ETV Bharat / entertainment

ಸೆಟ್ಟೇರಿತು ನಿರ್ದೇಶಕ ಪವನ್ ಒಡೆಯರ್ ಹಿಂದಿ ಸಿನಿಮಾ 'ನೋಟರಿ' - Actor Parambrata Chattopadhyaya

ಪವನ್ ಒಡೆಯರ್ ನಿರ್ದೇಶನದ ನೋಟರಿ ಸಿನಿಮಾ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಿನ್ನೆ ಸೆಟ್ಟೇರಿದೆ. ಇಂದು ಚಿತ್ರೀಕರಣ ಆರಂಭವಾಗಿದೆ.

Notary movie shooting begins today in Bhopal
ನೋಟರಿ ಸಿನಿಮಾ ಶೂಟಿಂಗ್
author img

By

Published : Oct 6, 2022, 2:18 PM IST

Updated : Oct 6, 2022, 3:00 PM IST

ಕನ್ನಡ ಚಿತ್ರರಂಗದಲ್ಲಿ ದಶಕದಿಂದ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಪವನ್ ಒಡೆಯರ್ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪವನ್‌ ಡೈರೆಕ್ಷನ್​ನ ನೂತನ ಹಿಂದಿ ಸಿನಿಮಾ ಸೆಟ್ಟೇರಿದ್ದು ಚಿತ್ರಕ್ಕೆ 'ನೋಟರಿ' ಎಂದು ಟೈಟಲ್ ಇಡಲಾಗಿದೆ.

ಈ ಚಿತ್ರದಲ್ಲಿ ಬೆಂಗಾಲಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ಪರಂಬ್ರತಾ ಚಟ್ಟೋಪಾಧ್ಯಾಯ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಕಹಾನಿ, ಪರಿ ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ಪರಂಬ್ರತಾ ಚಟ್ಟೋಪಾಧ್ಯಾಯ ನಟಿಸಿ ಗಮನ ಸೆಳೆದಿದ್ದಾರೆ. ಇದೀಗ ಕನ್ನಡದ ಪ್ರತಿಭಾವಂತ ನಿರ್ದೇಶಕ ಪವನ್ ಒಡೆಯರ್ ಜೊತೆ ಕೈ ಜೋಡಿಸಿದ್ದಾರೆ.

ನೋಟರಿ ಸಿನಿಮಾ ಶೂಟಿಂಗ್ ಆರಂಭ

ನಾಯಕಿಯಾಗಿ ಕ್ರಿಕೆಟರ್ ಹರ್ ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ನಟಿಸುತ್ತಿದ್ದಾರೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಿನ್ನೆ ವಿಜಯದಶಮಿಯ ಶುಭ ದಿನದಂದು ಸಿನಿಮಾ ಸೆಟ್ಟೇರಿದ್ದು, ಇಂದು ಚಿತ್ರೀಕರಣ ಆರಂಭವಾಗಿದೆ ಎಂದು ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ. ಭೋಪಾಲ್​ನಲ್ಲಿ 20 ದಿನಗಳ ಚಿತ್ರೀಕರಣದ ನಂತರ ಮುಂಬೈನಲ್ಲಿ ನೋಟರಿ ಸಿನಿಮಾ ಚಿತ್ರೀಕರಣ ನಡೆಯಲಿದೆ.

ಚಿತ್ರದ ನಾಯಕ ಎಂದೂ ಕೂಡ ಸುಳ್ಳು ಹೇಳುವುದಿಲ್ಲ. ಇದು ಅವನ ಜೀವನದ ಸಿದ್ಧಾಂತವಾಗಿರುತ್ತದೆ. ಆದರೆ ಕೆಲಸ ಮಾಡುವ ಕ್ಷೇತ್ರ ನಿತ್ಯ ಒಂದಿಲ್ಲೊಂದು ಸುಳ್ಳು ಹೇಳುವ ಪರಿಸ್ಥಿತಿಯನ್ನು ತಂದೊಡ್ಡುತ್ತಿರುತ್ತೆ. ಅಂತಹ ಸಂದರ್ಭಗಳು ಎದುರಾದಾಗ ಆತ ಸುಳ್ಳು ಹೇಳದೇ ಅದನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದರ ಸುತ್ತ ಕಥೆ ಸುತ್ತಲಿದ್ದು, ಇಡೀ ಸಿನಿಮಾ ಹಾಸ್ಯಮಯವಾಗಿರುತ್ತದೆ ಎಂದು ನೋಟರಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಪವನ್ ಒಡೆಯರ್.

ಪರಂಬ್ರತಾ ಅವರು ಅಭಿನಯದಲ್ಲಿ ತಮ್ಮ ಸಾಮರ್ಥ್ಯವನ್ನು ಈಗಾಗಲೇ ಸಾಭೀತು ಮಾಡಿದ್ದಾರೆ. ನನ್ನ ಕಥೆಗೆ ಬಹಳ ಸೂಕ್ತ ವ್ಯಕ್ತಿ ಎನಿಸಿದರು. ಆದರಿಂದಲೇ ಅವರ ಆಯ್ಕೆ ಸೂಕ್ತ ಎನಿಸಿ ಕಥೆ ಹೇಳಿದೆ. ಅವರು ಕೂಡ ಕಥೆ ಕೇಳಿ ಇಷ್ಟ ಪಟ್ಟು ನಟಿಸಲು ಒಪ್ಪಿಕೊಂಡರು ಎಂದು ಚಿತ್ರದ ನಾಯಕನ ಆಯ್ಕೆ ಬಗ್ಗೆ ಪವನ್ ಒಡೆಯರ್ ಮಾತನಾಡಿದ್ದಾರೆ.

ಇದನ್ನೂ ಓದಿ: ಹೆಡ್ ಬುಷ್ ಸಿನಿಮಾದ ಹಬೀಬಿ ಸಾಂಗ್ ರಿಲೀಸ್.. ಡಾಲಿ ಜೊತೆ ಪಾಯಲ್ ರಜಪೂತ್ ಮಸ್ತ್ ಡ್ಯಾನ್ಸ್

ನೋಟರಿ ಚಿತ್ರಕ್ಕೆ ಕಥೆ ಬರೆದು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಪವನ್ ಒಡೆಯರ್ ಮತ್ತು ಮುಂಬೈ ಮೂಲದ ತಶಾ ಭಂಬ್ರಾ, ಸ್ಪರ್ಶ್ ಖೆಟರ್ ಪಾಲ್ ಚಿತ್ರಕಥೆ ಇದೆ. ವೈದಿ.ಎಸ್ ಕ್ಯಾಮೆರಾ ನಿರ್ದೇಶನ, ರೋಹಿತ್ ಕುಲಕರ್ಣಿ, ಮೌಸಿನ್ ಜಾವೇದ್ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಈ ಚಿತ್ರವನ್ನು ಕಾಶ್ ಎಂಟರ್​ಟೈನ್​​ಮೆಂಟ್ ಪ್ರೊಡಕ್ಷನ್ ಜೊತೆ ಒಡೆಯರ್ ಮೂವೀಸ್ ಮತ್ತು ಬೌಂಡ್ ಲೆಸ್ ಮೀಡಿಯಾ ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.

Last Updated : Oct 6, 2022, 3:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.