಿಗೆ ಬೆಳ್ಳಿಯ ಬ್ಯಾಂಡ್ ಅನ್ನು ಧರಿಸಿದ ಹಿನ್ನೆಲೆ ಈ ವದಂತಿಗಳು ಪ್ರಾರಂಭವಾದವು. ಆಪ್ತರ ಪ್ರಕಾರ, ಈ ರೂಮರ್​ ಲವರ್​ ಬರ್ಡ್ಸ್​​ ಅಕ್ಟೋಬರ್‌ನಲ್ಲಿ ಮದುವೆಯಾಗಲಿದ್ದಾರೆ.

ಇದನ್ನೂ ಓದಿ: ಶೂಟಿಂಗ್​ನಲ್ಲಿ ಬ್ಯುಸಿಯಾದ ಮಾಜಿ ವಿಶ್ವಸುಂದರಿ: ಅಭಿಮಾನಿಗಳಲ್ಲಿ ಸಂತಸ

ಮಾರ್ಚ್​ ಕೊನೆಯಲ್ಲಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಡೇಟಿಂಗ್​ ವದಂತಿ ಸಖತ್​ ಸದ್ದು ಮಾಡಿತ್ತು. ಮುಂಬೈನ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ಕೆಲ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಒಟ್ಟಾಗಿ ಆಗಮಿಸಿದ್ದರು. ಹೀಗೆ ಜೊತೆ ಜೊತೆಯಾಗಿ ಕೆಲ ಬಾರಿ ಕಾಣಿಸಿಕೊಂಡ ಹಿನ್ನೆಲೆ ಡೇಟಿಂಗ್​, ಮದುವೆ ವದಂತಿಗೆ ತುಪ್ಪ ಸುರಿದಂತಿದೆ. ಜೋಡಿಯ ಕೆಲ ಫೋಟೋ, ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿ ಸದ್ದು ಮಾಡಿದೆ. ಗಣ್ಯರು ಸಹ ಈ ಜೋಡಿ ಭವಿಷ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಮದುವೆ ದಿನಾಂಕ, ನಿಶ್ಚಿತಾರ್ಥ ಸಂಬಂಧ ಹಲವು ವರದಿಗಳಿದ್ದರೂ, ಈವರೆಗೆ ಯಾವುದೇ ಅಧಿಕೃತ ಮಾಹಿತಿ ಸ್ವತಃ ಈ ಜೋಡಿಯಿಂದ ಬಂದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.