ETV Bharat / entertainment

ಭಾರತೀಯ ತಾರೆ ಪ್ರಿಯಾಂಕಾ ಚೋಪ್ರಾಗೆ ಕ್ಲಾಸ್ ಕೊಟ್ಟ ಪಾಕಿಸ್ತಾನಿ ನಟ - ಪಾಕಿಸ್ತಾನಿ ನಟ ಅದ್ನಾನ್ ಸಿದ್ದಿಕಿ

ನಟಿ ಪ್ರಿಯಾಂಕಾ ಚೋಪ್ರಾ ಅವರು ಇತ್ತೀಚೆಗೆ ಚಲನಚಿತ್ರ ನಿರ್ದೇಶಕಿ ಶರ್ಮೀನ್ ಒಬೈದ್ ಚಿನೋಯ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಪಾಕಿಸ್ತಾನಿ ನಟ ಅದ್ನಾನ್ ಸಿದ್ದಿಕಿ ಈ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

Adnan Siddiqui criticized Priyanka Chopra
ಪ್ರಿಯಾಂಕಾ ಚೋಪ್ರಾ ಟೀಕಿಸಿದ ಅದ್ನಾನ್ ಸಿದ್ದಿಕಿ
author img

By

Published : Apr 15, 2023, 1:57 PM IST

ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಜೋನಾಸ್ ಇತ್ತೀಚೆಗೆ ತಾವು ಪಾಲಿಟಿಕ್ಸ್​​ ಕಾರಣದಿಂದ ಬಾಲಿವುಡ್ ತೊರೆದಿದ್ದೇನೆ ಎಂದು ಬಹಿರಂಗಪಡಿಸಿ ಸುದ್ದಿ ಆಗಿದ್ದರು. ಬಳಿಕ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್​ ಉದ್ಘಾಟನೆಗೆ ಕುಟುಂಬ ಸಮೇತ ಭಾರತಕ್ಕೆ ಅಗಮಿಸಿ ಸದ್ದು ಮಾಡಿದ್ದರು. ಇದೀಗ ಮತ್ತೊಂದು ವಿಚಾರವಾಗಿ ನಟಿ ಹೆಡ್​​ಲೈನ್​ನಲ್ಲಿದ್ದಾರೆ. ಹೌದು, ಇದೀಗ ಪಾಕಿಸ್ತಾನಿ ನಟರೊಬ್ಬರು ಪ್ರಿಯಾಂಕಾ ಚೋಪ್ರಾ ಅವರನ್ನು ಟ್ರೋಲ್ ಮಾಡಿದ್ದಾರೆ. ಪ್ರಿಯಾಂಕಾ ಅವರ ಜ್ಞಾನವನ್ನು ಸುಧಾರಿಸಿಕೊಳ್ಳಲು ಕೇಳಿಕೊಂಡಿದ್ದಾರೆ. ಆದರೆ ಈ ಹೇಳಿಕೆ ಮೂಲಕ ಸ್ವತಃ ಪಾಕ್​ ನಟನೇ ಟ್ರೋಲ್​ಗೆ ಒಳಗಾಗಿದ್ದಾರೆ.

  • With due respect, @priyankachopra . Sharmeen Obaid Chinoy is a Pakistani first just to brush up your knowledge. Much like the way you flaunt your Indian nationality whenever you get the opportunity before claiming to be a South Asian.🙏🏽 pic.twitter.com/B7wy8gD8QB

    — Adnan Siddiqui (@adnanactor) April 14, 2023 " class="align-text-top noRightClick twitterSection" data=" ">

''ಶರ್ಮೀನ್ ಒಬೈದ್ ಚಿನೋಯ್ ಅವರು ಕಲರ್ಸ್‌ನ ಮೊದಲ ಮಹಿಳೆ ಮತ್ತು ಸ್ಟಾರ್ ವಾರ್ಸ್ ಚಲನಚಿತ್ರವನ್ನು ನಿರ್ದೇಶಿಸಿದ ಮೊದಲ ಮಹಿಳೆ. ಅವರು ದಕ್ಷಿಣ ಏಷ್ಯಾದವರು. ಎಂಥಾ ಐತಿಹಾಸಿಕ ಕ್ಷಣ, ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇನೆ'' ಎಂದು ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.

ಶರ್ಮೀನ್ ಒಬೈದ್ ಚಿನೋಯ್ ಅವರನ್ನು ಶ್ಲಾಘಿಸುವ ಪ್ರಿಯಾಂಕಾ ಚೋಪ್ರಾ ಅವರ ಪೋಸ್ಟ್‌ಗೆ, ಮಾಮ್‌ ಚಿತ್ರದಲ್ಲಿ ಶ್ರೀದೇವಿ ಅವರೊಂದಿಗೆ ನಟಿಸಿದ ಪಾಕಿಸ್ತಾನಿ ನಟ ಅದ್ನಾನ್ ಸಿದ್ದಿಕಿ (Adnan Siddiqui) ಪ್ರತಿಕ್ರಿಯಿಸಿದ್ದಾರೆ. ಅವರು, ಪ್ರಿಯಾಂಕಾ ಅವರ ಪಾಕ್​​ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ.

ಪಾಕಿಸ್ತಾನಿ ನಟ ಅದ್ನಾನ್ ಸಿದ್ದಿಕಿ ತಮ್ಮ ಟ್ವಿಟರ್​ ಖಾತೆಯಲ್ಲಿ, ''ಗೌರವದೊಂದಿಗೆ ಪ್ರಿಯಾಂಕಾ ಚೋಪ್ರಾ ಅವರೇ, ಶರ್ಮೀನ್ ಒಬೈದ್ ಚಿನೋಯ್ ಅವರು ಪಾಕಿಸ್ತಾನಿ. ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ ನೀವು ದಕ್ಷಿಣ ಏಷ್ಯಾದವರು ಎನ್ನುವುದಕ್ಕಿಂದ ನೀವು ನಿಮ್ಮ ಭಾರತೀಯ ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವ ರೀತಿಯಂತೆ ಇದನ್ನು ಸರಿಪಡಿಸಿಕೊಳ್ಳಿ'' ಎಂದು ಟ್ವೀಟ್ ಮಾಡಿದ್ದಾರೆ. ಪಾಕ್​ ನಟನ ಟ್ವೀಟ್ ವೈರಲ್​ ಆಗುತ್ತಿದ್ದು, ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪಾಕಿಸ್ತಾನವು ದಕ್ಷಿಣ ಏಷ್ಯಾದ ಒಂದು ದೇಶ. ಆ ಹಿನ್ನೆಲೆಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವನ್ನು ಉಲ್ಲೇಖಿಸದೇ ಇರುವುದು ಪಾಕಿಸ್ತಾನಿ ನಟನ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಟನ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಪತಿಗೆ ಮುತ್ತು ಕೊಟ್ಟು ನಾಚಿದ ಆಲಿಯಾ: ಪಾಪರಾಜಿಗಳ ಕಣ್ಣಿಗೆ ಬಿದ್ದ ದೃಶ್ಯ

ಪಾಕಿಸ್ತಾನಿ ನಟ ಅದ್ನಾನ್ ಸಿದ್ದಿಕಿ ಈ ರೀತಿ ಟೀಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಮುಖ್ಯಭೂಮಿಕೆಯ ಮಿಷನ್ ಮಜ್ನು ಸಿನಿಮಾ ಬಗ್ಗೆಯೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಜನವರಿಯಲ್ಲಿ ತೆರೆಕಂಡ ಮಿಷನ್ ಮಜ್ನು ಚಿತ್ರದಲ್ಲಿ ಪಾಕಿಸ್ತಾನಿಗಳನ್ನು ತಪ್ಪಾಗಿ ತೋರಿಸಲಾಗಿದೆ. ಸಿನಿಮಾ ಅಸಹ್ಯಕರ ಮತ್ತು 'ವಾಸ್ತವವಾಗಿ ತಪ್ಪಾಗಿದೆ'. ಅಲ್ಲದೇ 'ಕಳಪೆ ಕಥೆ, ಕಳಪೆ ಕಾರ್ಯಗತಗೊಳಿಸುವಿಕೆ, ಕಳಪೆ ಸಂಶೋಧನೆ' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ ನಿಮ್ಮ ಹಣ ಇಟ್ಟುಕೊಂಡು ಬನ್ನಿ, ಇಲ್ಲಿ ಸಂಶೋಧನೆ ಮಾಡಿ ಎಂದು ಸಹ ತಿಳಿಸಿದ್ದರು.

ಇದನ್ನೂ ಓದಿ: ಅಭಿಮಾನಿಗಳಿಗೆ ಸಮಯ ಕೊಟ್ಟ ಕತ್ರಿನಾ ಕೈಫ್​ - ವಿಕ್ಕಿ ಕೌಶಲ್ ದಂಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.