ETV Bharat / entertainment

ಇಸ್ರೇಲ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ನಟಿ ನುಶ್ರತ್ ಭರುಚಾ ಭಾರತದತ್ತ ಪಯಣ - ನುಶ್ರತ್ ಭರುಚಾ ವಾಪಸ್

Nushrratt Bharuccha: ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ಉಗ್ರರ ನಡುವೆ ಭೀಕರ ಕಾಳಗ ನಡೆಯುತ್ತಿದೆ. ಈಗಾಗಲೇ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ನಡುವೆ, ಸಂಘರ್ಷಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ ಭಾರತೀಯ ನಟಿ ನುಶ್ರತ್ ಭರುಚಾ ಇದೀಗ ಸುರಕ್ಷಿತವಾಗಿ ಭಾರತಕ್ಕೆ ಮರಳುತ್ತಿದ್ದಾರೆ.

Nushrratt Bharucha
ನಟಿ ನುಶ್ರತ್ ಭರುಚಾ
author img

By ETV Bharat Karnataka Team

Published : Oct 8, 2023, 11:45 AM IST

Updated : Oct 8, 2023, 5:17 PM IST

ಮುಂಬೈ: ಪ್ಯಾಲೆಸ್ಟೀನ್ ಉಗ್ರರ ಗುಂಪು ಹಮಾಸ್‌ನಿಂದ ಹಠಾತ್‌ ದಾಳಿಗೊಳಗಾದ ಇಸ್ರೇಲ್‌ನಲ್ಲಿ ರಕ್ತದೋಕುಳಿ ಹರಿದಿದೆ. ನೂರಾರು ರಾಕೆಟ್‌ ಮತ್ತು ಭೀಕರ ಗುಂಡಿನ ದಾಳಿಗೆ 300ಕ್ಕೂ ಹೆಚ್ಚು ಇಸ್ರೇಲಿಗರು ಪ್ರಾಣ ಕಳೆದುಕೊಂಡಿದ್ದಾರೆ. ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 7 ರವರೆಗೆ ನಡೆದ ಹೈಫಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಇಸ್ರೇಲ್‌ಗೆ ತೆರಳಿದ್ದ ಭಾರತದ ಬಾಲಿವುಡ್ ನಟಿ ನುಶ್ರತ್ ಭರುಚಾ ಸಂಕಷ್ಟದಲ್ಲಿ ಸಿಲುಕಿದ್ದರು. ಈ ವಿಚಾರ ತಿಳಿದು ಅವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಇದೀಗ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ನೆರವಿನಿಂದ ನಟಿ ಸುರಕ್ಷಿತವಾಗಿದ್ದು, ವಿಮಾನದ ಮೂಲಕ ಮರಳುತ್ತಿದ್ದಾರೆ.

ನುಶ್ರತ್ ಭರುಚಾ ತಂಡದಿಂದ ಮಾಹಿತಿ: "ಕೊನೆಗೂ ನಾವು ನುಶ್ರತ್ ಭರುಚಾ ಅವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದೇವೆ. ರಾಯಭಾರಿ ಕಚೇರಿಯ ಸಹಾಯದಿಂದ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗುತ್ತಿದೆ. ನಮಗೆ ಡೈರೆಕ್ಟ್​​ ಫ್ಲೈಟ್​​ ಸಿಗಲಿಲ್ಲ, ಹಾಗಾಗಿ ಕನೆಕ್ಟಿಂಗ್​​​​ ಫ್ಲೈಟ್​ ಮೂಲಕ ಹಿಂತಿರುಗುತ್ತಿದ್ದೇವೆ. ನಟಿಯ ಸಂಪೂರ್ಣ ಸುರಕ್ಷತೆಯ ಹಿನ್ನೆಲೆಯಲ್ಲಿ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವರು ಭಾರತಕ್ಕೆ ಮರಳಿದ ತಕ್ಷಣ ಮಾಹಿತಿ ನೀಡುತ್ತೇವೆ. ನಾವೀಗ ನಿಟ್ಟುಸಿರು ಬಿಟ್ಟಿದ್ದೇವೆ. ದೇವರಿಗೆ ಧನ್ಯವಾದ ತಿಳಿಸುತ್ತೇವೆ'' ಎಂದು ನುಶ್ರತ್ ಭರುಚಾ ಪ್ರಚಾರಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

38ರ ಹರೆಯದ ನಟಿ ನುಶ್ರತ್ ಭರುಚಾ 'ಪ್ಯಾರ್ ಕಾ ಪಂಚನಾಮ' ಸೀರಿಸ್​​, 'ಸೋನು ಕೆ ಟಿಟು ಕಿ ಸ್ವೀಟಿ' ಮತ್ತು 'ಛೋರಿ'ಯಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾದವರು. ಕೊನೆಯದಾಗಿ ಥ್ರಿಲ್ಲರ್ ಡ್ರಾಮಾ 'ಅಕೆಲ್ಲಿ'ಯಲ್ಲಿ (Akelli) ಕಾಣಿಸಿಕೊಂಡಿದ್ದರು. ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ಸಕ್ರಿಯರು. ಆಗಾಗ್ಗೆ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೂ ಸನಿಹವಾಗುತ್ತಾರೆ.

ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ: ಮೃತರ ಗುರುತು ಪತ್ತೆ, ಒಂದೇ ಗ್ರಾಮದ 8 ವಿದ್ಯಾರ್ಥಿಗಳು ಸಾವು!

ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಇನ್​ಸ್ಟಾಗ್ರಾಮ್​ನಲ್ಲಿ 5.9 ಮಿಲಿಯನ್​​ ಫಾಲೋವರ್ಸ್ ಸಂಪಾದಿಸಿರುವ ನಟಿ, ಈವರೆಗೆ 856 ಪೋಸ್ಟ್​ಗಳನ್ನು ಶೇರ್ ಮಾಡಿದ್ದಾರೆ. ಹಂಚಿಕೊಂಡಿರುವ ಪ್ರತಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ. ತಮ್ಮದೇ ಆದ ಜನಪ್ರಿಯತೆ ಹೊಂದಿರುವ ಇವರು ಇಸ್ರೇಲ್​ನಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ಕೇಳಿದ ಅಭಿಮಾನಿಗಳು ಒಮ್ಮೆ ಆಘಾತಕ್ಕೊಳಗಾದರು. ಸೋಷಿಯಲ್​ ಮೀಡಿಯಾ ವೇದಿಕೆ​​ಗಳಲ್ಲಿ ಅದರಲ್ಲೂ ವಿಶೇಷವಾಗಿ ಎಕ್ಸ್​​ ವೇದಿಕೆಯಲ್ಲಿ ಅಭಿಮಾನಿಗಳು ತಮ್ಮ ಕಳವಳ ವ್ಯಕ್ತಪಡಿಸಿದ್ದರು. ಇದೀಗ ನಟಿ ಸುರಕ್ಷಿತವಾಗಿದ್ದು, ಭಾರತಕ್ಕೆ ಮರಳುತ್ತಿದ್ದಾರೆ ಎಂಬ ಸುದ್ದಿ ಕೇಳಿದ ಫ್ಯಾನ್ಸ್​ ನಿರಾಳರಾಗಿದ್ದಾರೆ.

ಇದನ್ನೂ ಓದಿ: ಸಿಕ್ಕಿಂ ಪ್ರವಾಹದಲ್ಲಿ ತೆಲುಗು ಹಿರಿಯ ನಟಿ ಸರಳ ಕುಮಾರಿ ನಾಪತ್ತೆ: ತಾಯಿಯನ್ನು ಪತ್ತೆ ಹಚ್ಚುವಂತೆ ಮಗಳ ಮನವಿ

Last Updated : Oct 8, 2023, 5:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.