ETV Bharat / entertainment

ನಟಿ ಭಾರತಿ ತರ ಇರೋ ಹುಡುಗಿ ಮದುವೆ ಆಗ್ಬೇಕು ಅಂತಾ ಅನಿಸುತ್ತಿತ್ತು: ಹಳೆ ನೆನಪು ಮೆಲುಕು ಹಾಕಿದ ಜಗ್ಗೇಶ್ - ಹಳೆ ನೆನಪು ಮೆಲುಕು ಹಾಕಿದ ಜಗ್ಗೇಶ್

ಮದುವೆಯಾದರೆ ನಟಿ ಭಾರತಿ ತರ ಇರುವ ಹುಡುಗಿಯನ್ನ ಮದುವೆ ಆಗಬೇಕು ಅಂದುಕೊಂಡಿದ್ದೆ. ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದ ನವರಸ ನಾಯಕ ಜಗ್ಗೇಶ್.

Padavi poorva new kannada movie teaser released
ಪದವಿ ಪೂರ್ವ ಚಿತ್ರದ ಟೀಸರ್ ಬಿಡುಗಡೆ
author img

By

Published : Dec 7, 2022, 10:10 AM IST

ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ನಟ ಜಗ್ಗೇಶ್ ಸಿನಿಮಾ ಜತೆಗೆ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸನ್ನು ಹೊಂದಿದ್ದಾರೆ. ನಟನೆ ಜತೆಗೆ ಕನ್ನಡ ಭಾಷೆ ಬಗ್ಗೆ ಹೆಚ್ಚು ಅಭಿಮಾನ ಹೊಂದಿರುವ ಅವರು, ಚಿತ್ರರಂಗದ ಹೊಸ ಪ್ರತಿಭೆಗಳನ್ನು ಬೆಳೆಸುವ ಗುಣ ಹೊಂದಿದ್ದಾರೆ. ನಿಜ‌ ಜೀವನದಲ್ಲೂ ‌ಪ್ರೀತಿಸಿ ಮದುವೆ ಆಗಿರುವ ಜಗ್ಗೇಶ್ ಅವರಿಗೆ ಕಾಲೇಜು ದಿನಗಳಲ್ಲಿ ಬಹುಭಾಷಾ ನಟಿ ಭಾರತಿಯವರು ಇಷ್ಟ ಅಂತಾ ಹೇಳುವ ಮೂಲಕ ನಗೆ ಚಟಾಕಿ ಹಾರಿಸಿದ್ದಾರೆ.

ಅಷ್ಟಕ್ಕೂ ಜಗ್ಗೇಶ್ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳಲು ಕಾರಣ ಯೋಗರಾಜ್ ಭಟ್ ಮೂವಿಸ್ ಹಾಗೂ ರವಿ ಶಾಮನೂರ್ ಫಿಲಮ್ಸ್ ಬ್ಯಾನರ್​​ನಲ್ಲಿ ನಿರ್ಮಾಣವಾಗಿರುವ 'ಪದವಿ ಪೂರ್ವ' ಸಿನಿಮಾ. ಹರಿಪ್ರಸಾದ್ ಜಯಣ್ಣ ಆ್ಯಕ್ಷನ್ ಕಟ್ ಹೇಳಿರುವ, ಯುವ ನಟ ಪೃಥ್ವಿ ಶಾಮನೂರ್, ಅಂಜಲಿ ಅನೀಶ್, ಯಶ ಶಿವಕುಮಾರ್ ಅಭಿನಯದ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲು ವಿಶೇಷ ಅತಿಥಿಯಾಗಿ ಆಗಮಿಸಿದ್ದ ಜಗ್ಗೇಶ್ ಅವರು 15 ಹಾಗೂ 16ನೇ ವಯಸ್ಸಿನ ಹುಡುಗ ಹುಡುಗಿಯ ಮನಸ್ಥಿತಿ ಬಗ್ಗೆ ತಮ್ಮದೇ ಶೈಲಿಯಲ್ಲಿ ಹೇಳಿದರು.

Actress Bharti
ನಟಿ ಭಾರತಿ ವಿಷ್ಣುವರ್ಧನ್

ನವರಸ ನಾಯಕ ಜಗ್ಗೇಶ್ ಅವರಿಗೆ ಕಾಲೇಜು ದಿನಗಳಲ್ಲಿ ನಟಿ ಭಾರತಿಯವರು ಅಂದ್ರೆ ಇಷ್ಟವಂತೆ. ಮದುವೆಯಾದರೆ ಭಾರತಿ ತರ ಇರುವ ಹುಡುಗಿಯನ್ನು ಮದುವೆ ಆಗಬೇಕು ಅಂದುಕೊಂಡಿದ್ದರಂತೆ. ಅಷ್ಟೇ ಅಲ್ಲ, ಆ ವಯಸ್ಸಿನಲ್ಲಿ ನಾವು ಸರಿ ದಾರಿಯಲ್ಲಿ ಹೋದರೆ ಸ್ನೇಹಿತರು ಹೇಗೆ ನಮ್ಮನ್ನು ಹಾಳು ಮಾಡುತ್ತಿದ್ದರು ಅಂತಾ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು.

ಪದವಿ ಪೂರ್ವ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಜಗ್ಗೇಶ್​​

ಇನ್ನು, ನನ್ನಂಥ ಕಪ್ಪಗಿರುವನನ್ನು ಕನ್ನಡ ಚಿತ್ರರಂಗ ಒಪ್ಪಿಕೊಳ್ಳಲು ಕಾರಣ ನಾನು ಜೀವನದಲ್ಲಿ ಬಂದ ಸಮಸ್ಯೆಗಳನ್ನು ಎದುರಿಸಿದ್ದು. ಇಂದು ಈ‌ ಮಟ್ಟಕ್ಕೆ ಬಂದಿದ್ದೇನೆ. ಇಲ್ಲ ಅಂದಿದ್ದರೇ ನಾನು ಆಟೋ ಓಡಿಸಿಕೊಂಡು ಇರಬೇಕಿತ್ತು ಎಂದು ಉದಾಹರಣೆ ‌ಸಮೇತ ಯುವಕರಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ: ಬೆಳ್ಳಿ ತೆರೆಗೆ ಚೆಂದುಳ್ಳಿ ಚೆಲುವೆ ಕರೆತಂದ ಭಟ್ಟರು.. ಈಗಿವಳೇ 'ಪದವಿ ಪೂರ್ವ'ವಿದ್ಯಾರ್ಥಿನಿ!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.