ETV Bharat / entertainment

ಒಂದು ವರ್ಷದ ಸಂಭ್ರಮದಲ್ಲಿ ಇತಿಹಾಸ ಸೃಷ್ಟಿಸಿದ 'KGF 2': ರಾಕಿಭಾಯ್​ ಮುಂದಿನ ಚಿತ್ರಕ್ಕೆ ಹೆಚ್ಚಿದ ಕುತೂಹಲ - yash KGF 2

ಕಳೆದ ವರ್ಷ ಇದೇ ದಿನದಂದು ತೆರೆಕಂಡು ಚಿತ್ರರಂಗದಲ್ಲಿ ಧೂಳೆಬ್ಬಿಸಿದ್ದ 'KGF 2' ವರ್ಷ ಪೂರೈಸಿದೆ.

One year for KGF 2
ವರ್ಷದ ಸಂಭ್ರಮದಲ್ಲಿ KGF 2
author img

By

Published : Apr 14, 2023, 2:08 PM IST

Updated : Apr 14, 2023, 4:54 PM IST

ಇಡೀ ಭಾರತೀಯ ಸಿನಿ ರಂಗ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ಚಿತ್ರ 'KGF 2'. ಕನ್ನಡ ಸಿನಿಮಾಗಳಿಗೆ ಮಹತ್ವ ತಂದು ಕೊಟ್ಟ ರಾಕಿಂಗ್​ ಸ್ಟಾರ್ ಯಶ್​ ಅಭಿನಯದ ಚಿತ್ರವಿದು. ಸುಮಾರು 1,200 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡುವ ಮೂಲಕ ಸದ್ದು ಮಾಡಿದ ಸೂಪರ್​ ಹಿಟ್​ ಚಿತ್ರ ಇಂದು ಒಂದು ವರ್ಷದ ಸಂಭ್ರಮದಲ್ಲಿದೆ. ಹೌದು, ಕಳೆದ ಏಪ್ರಿಲ್​ 14ರಂದು ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಈ 'ಕೆಜಿಎಫ್​ 2' ವರ್ಷ ಪೂರೈಸಿದೆ.

ಹೊಂಬಾಳೆ ಫಿಲ್ಮ್ಸ್​ ಹರ್ಷ.... 'KGF 2' ಸಾರಥಿ ಹೊಂಬಾಳೆ ಫಿಲ್ಮ್ಸ್​ ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ಹಂಚಿಕೊಳ್ಳುವ ಮೂಲಕ ಹರ್ಷ ವ್ಯಕ್ತಪಡಿಸಿದೆ. ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್​​, 'ಒಂದು ವರ್ಷದ ಹಿಂದೆ, #KGFCchapter2 ಉಸಿರುಕಟ್ಟುವ ಕ್ರಿಯೆ, ತೀವ್ರವಾದ ಭಾವನೆಗಳು ಮತ್ತು ದೊಡ್ಡ ಪಾತ್ರಗಳಿಂದ ತುಂಬಿದ ಮರೆಯಲಾಗದ ಪ್ರಯಾಣ. ಚಿತ್ರದ ಬಿಡುಗಡೆಯು ಅಭಿಮಾನಿಗಳೊಂದಿಗಿನ ಹಬ್ಬಕ್ಕಿಂತ ಕಡಿಮೆ ಏನಲ್ಲ' ಎಂದು ಬರೆದುಕೊಂಡಿದೆ.

  • The most powerful promise kept by the most powerful man 💥

    KGF 2 took us on an epic journey with unforgettable characters and action. A global celebration of cinema, breaking records, and winning hearts. Here's to another year of great storytelling! #KGFChapter2#Yashpic.twitter.com/iykI7cLOZZ

    — Hombale Films (@hombalefilms) April 14, 2023 " class="align-text-top noRightClick twitterSection" data=" ">

ಸಿನಿಮಾ ದೃಶ್ಯಗಳುಳ್ಳ ಒಂದು ವಿಶೇಷ ವಿಡಿಯೋವನ್ನೂ ಕೂಡ ಹಂಚಿಕೊಂಡಿದೆ. ''ಅತ್ಯಂತ ಶಕ್ತಿಯುತ ವ್ಯಕ್ತಿಯಿಂದ, ಶಕ್ತಿಯುತವಾದ ಭರವಸೆ. ಕೆಜಿಎಫ್ 2 ನಮ್ಮನ್ನು ಮರೆಯಲಾಗದ ಪಾತ್ರಗಳು ಮತ್ತು ಕ್ರಿಯೆಯೊಂದಿಗೆ ದೊಡ್ಡ ಪ್ರಯಾಣಕ್ಕೆ ಕರೆದೊಯ್ದಿದೆ. ಸಿನಿಮಾದ ಆಚರಣೆ, ದಾಖಲೆಗಳನ್ನು ಮುರಿಯುವುದು ಮತ್ತು ಹೃದಯಗಳನ್ನು ಗೆಲ್ಲುವುದು ನಡೆದಿದೆ. ಉತ್ತಮ ಕಥೆ ಹೇಳುವಿಕೆಗೆ ಒಂದು ವರ್ಷ'' ಎಂದು ಬರೆದು ಕೊಂಡಿದೆ.

KGF 3: ಸದ್ಯ ಹಂಚಿಕೊಂಡಿರುವ ಈ ವಿಶೇಷ ವಿಡಿಯೋದ ಕೊನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಮತ್ತು 3 ಎಂಬ ಪದ ಹೈಲೆಟ್​ ಆಗಿದೆ. ಹಾಗಾಗಿ KGF (3) ಮುಂದುವರೆದ ಭಾಗ ಯಶ್​ ಅವರ ಮುಂದಿನ ಚಿತ್ರ ಎಂದು ನೆಟಿಜನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ.

  • 𝐇𝐞 𝐜𝐚𝐦𝐞, 𝐇𝐞 𝐬𝐚𝐰, 𝐇𝐞 𝐜𝐨𝐧𝐪𝐮𝐞𝐫𝐞𝐝 💥

    One year ago today, #KGFChapter2 took us on an unforgettable journey filled with breathtaking action, intense emotions and larger-than-life characters. The film's release was nothing short of a festival, with fans… pic.twitter.com/oYdety0vkP

'KGF 1' ನೋಡಿದ್ದ ಪ್ರೇಕ್ಷಕರಿಗೆ 'KGF 2' ಮನರಂಜನೆಯ ರಸದೌತಣ ಉಣಬಡಿಸಿತ್ತು. ಯಶ್​​ ಸ್ಟೈಲ್​, ಅತ್ಯದ್ಭುತ ಅಭಿನಯ, ಮೇಕಿಂಗ್​​​ ಶೈಲಿ, ಕಥೆ ರವಾನಿಸಿದ ರೀತಿ ಎಲ್ಲವೂ ಅಭಿಮಾನಿಗಳ ಮನ ಮುಟ್ಟಿತ್ತು. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ತೆರೆಕಂಡ ಈ ಚಿತ್ರ ದೇಶದ ಮೂಲೆ ಮೂಲೆಯ ಪ್ರೇಕ್ಷಕರನ್ನು ತಲುಪಿತ್ತು. ಕೇವಲ ಸಿನಿಪ್ರಿಯರು ಮಾತ್ರವಲ್ಲದೇ ಸ್ಟಾರ್ ಸೆಲೆಬ್ರಿಟಿಗಳು ಸಹ ಯಶ್​ ನಟನೆ ಬಗ್ಗೆ ಮಾತನಾಡುವಂತಾಯ್ತು. ಬರೋಬ್ಬರಿ 1,200 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ದಾಖಲೆಗಳನ್ನು ಪುಡಿಗಟ್ಟಿತು 'KGF 2'.

ಇದನ್ನೂ ಓದಿ: ಸಿನಿ ಜಗತ್ತಿನಿಂದ ರಾಜಕೀಯಕ್ಕೆ ಬಂದ ಕಲಾವಿದರು: ನೆಲೆಯೂರಿದವರೆಷ್ಟು, ವಾಪಸಾದವರೆಷ್ಟು?

'KGF 2' ತೆರೆಕಂಡು ಒಂದು ವರ್ಷವಾದರೂ ಕೂಡ ನಟ ಯಶ್​ ಅವರ ಮುಂದಿನ ಸಿನಿಮಾ ಬಗ್ಗೆ ಈವರೆಗೂ ಅಧಿಕೃತ ಘೋಷಣೆ ಆಗಿಲ್ಲ. 'ರಾಕಿಂಗ್​ ಸ್ಟಾರ್ 19​ ಸಿನಿಮಾ' ಟ್ರೆಂಡಿಗ್​​ನಲ್ಲಿದ್ದು, ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಕೊಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಯಶ್​ ಮುಂದಿನ ಸಿನಿಮಾ ಯಾವುದು?, ನಟಿ ಯಾರು? ಯಾವ ನಿರ್ದೇಶಕರು ಆ್ಯಕ್ಷನ್​ ಕಟ್​​ ಹೇಳಲಿದ್ದಾರೆ? ಯಾವ ಸಂಸ್ಥೆಯಿಂದ ಚಿತ್ರ ನಿರ್ಮಾಣವಾಗಲಿದೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ: ರಾಕಿಂಗ್​ ಸ್ಟಾರ್ ಯಶ್​​ ಸಿನಿಮಾ ನಿರ್ಮಿಸಲಿದ್ದಾರೆ ತೆಲುಗಿನ ದಿಲ್​ ರಾಜು

ತೆಲುಗಿನ ದಿಲ್​ ರಾಜು ಅವರ ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್​ ಅಡಿಯಲ್ಲಿ ಯಶ್​ ಸಿನಿಮಾ ನಿರ್ಮಾಣ ಆಗಲಿದೆ ಎಂಬ ವಿಷಯ ಇತ್ತೀಚೆಗಷ್ಟೇ ಸದ್ದು ಮಾಡಿದೆ. ಕೆಲ ದಿನಗಳ ಹಿಂದೆ ನಿರ್ಮಾಪಕ ದಿಲ್​ರಾಜು #askdilraju ಸೆಷನ್​ ನಡೆಸಿದರು. ಆ ಸಂದರ್ಭ ಯಶ್​ ಜೊತೆ ಸಿನಿಮಾ ನಿರೀಕ್ಷಿಸಬಹುದೇ? ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ದಿಲ್ ರಾಜು 'ಹೌದು' ಎಂದು ಪ್ರತಿಕ್ರಿಯಿಸಿದ್ದರು. ಹಾಗಾಗಿ ಯಶ್​ ಅಭಿಮಾನಿಗಳಲ್ಲಿ ಮುಂದಿನ ಚಿತ್ರದ ಬಗ್ಗೆ ತೀವ್ರ ಕುತೂಹಲವಿದೆ. ಆದ್ರೆ ಯಶ್ ಆಪ್ತರ ಪ್ರಕಾರ, ದಿಲ್ ರಾಜು ಯಶ್​ ಅವರ 20ನೇ ಸಿನಿಮಾ ಮಾಡ್ತಾರೆ. ಹೀಗಾಗಿ ಯಶ್ 19ನೇ ಸಿನಿಮಾ ಯಾವುದು, ಯಾರಿಂದ ಎಂಬ ಕುರಿತು ಚರ್ಚೆ ಜೋರಾಗಿದೆ.

Last Updated : Apr 14, 2023, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.