ETV Bharat / entertainment

ಶೂಟಿಂಗ್​ ಸೆಟ್​ನಲ್ಲಿ ಸಲ್ಮಾನ್​​ ಖಾನ್​ ಡ್ರೆಸ್ ರೂಲ್ಸ್​: ಸ್ಪಷ್ಟನೆ ಕೊಟ್ಟ ಪಲಕ್​ ತಿವಾರಿ - Salman khan

ಸಲ್ಮಾನ್​​ ಖಾನ್ ಬಗ್ಗೆ ನಾನು ಕೊಟ್ಟ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ನಟಿ ಪಲಕ್​​ ತಿವಾರಿ ತಿಳಿಸಿದ್ದಾರೆ.

Palak Tiwari on Salman khan
ಸಲ್ಮಾನ್​​ ಖಾನ್ ಬಗ್ಗೆ ಪಲಕ್​​ ತಿವಾರಿ ಹೇಳಿಕೆ
author img

By

Published : Apr 15, 2023, 4:33 PM IST

ಬಾಲಿವುಡ್​ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​​ ಅವರ ಬಹು ನಿರೀಕ್ಷಿತ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ​ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಶ್ವೇತಾ ತಿವಾರಿ ಪುತ್ರಿ ಪಲಕ್​​ ತಿವಾರಿ ಅವರ ಚೊಚ್ಚಲ ಬಾಲಿವುಡ್​ ಚಿತ್ರವಿದು. ಇದೇ ಏಪ್ರಿಲ್​​ 21ರಂದು ಥಯೇಟರ್​ಗಳಲ್ಲಿ ಚಿತ್ರ ತೆರೆಕಾಣಲಿದ್ದು, ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ನಟಿ ಪಲಕ್ ತಿವಾರಿ ಕೂಡ ಸಿನಿಮಾ ಪ್ರಮೋಶನ್​ ಮಾಡುತ್ತಿದ್ದು, ಸಲ್ಮಾನ್​ ಖಾನ್​ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದರು. ಸಲ್ಮಾನ್ ಅವರ ಆ ವರ್ತನೆ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದ್ದು, ಪಲಕ್​ ತಿವಾರಿ ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪಲಕ್​ ತಿವಾರಿ ಸ್ಪಷ್ಟನೆ: ಸಂದರ್ಶನವೊಮದರಲ್ಲಿ ಮಾತನಾಡಿರುವ ನಟಿ, ನಾನು ಏನೇ ಹೇಳಿದರೂ ತಪ್ಪಾಗಿ ಅರ್ಥೈಸಲಾಗುತ್ತಿದೆ. ನಮ್ಮ ಹಿರಿಯರ ಮುಂದೆ ನಾವು ಹೇಗೆ ಡ್ರೆಸ್ ಮಾಡಿಕೊಳ್ಳಬೇಕು? ಎಂಬ ಉದ್ದೇಶದಿಂದ ಮಾತನಾಡಿದ್ದೆ. ಸಲ್ಮಾನ್ ಸರ್ ಕೂಡ ಹಿರಿಯರು ಎಂದು ಹೇಳಿದ್ದಾರೆ.

ಸಲ್ಮಾನ್​​ ಖಾನ್ ಬಗ್ಗೆ ಪಲಕ್​​ ತಿವಾರಿ ಹೇಳಿಕೆ: 'ಅಂತಿಮ್​ ದಿ ಫೈನಲ್​ ಟ್ರುತ್' ಸೆಟ್‌ನಲ್ಲಿ ಮಹಿಳೆಯರು ನೆಕ್‌ಲೈನ್ ಇರುವ ಡ್ರೆಸ್​​ ಧರಿಸಬೇಕೆಂದು ಸಲ್ಮಾನ್​​ ಸರ್ ತಿಳಿಸಿದ್ದರು. ಸುರಕ್ಷತಾ ದೃಷ್ಟಿ ಇಂದ ಮೈ ಮುಚ್ಚುವಂತಹ ಉಡುಗೆ ಧರಿಸಿ ಎಂದು ಹೇಳಿದ್ದರೆಂದು ನಟಿ ಪಲಕ್​ ತಿವಾರಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರದ್ದು "ಸಾಂಪ್ರದಾಯಿಕ ವ್ಯಕ್ತಿತ್ವ". ಮಹಿಳೆಯರ ಉಡುಗೆ ವಿಚಾರದಲ್ಲಿ ಅವರ ಯಾವುದೇ ತಕರಾರಿಲ್ಲ. ಆದ್ರೆ ''ಹುಡುಗಿಯರು ಯಾವಾಗಲೂ ರಕ್ಷಿಸಲ್ಪಡಬೇಕು" ಎಂದು ಹೇಳುತ್ತಾರೆ. ನಮಗೆ ಮುಜುಗರ ಆಗದಿರಲಿ ಮತ್ತು ರಕ್ಷಣೆ ದೃಷ್ಟಿಯಿಂದ ಅವರು ಮೈ ಮುಚ್ಚುವಂತಹ ಉಡುಗೆ ತೊಡಿ ಎಂದು ಹೇಳಿದ್ದರೆಂದು ನಟಿ ತಿಳಿಸಿದ್ದರು.

ಅಂತಿಮ್​ ದಿ ಫೈನಲ್​ ಟ್ರುತ್ ಸಿನಿಮಾದಲ್ಲಿ ಪಲಕ್ ತಿವಾರಿ ಸಹಾಯಕ ನಿರ್ದೇಶಕಿಯಾಗಿದ್ದರು. ಈ ಚಿತ್ರ 2021ರಲ್ಲಿ ಬಿಡುಗಡೆ ಆಗಿತ್ತು. ಆಯುಶ್​ ಶರ್ಮಾ ನಟನೆಯ ಈ ಚಿತ್ರಕ್ಕೆ ಸಲ್ಮಾನ್​ ಖಾನ್​ ಬಂಡವಾಳ ಹೂಡುವುದರ ಜೊತೆಗೆ ನಟನೆ ಕೂಡ ಮಾಡಿದ್ದರು. ಹಾಗಾಗಿ ಅಂತಿಮ್​ ದಿ ಫೈನಲ್​ ಟ್ರುತ್ ಶೂಟಿಂಗ್​ ಸೆಟ್​ನಲ್ಲಿ ಸಲ್ಮಾನ್​ ಕೆಲ ನಿಮಯಗಳನ್ನು ಜಾರಿಗೆ ತಂದಿದ್ದರು. ಮಹಿಳೆಯರಿಗೆ ಡ್ರೆಸ್ ಕೋಡ್​ ಇದ್ದ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: 'ಮೊದಲು ಜಾನ್​​ ಅಂತಾರೆ, ನಂತ್ರ ಜೀವ​​ ತೆಗೀತಾರೆ': ಬಾಲಿವುಡ್​ ಬ್ಯಾಚುಲರ್​ ಸಲ್ಲು

ಬಾಲಿವುಡ್​ ನಟ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್ ಅವರೊಂದಿಗೆ ರೆಸ್ಟೋರೆಂಟ್‌ನಲ್ಲಿ ಪಲಕ್​​ ತಿವಾರಿ ಕಾಣಿಸಿಕೊಂಡ ನಂತರ ಡೇಟಿಂಗ್​​ ವದಂತಿ ಹರಡಿದೆ. ಇಬ್ರಾಹಿಂ ಅಲಿ ಖಾನ್ ಜೊತೆಗಿನ ಸಂಬಂಧದ ಬಗ್ಗೆಯೂ ನಟಿ ಮೌನ ಮುರಿದಿದ್ದಾರೆ. ತಾನು ಮತ್ತು ಇಬ್ರಾಹಿಂ ಒಳ್ಳೆಯ ಸ್ನೇಹಿತರು ಮತ್ತು ಪಾರ್ಟಿಯಲ್ಲಿ ಭೇಟಿಯಾಗುತ್ತಿರುತ್ತೇವೆ. ಇದರ ಹೊರತಾಗಿ ತನಗೂ ಇಬ್ರಾಹಿಂಗೂ ಯಾವುದೇ ಸಂಬಂಧವಿಲ್ಲ ಎಂದು ಪಲಕ್ ತಿಳಿಸಿದರು. ಅದೇ ಸಮಯದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಹಳ ಶಾಂತ ವ್ಯಕ್ತಿತ್ವ ಉಳ್ಳವರು ಎಂದು ಪಲಕ್ ಬಣ್ಣಿಸಿದ್ದಾರೆ.

ಇದನ್ನೂ ಓದಿ: 'ಸಲ್ಮಾನ್​ ಖಾನ್​ ಸಿನಿಮಾಗಳ ಸೆಟ್​ನಲ್ಲಿ ನಟಿಯರು ಮೈಮುಚ್ಚುವಂತಹ ಬಟ್ಟೆ ತೊಡಬೇಕು'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.