ಆಸ್ಕರ್ ಅವಾರ್ಡ್ ಪ್ರಪಂಚದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಪ್ರಮುಖವಾದದ್ದು. ಈ ಸಾಲಿನ ಆಸ್ಕರ್ ಅವಾರ್ಡ್ ಮೇಲೆ ಭಾರತದ ವಿಶೇಷವಾಗಿ ಸೌತ್ ಸಿನಿಮಾ ಇಂಡಸ್ಟ್ರಿಯ ಹೆಚ್ಚಿನ ಗಮನ ಕೇಂದ್ರೀಕೃತವಾಗಿದೆ. ಭಾರತದ ಹಲವು ಸಿನಿಮಾಗಳು ಆಸ್ಕರ್ ಅಂಗಳದಲ್ಲಿದ್ದು, ಪ್ರಶಸ್ತಿ ಯಾರ ಪಾಲಾಗಲಿದೆ ಎಂಬುದು ಸಿನಿಮಾ ಇಂಡಸ್ಟ್ರಿ ಜೊತೆಗೆ ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿದೆ. 95ನೇ ಆಸ್ಕರ್ ಸಮಾರಂಭದ ನಾಮ ನಿರ್ದೇಶನಗಳ ಸಂಪೂರ್ಣ ಪಟ್ಟಿ ಇಂದು ಸಂಜೆ 6:50ಕ್ಕೆ ಹೊರಬೀಳಲಿದೆ.
ಆಸ್ಕರ್ 2023 ನಾಮನಿರ್ದೇಶನಗಳನ್ನು ಘೋಷಿಸುವ ಕಾರ್ಯಕ್ರಮವನ್ನು ಅಲ್ಲಿಸನ್ ವಿಲಿಯಮ್ಸ್ ಮತ್ತು ರಿಝ್ ಅಹ್ಮದ್ ( Allison Williams and Riz Ahmed ) ಆಯೋಜಿಸುತ್ತಾರೆ ಎಂದು ಅಕಾಡೆಮಿ ತಿಳಿಸಿದೆ. ರಿಝ್ ಅಹ್ಮದ್ ತಮ್ಮ ಕಿರುಚಿತ್ರಕ್ಕಾಗಿ (The Long Goodbye) 2022ರಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದಾರೆ. 2021ರಲ್ಲಿ ಸೌಂಡ್ ಆಫ್ ಮೆಟಲ್‌ನಲ್ಲಿನ ಅಭಿನಯಕ್ಕಾಗಿ ಆಸ್ಕರ್ನಲ್ಲಿ ಅತ್ಯುತ್ತಮ ನಟ ನಾಮನಿರ್ದೇಶನವನ್ನು ಸ್ವೀಕರಿಸಿದರು.
ನಂತರ ಹೆಚ್ಬಿಒ ಸೀರಿಸ್ನಲ್ಲಿ ನಟನೆಗೆ ಎಮ್ಮಿ ಪ್ರಶಸ್ತಿಯನ್ನು ಪಡೆದರು. ಆಸ್ಕರ್ ನಾಮ ನಿರ್ದೇಶಿತ ಜೆಸ್ಸಿ ಬಕ್ಲೆ ಅವರೊಂದಿಗೆ ಷೇಕ್ಸ್‌ಪಿಯರ್‌ನ ಹ್ಯಾಮ್ಲೆಟ್‌ನ ಆಧುನಿಕ ವೈಶಿಷ್ಟ್ಯದ ರೂಪಾಂತರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಈ ಚಿತ್ರಕ್ಕಾಗಿ ಅವರು ದಿ ಲಾಂಗ್ ಗುಡ್‌ಬೈ ನಿರ್ದೇಶಕ ಅನೈಲ್ ಕರಿಯಾ ಅವರೊಂದಿಗೆ ಮರು ಸೇರ್ಪಡೆಗೊಳ್ಳಲಿದ್ದಾರೆ.
ಇನ್ನು ಅಲ್ಲಿಸನ್ ವಿಲಿಯಮ್ಸ್ ಅವರು ಎಮ್ಮಿ ವಿಜೇತ ಹೆಚ್ಬಿಒ ಸರಣಿ ಗರ್ಲ್ಸ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಸ್ಕರ್ - ವಿಜೇತ ಜೋರ್ಡಾನ್ ಪೀಲೆ ಹಾರರ್ ಚಲನಚಿತ್ರ ಗೆಟ್ ಔಟ್‌ನಲ್ಲಿ ನಟನೆ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ವೈಜ್ಞಾನಿಕ ಹಾರರ್ ಥ್ರಿಲ್ಲರ್ M3GANನಲ್ಲಿ ಸಹ ನಟಿಸಿದ್ದಾರೆ. ಥಾಮಸ್ ಮಲ್ಲೊನ್ ಕಾದಂಬರಿ ಆಧರಿಸಿದ ಫೆಲೋ ಟ್ರಾವೆಲರ್ಸ್‌ನಲ್ಲಿ ವಿಲಿಯಮ್ಸ್ ಅವರು ಮ್ಯಾಟ್ ಬೋಮರ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.
ಆಸ್ಕರ್ 2023 ನಾಮನಿರ್ದೇಶನಗಳನ್ನು ಎಲ್ಲಿ ವೀಕ್ಷಿಸಬೇಕು?: ಮಂಗಳವಾರ (ಇಂದು, ಜನವರಿ 24) ಸಂಜೆ ನಾಮ ನಿರ್ದೇಶನಗಳನ್ನು ಪ್ರಕಟಿಸಲಾಗುವುದು. ನಾಮ ನಿರ್ದೇಶನಗಳ ಪಟ್ಟಿ Oscar.com, Oscars.org ಅಥವಾ ಅಕಾಡೆಮಿಯ Twitter, Facebook, YouTube ಮೂಲಕ ಸಂಜೆ 6:50ರಿಂದ ಪ್ರಕಟ ಆಗುತ್ತದೆ ಎಂದು ಅಕಾಡೆಮಿ ತಿಳಿಸಿದೆ.
ಆಸ್ಕರ್ ಸಮಾರಂಭ ಯಾವಾಗ, ಎಲ್ಲಿ?: 95ನೇ ಆಸ್ಕರ್ ಸಮಾರಂಭ ಮಾರ್ಚ್ 12ರಂದು ಲಾಸ್ ಏಂಜಲೀಸ್ನ ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್ ಮೂಲಕ ಲೈವ್ ಕಾರ್ಯಕ್ರಮ ನೀಡಲಾಗುವುದು. ಸಮಾರಂಭವನ್ನು ಎಬಿಸಿಯಲ್ಲಿ ಮತ್ತು ಪ್ರಪಂಚದಾದ್ಯಂತ 200ಕ್ಕೂ ಹೆಚ್ಚು ಪ್ರದೇಶಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಇದನ್ನೂ ಓದಿ: ಕಾಂತಾರ ಚಿತ್ರದ ಜೊತೆಗೆ ಪ್ರತಿಷ್ಠಿತ ಆಸ್ಕರ್ ರೇಸ್ ಪ್ರವೇಶ ಪಡೆದ ವಿಕ್ರಾಂತ್ ರೋಣ!
ಸಮಾರಂಭವನ್ನು ಯಾರು ಹೋಸ್ಟ್ ಮಾಡಲಿದ್ದಾರೆ? ಜಿಮ್ಮಿ ಕಿಮ್ಮೆಲ್ ಮೂರನೇ ಬಾರಿಗೆ ಆಸ್ಕರ್ಗೆ ಮರಳಲಿದ್ದಾರೆ. ಅವರು 2017 ಮತ್ತು 2018ರಲ್ಲಿ ಆಸ್ಕರ್ ಸಮಾರಂಭವನ್ನು ಆಯೋಜಿಸಿದ್ದರು.
ಇದನ್ನೂ ಓದಿ: ಆಸ್ಕರ್ ಅಂಗಳದಲ್ಲಿ ಜೂನಿಯರ್ ಎನ್ಟಿಆರ್.. ಅಮೋಘ ಅಭಿನಯಕ್ಕೆ ಸಿಗುತ್ತಾ ಪ್ರಶಸ್ತಿ ಗರಿ?
ನಿರ್ಮಾಣದ ಹೊಣೆ ಯಾರ ಮೀಲಿದೆ? ವೈಟ್ ಚೆರ್ರಿ ಎಂಟರ್‌ಟೈನ್‌ಮೆಂಟ್‌ನ ಗ್ಲೆನ್ ವೈಸ್ ಮತ್ತು ರಿಕಿ ಕಿರ್ಶ್ನರ್ ಈ ವರ್ಷದ ಕಾರ್ಯಕ್ರಮದ ಕಾರ್ಯಕಾರಿ ನಿರ್ಮಾಪಕರು ಮತ್ತು ಶೋರನ್ನರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಗ್ಲೆನ್ ವೈಸ್ ಸತತ ಎಂಟನೇ ವರ್ಷ ಈ ಪ್ರದರ್ಶನವನ್ನು ನಿರ್ದೇಶಿಸಲಿದ್ದಾರೆ.