ETV Bharat / entertainment

"RRR​ ಪ್ರತಿ ಭಾರತೀಯನ ಹೆಮ್ಮೆ": ಆಸ್ಕರ್​ ಪ್ರಶಸ್ತಿ ಸ್ವೀಕರಿಸಿ ಚಿತ್ರತಂಡ ಭಾವುಕ - ಈಟಿವಿ ಭಾರತ ಕನ್ನಡ

ಪ್ರತಿಷ್ಟಿತ ಆಸ್ಕರ್​ ಪ್ರಶಸ್ತಿ ಘೋಷಿಸುತ್ತಿದ್ದಂತೆ ಆರ್​ಆರ್​ಆರ್​ ತಂಡ ಭಾವುಕರಾದರು.

RRR
ಆರ್​ಆರ್​ಆರ್
author img

By

Published : Mar 13, 2023, 12:43 PM IST

ಭಾರತದ ಖ್ಯಾತ ನಿರ್ದೇಶಕ ಎಸ್.​ಎಸ್.ರಾಜಮೌಳಿ ಅವರ ಆರ್​ಆರ್​ಆರ್​ ಸಿನಿಮಾದ ಸೂಪರ್​ಹಿಟ್​ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್​ ಪ್ರಶಸ್ತಿ ಪಡೆದುಕೊಂಡಿದೆ. ಈ ಮೂಲಕ ಬೆಸ್ಟ್​ ಒರಿಜಿನಲ್​ ಸಾಂಗ್​ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಗೀತೆಯಾಗಿ ಹೊರಹೊಮ್ಮಿದೆ. ಈ ಪ್ರಶಸ್ತಿಯನ್ನು ನಾಟು ನಾಟು ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್​ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ನಿರೂಪಕರಾದ ಜಾನೆಲ್ಲೆ ಮೊನೆ ಮತ್ತು ಕೇಟ್​ ಹಡ್ಸನ್​ ಅವರು ಅತ್ಯುತ್ತಮ ಮೂಲ ಗೀತೆ ವಿಜೇತರನ್ನು ಘೋಷಿಸುತ್ತಿದ್ದಂತೆ ಆರ್​ಆರ್​ಆರ್​ ತಂಡ ಭಾವುಕರಾದರು. ನಿರ್ದೇಶಕ ರಾಜಮೌಳಿ ಮತ್ತು ಅವರ ಕುಟುಂಬ ಎದ್ದು ನಿಂತು ಸಂತೋಷ ವ್ಯಕ್ತಪಡಿಸಿದರು. ಆರ್​ಆರ್​ಆರ್​ ತಂಡವು ವೇದಿಕೆಯ ಮುಂಭಾಗದ ಕೊನೆಯ ಸಾಲಿನಲ್ಲಿ ಕುಳಿತಿದ್ದರು. ಪ್ರಶಸ್ತಿ ಘೋಷಿಸುವವರೆಗೂ ಉಸಿರನ್ನು ಬಿಗಿ ಹಿಡಿದು ಕಾಯುತ್ತಿದ್ದರು. ಅವಾರ್ಡ್​ ಅನೌನ್ಸ್​ ಆದ ತಕ್ಷಣ ರಾಜಮೌಳಿ ಸೇರಿದಂತೆ ತಂಡದವರು ಒಮ್ಮೆಲೇ ಹಾರಿ ಕುಣಿದರು.

ಇದನ್ನೂ ಓದಿ: RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್‌ ಗರಿ!

ಸಂಗೀತ ಸಂಯೋಜಕ ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್​ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಂತೆ ಜೂನಿಯರ್​ ಎನ್​ಟಿಆರ್​, ರಾಮ್​ಚರಣ್​ ಸೇರಿದಂತೆ ಆರ್​ಆರ್​ಆರ್​ ತಂಡದವರು ವಿಜೇತರನ್ನು ಹುರಿದುಂಬಿಸಿದರು. ವೇದಿಕೆಯಲ್ಲಿ ಮಾತನಾಡಿದ ಕೀರವಾಣಿ, "ಧನ್ಯವಾದಗಳು ಅಕಾಡೆಮಿ. ನನ್ನ ಮನಸ್ಸಿನಲ್ಲಿ ಆಸ್ಕರ್​ ಗೆಲ್ಲಬೇಕೆಂಬ ಆಸೆ ಇತ್ತು. ಕೊನೆಗೂ ಪಡೆದುಕೊಂಡಿದ್ದೇನೆ. ಹಾಗೆಯೇ ರಾಜಮೌಳಿ ಮತ್ತು ನನ್ನ ಕುಟುಂಬಕ್ಕೂ ಧನ್ಯವಾದಗಳು. ಆರ್​ಆರ್​ಆರ್​ ಪ್ರತಿಯೊಬ್ಬ ಭಾರತೀಯನ ಹೆಮ್ಮೆ" ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು.

ದೀಪಿಕಾ ಪಡುಕೋಣೆ ಭಾವುಕ: ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಆಸ್ಕರ್​ ವೇದಿಕೆಯಲ್ಲಿ ನಾಟು ನಾಟು ಹಾಡನ್ನು ಹೆಮ್ಮೆಯಿಂದ ಪರಿಚಯಿಸಿದರು. ಬಳಿಕ ಈ ಹಾಡು ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಪಡೆದಾಗ ಅವರು ಭಾವುಕರಾದರು. ಈ ಸುಸಂದರ್ಭದಲ್ಲಿ ಅವರಿಗೆ ಭಾವನೆಯನ್ನು ಹೆಚ್ಚು ತಡೆಯಲು ಸಾಧ್ಯವಾಗದೇ ಕಣ್ಣುಗಳು ತೇವಗೊಂಡವು. ದೀಪಿಕಾ ಆನಂದಭಾಷ್ಪ ಸುರಿಸಿದ್ದು, ಆಸ್ಕರ್​ 2023 ರ ವಿಡಿಯೋದಲ್ಲಿದೆ.

ಇದನ್ನೂ ಓದಿ: 'ಆರ್‌ಆರ್‌ಆರ್‌', 'ದ ಎಲಿಫೆಂಟ್‌ ವಿಸ್ಪರರ್ಸ್‌' ಆಸ್ಕರ್ ಸಾಧನೆ: ಪ್ರಧಾನಿ ಮೋದಿ ಅಭಿನಂದನೆ

ಆಸ್ಕರ್​ 2023 ಪ್ರಶಸ್ತಿಗೆ ಭಾರತದ ನಾಟು ನಾಟು ಹಾಡು ಮತ್ತು ಲಿಫ್ಟ್​ ಮಿ ಅಪ್​, ದಿಸ್​ ಈಸ್​ ಲೈಫ್​, ಹೋಲ್ಡ್​ ಮೈ ಹ್ಯಾಂಡ್​, ಅಪ್ಲೌಸ್​ ಹಾಡುಗಳು ನಾಮನಿರ್ದೇಶನಗೊಂಡಿದ್ದವು. ಈ ಎಲ್ಲಾ ಹಾಡುಗಳನ್ನು ಹಿಂದಿಕ್ಕಿ ಪ್ರತಿಷ್ಟಿತ ಪ್ರಶಸ್ತಿಯನ್ನು ನಾಟು ನಾಟು ಹಾಡು ಪಡೆದುಕೊಂಡಿದೆ. ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​, ಗೋಲ್ಡನ್​ ಗ್ಲೋಬ್​, ಹಾಲಿವುಡ್​ ಮ್ಯೂಸಿಕ್​ ಇನ್​ ಮೀಡಿಯಾ ಅವಾರ್ಡ್ಸ್​ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರಕಿವೆ.

ಇದನ್ನೂ ಓದಿ: 'ದ ಎಲಿಫೆಂಟ್‌ ವಿಸ್ಪರರ್ಸ್‌' ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಒಲಿದು ಬಂತು ಆಸ್ಕರ್‌ ಪ್ರಶಸ್ತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.