ETV Bharat / entertainment

ರಾಘವ್ ಚಡ್ಡಾ, ಪರಿಣಿತಿ ಚೋಪ್ರಾ ಮದುವೆ ನಂತರದ ಮೊದಲ ಫೋಟೋ - ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ವಿವಾಹ

ಯುವ ರಾಜಕಾರಣಿ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಭಾನುವಾರ ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Parineeti Chopra Raghav Chadha After Wedding  First Pic Of Parineeti Chopra Raghav Chadha  Parineeti Chopra Raghav Chadha are married  ಮದುವೆ ನಂತರದ ಪೋಟೋ ವೈರಲ್​ ನಟಿ ಪರಿಣಿತಿ ಚೋಪ್ರಾ ಮದುವೆ ನಂತರದ ಪೋಟೋ ವೈರಲ್​ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ  ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಮದುವೆ ಸಮಾರಂಭ  ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ವಿವಾಹ  ಆರತಕ್ಷತೆ ಫೋಟೋ ವೈರಲ್​
ರಾಘವ್ ಚಡ್ಡಾ, ನಟಿ ಪರಿಣಿತಿ ಚೋಪ್ರಾ ಮದುವೆ ನಂತರದ ಪೋಟೋ ವೈರಲ್​
author img

By ETV Bharat Karnataka Team

Published : Sep 25, 2023, 8:26 AM IST

ಉದಯಪುರ (ರಾಜಸ್ಥಾನ): ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್‌ ಆದ್ಮಿ ಪಾರ್ಟಿಯ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ವಿವಾಹ ಭಾನುವಾರ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆಯಿತು. ಸರೋವರಗಳ ನಗರ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ನವಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಇದೀಗ ದಂಪತಿಯ ಮೊದಲ ಫೋಟೋ ವೈರಲ್​ ಆಗಿದೆ.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆಯ ಬಗ್ಗೆ ಅಭಿಮಾನಿಗಳಿಗೆ ಭಾರಿ ಕುತೂಹಲವಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ನೂತನ ವಧು-ವರರ ಲೇಟೆಸ್ಟ್‌ ಫೋಟೋಗಳನ್ನು ನೋಡಲು ಮತ್ತು ಸಂಭ್ರಮದ ಬಗ್ಗೆ ತಿಳಿಯಲು ಕಾತರರಾಗಿದ್ದರು. ಆದರೆ ಬಿಗಿ ಭದ್ರತೆಯ ಕಾರಣ ಈ ಇಬ್ಬರು ಕಾಣಿಸಿಕೊಂಡಿರುವ ಒಂದೇ ಒಂದು ಫೋಟೋ ಅಥವಾ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗಲಿಲ್ಲ. ಮದುವೆ ಮೆರವಣಿಗೆಗಳು ಮತ್ತು ಅಲಂಕಾರಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಂಡುಬಂದವು. ಆದರೆ ನವದಂಪತಿಗಳ ದರ್ಶನ ಆಗಿರಲಿಲ್ಲ.

ಆರತಕ್ಷತೆಯ ಫೋಟೋ​ ವೈರಲ್: ಪರಿಣಿತಿ ಮತ್ತು ರಾಘವ್ ಮದುವೆಯ ನಂತರ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಉದಯಪುರದ ಅರಮನೆಯಲ್ಲಿ ಕಾರ್ಯಕ್ರಮ ನಡೆಯಿತು. ಇದರಲ್ಲಿ ಮದುವೆಗೆ ಬಂದಿದ್ದ ಅತಿಥಿಗಳಿಗೆ ಮಾತ್ರ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ವೈರಲ್​ ಆಗ್ತಿರುವ ಫೋಟೋದಲ್ಲಿ ರಾಘವ್ ಕಪ್ಪು ಟುಕ್ಸೆಡೊ ಮತ್ತು ಬಿಳಿ ಶರ್ಟ್ ಧರಿಸಿದ್ದಾರೆ. ಪರಿಣಿತಿ ಚೋಪ್ರಾ ಗುಲಾಬಿ ಬಣ್ಣದ ಸೀರೆ ಮತ್ತು ವರ್ಮಿಲಿಯನ್‌ನಲ್ಲಿ ಮುದ್ದಾಗಿ ಕಾಣಿಸಿದ್ದಾರೆ.

ಪರಿಣಿತಿ ಸೀರೆಗೆ ಹೊಂದುವ ಬಳೆಗಳನ್ನು ಧರಿಸಿದ್ದರು. ಆಕರ್ಷಕ ಆಭರಣಗಳು ಅವರ ಕೊರಳಲ್ಲಿ ಮಿಂಚುತ್ತಿದ್ದವು. ದಂಪತಿಯ ಫೋಟೋ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಮದುವೆ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭಾಗವಹಿಸಿದ್ದರು. ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಪತ್ನಿ ಗೀತಾ ಬಾಸ್ರಾ ಮತ್ತು ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಸಹೋದರಿ ಪ್ರಿಯಾಂಕಾ ಚೋಪ್ರಾ ಗೈರು!: ಪರಿಣಿತಿ ಸಹೋದರಿ, ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಮದುವೆಗೆ ಹಾಜರಾಗಿರಲಿಲ್ಲ. "ನನಗೆ ಮದುವೆಗೆ ಬರಲು ಸಾಧ್ಯವಾಗಲಿಲ್ಲ. ಈ ದಿನ ನೀವು ಸಂತೋಷ ಮತ್ತು ತೃಪ್ತಿ ಹೊಂದಿರುತ್ತೀರಿ ಎಂದು ಭಾವಿಸುತ್ತೇನೆ" ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ಗೆ ಪಾಲಿಟಿಕ್ಸ್​ ನಂಟು.. ರಾಜಕಾರಣಿಗಳ ಪ್ರೀತಿಗೆ ಬಿದ್ದ ಸ್ಟಾರ್​ ನಟಿಯರಿವರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.