ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಇತ್ತೀಚೆಗೆ ತೆರೆಕಂಡ 'ಅನಿಮಲ್' ಚಿತ್ರದ ಮೂಲಕ ಬಹುದೊಡ್ಡ ಯಶಸ್ಸು ಪಡೆದುಕೊಂಡಿದ್ದಾರೆ. ಇವರು ಈವರೆಗೆ ಎರಡು ಚಿತ್ರಗಳನ್ನು ಮಾತ್ರ ನಿರ್ದೇಶಿಸಿದ್ದರೂ, ಅವು ಅಭಿಮಾನಿಗಳ ಮನದಲ್ಲಿ ಉಳಿಯುವಂತಹ ಕಥೆಗಳೇ ಆಗಿವೆ. ಅದರ ಜೊತೆಗೆ ಪಾತ್ರಗಳ ಆಯ್ಕೆ ಮಾಡುವ ಬಗ್ಗೆಯೂ ಫ್ಯಾನ್ಸ್ ಚರ್ಚೆ ನಡೆಸುತ್ತಿದ್ದಾರೆ. ನಾಯಕ, ನಾಯಕಿಯರ ಸೆಲೆಕ್ಷನ್ ಮಾಡೋದ್ರಲ್ಲಿ ಅವರು ಸಮಾನ ಎಂದು ಹೊಗಳುತ್ತಾರೆ.
'ಕಬೀರ್ ಸಿಂಗ್' ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಮತ್ತು 'ಅನಿಮಲ್' ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಯಶಸ್ಸನ್ನು ಪಡೆದಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಸಿನಿಮಾ ನಾಯಕಿಯರ ಆಯ್ಕೆಯ ಬಗ್ಗೆ ಕುತೂಹಲಕಾರಿ ವಿಚಾರಗಳನ್ನು ಸಂದೀಪ್ ರೆಡ್ಡಿ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ಕಬೀರ್ ಸಿಂಗ್ ಮತ್ತು ಅನಿಮಲ್ ಎರಡೂ ಚಿತ್ರಗಳಲ್ಲಿನ ನಾಯಕಿ ಪಾತ್ರಕ್ಕೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮೊದಲ ಆಯ್ಕೆಯಾಗಿದ್ದರು. ಆದರೆ ಕಾರಣಾಂತರಗಳಿಂದ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಅದೂ ಅಲ್ಲದೇ 'ಅನಿಮಲ್' ವಿಚಾರವಾಗಿ ಅವರಲ್ಲಿ ಈಗಾಗಲೇ ಕ್ಷಮೆ ಕೇಳಿದ್ದೇನೆ" ಎಂದಿದ್ದಾರೆ.
"ನನಗೆ ಪರಿಣಿತಿ ಚೋಪ್ರಾ ಅವರ ನಟನೆ ಎಂದರೆ ತುಂಬಾ ಇಷ್ಟ. ನನ್ನ ಸಿನಿಮಾಗಳಲ್ಲಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ನಾನು ಯಾವಾಗಲೂ ಬಯಸುತ್ತೇನೆ. ಆರಂಭದಲ್ಲಿ 'ಕಬೀರ್ ಸಿಂಗ್' ಚಿತ್ರದಲ್ಲಿ ಪ್ರೀತಿ ಪಾತ್ರವನ್ನು ಅವರಿಂದಲೇ ಮಾಡಿಸಬೇಕು ಎಂದುಕೊಂಡಿದ್ದೆ. ಆದರೆ ಕಾರಣಾಂತರಗಳಿಂದ ಈ ಚಿತ್ರದಲ್ಲಿ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಈ ವಿಚಾರ ಅವರಿಗೂ ಗೊತ್ತು. ನಂತರದಲ್ಲಿ 'ಅನಿಮಲ್' ಸಿನಿಮಾಗೆ ಅವರೇ ನಾಯಕಿಯಾಗಿ ಆಯ್ಕೆಯಾದಾಗ ಖುಷಿಯಾಯಿತು. ಚಿತ್ರೀಕರಣ ಪ್ರಾರಂಭವಾಗುವ ಒಂದೂವರೆ ವರ್ಷದ ಮೊದಲು ಅವರು ಈ ಯೋಜನೆಗೆ ಸಹಿ ಹಾಕಿದರು. ಆದರೆ ಚಿತ್ರದ ಕೆಲವು ಅಂಶಗಳಲ್ಲಿ ಗೀತಾಂಜಲಿಯಾಗಿ (ಅನಿಮಲ್ ಚಿತ್ರದ ನಾಯಕಿಯ ಹೆಸರು) ಅವರನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ. ಅದೇ ವಿಷಯವನ್ನು ಅವರಿಗೂ ಹೇಳಿದೆ. ಸಾರಿ, ಸಿನಿಮಾಗಿಂತ ಯಾವುದೂ ದೊಡ್ಡದಲ್ಲ. ಅದಕ್ಕೆ ಈ ನಿರ್ಧಾರ ತೆಗೆದುಕೊಂಡೆ. ಅನಿಮಲ್ಗೆ ಮತ್ತೊಬ್ಬ ನಾಯಕಿಯನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದೆ. ನನ್ನ ಮಾತಿನಿಂದ ಆಕೆಗೆ ಬಹಳ ನೋವಾಯಿತು. ಆದರೆ, ನಾನು ಯಾಕೆ ಹಾಗೆ ಹೇಳಿದೆ ಎಂದು ನಂತರ ಆಕೆ ಅರ್ಥ ಮಾಡಿಕೊಂಡಳು" ಎಂದು ಸಂದೀಪ್ ಹೇಳಿದರು.
ಹೀಗಾಗಿ ಪರಿಣಿತ ಚೋಪ್ರಾಗೆ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡಲಾಯಿತು. 'ಅನಿಮಲ್' ಚಿತ್ರದ ಮೂಲಕ ನ್ಯಾಷನಲ್ ಕ್ರಶ್ ಬಾಲಿವುಡ್ನಲ್ಲಿ ಭದ್ರವಾಗಿ ನೆಲೆಯೂರುವ ಪರ್ಫಾಮೆನ್ಸ್ ನೀಡಿದ್ದಾರೆ. ನಟ ರಣಬೀರ್ ಕಪೂರ್ ಅವರಿಗೂ ಅತ್ಯಂತ ಬಿಗ್ ಹಿಟ್ ನೀಡಿದ ಸಿನಿಮಾ ಇದಾಗಿದೆ. ಅಲ್ಲದೇ ರಣಬೀರ್ ಅವರ 'ಸಂಜು' ಚಿತ್ರದ ದಾಖಲೆಯನ್ನು ಇದು ಧೂಳಿಪಟ ಮಾಡಿದೆ. ಸದ್ಯ ನಿರ್ದೇಶಕ ಸಂದೀಪ್, 'ಅನಿಮಲ್' ಸೀಕ್ವೆಲ್ 'ಅನಿಮಲ್ ಪಾರ್ಕ್'ಗೆ ಸಿದ್ಧತೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವಿಶ್ವಾದ್ಯಂತ ₹800 ಕೋಟಿ ಸಮೀಪಿಸಿದ 'ಅನಿಮಲ್': ರಣ್ಬೀರ್ - ರಶ್ಮಿಕಾಗೆ ಬಹುದೊಡ್ಡ ಯಶಸ್ಸು