ETV Bharat / entertainment

ಮೈಕ್ ಟೈಸನ್ ಮಾತ್ರವಲ್ಲ! ಭಾರತದ ಸಿನಿಮಾಗಳಲ್ಲಿ ನಟಿಸಿರುವ ಹಾಲಿವುಡ್ ಗ್ರೇಟ್​​ ನಟರಿವರು - ಟಾಪ್​ ಹಾಲಿವುಡ್​ ನಟರು

ಇತ್ತೀಚೆಗೆ ಹಾಲಿವುಡ್​ ನಟರು ಭಾರತೀಯ​ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಸರ್ವೆ ಸಾಮಾನ್ಯವಾಗಿದೆ. ಬಾಲಿವುಡ್​ನ ‘ಭಾಗ್ ಮಿಲ್ಕಾ ಭಾಗ್’ ಚಿತ್ರದಿಂದ ಹಿಡಿದು ಟಾಲಿವುಡ್​ನ ‘ಲೈಗರ್’ ಚಿತ್ರದಲ್ಲಿ ಹಲವರು ನಟಿಸಿದ್ದಾರೆ. ಆ ನಟರು ಯಾರು ಅನ್ನೋದನ್ನು ನೋಡುವುದಾದರೆ...

Not just Mike Tyson, these Hollywood actors have also acted in Hindi films
ಲೈಗರ್ ಚಿತ್ರ ತಂಡ
author img

By

Published : Jul 12, 2022, 8:39 PM IST

ಬಾಲಿವುಡ್​ ತಾರೆ ಅನನ್ಯ ಪಾಂಡೆ ಮತ್ತು ಟಾಲಿವುಡ್​ ಸೂಪರ್​ ಸ್ಟಾರ್​ ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷತ ‘ಲೈಗರ್’ ಚಿತ್ರದಲ್ಲಿ ಬಾಕ್ಸಿಂಗ್​ ಲೋಕದ ದಿಗ್ಗಜ ಮೈಕ್​ ಟೈಸನ್​ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಇದೇ ಮೊದಲ ಬಾರಿಗೆ ಅವರು ಭಾರತೀಯ ಸಿನಿಮಾದಲ್ಲಿ ನಟಿಸಿತ್ತಿರುವುದರಿಂದ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇವರಂತೆ ಇದಕ್ಕೂ ಮುನ್ನ ಹಲವು ಹಾಲಿವುಡ್​ ನಟರು ಭಾರತೀಯ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅವರ್ಯಾರು? ಯಾವ ಯಾವ ಸಿನಿಮಾಗಳಲ್ಲಿ ನಟಿಸಿದ್ದರು ಅನ್ನೋದನ್ನು ಇಲ್ಲಿ ನೋಡಬಹುದು.

Not just Mike Tyson, these Hollywood actors have also acted in Hindi films
ಮೈಕ್ ಟೈಸನ್

ರೆಬೆಕಾ ಬ್ರೀಡ್ಸ್: 'ಪ್ರೆಟಿ ಲಿಟಲ್ ಲೈಯರ್ಸ್', 'ದಿ ಒರಿಜಿನಲ್ಸ್', 'ಮೊಲಿ' ಮತ್ತು 'ಬ್ಲೂ ವಾಟರ್ ಹೈ' ನಂತಹ ಅನೇಕ ಜನಪ್ರಿಯ ಹಾಲಿವುಡ್​ ರಿಯಾಲಿಟಿ ಶೋ ಮತ್ತು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಇವರು ಪ್ರಸಿದ್ಧಿ ಪಡೆದವರು. ಹಾಲಿವುಡ್​ನಿಂದ ಬಾಲಿವುಡ್​ಗೆ ಬಂದ ಇವರು ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನ ‘ಭಾಗ್ ಮಿಲ್ಕಾ ಭಾಗ್’ ಚಿತ್ರದಲ್ಲಿ ಮೊದಲ ಬಾರಿ ಕಾಣಿಸಿಕೊಂಡವರು. ಚಿತ್ರದಲ್ಲಿ ಅವರು ಫರ್ಹಾನ್ ಅಖ್ತರ್ ಜೊತೆಗೆ 'ಸ್ಲೋ ಮೋಷನ್ ಆಂಗ್ರೇಜಾ' ಹಾಡಿನಲ್ಲಿ ನೃತ್ಯ ಮಾಡಿದ್ದಾರೆ. ಫರ್ಹಾನ್ ಅಖ್ತರ್ ಜೊತೆಗಿನ ನಟನೆ ನೋಡುಗರ ಹೃದಯಕ್ಕೆ ತೀರಾ ಹತ್ತಿರವೆನಿಸುತ್ತದೆ.

ರೆಬೆಕಾ ಬ್ರೀಡ್ಸ್

ಸಾರಾ ಥಾಂಪ್ಸನ್: ಅವರು 'ಕ್ರೂಯಲ್​ ಎಂಟೆನ್ಶನ್​ 2', 'ಬ್ರೋಕನ್ ವಿಂಡೋಸ್', 'ಬ್ರೂಕ್ಲಿನ್'ಸ್ ಫೈನೆಸ್ಟ್' ಮತ್ತು 'ಬೇಬಿಸಿಟ್ಟರ್ ವಾಂಟೆಡ್' ಸಿನಿಮಾದ ನಟನೆಗೆ ಪ್ರಸಿದ್ಧರಾದವರು. ಸಾರಾ ಥಾಂಪ್ಸನ್ 2010ರಲ್ಲಿ ಬಿಡುಗಡೆಯಾದ ಬಾಲಿವುಡ್​ ಚಲನಚಿತ್ರ 'ರಾಜನೀತಿ'ಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸಮರ್ ಪ್ರತಾಪ್ (ರಣಬೀರ್ ಕಪೂರ್) ಗೆಳತಿ ಸಾರಾ ಜೀನ್ ಕಾಲಿನ್ಸ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಕಾಶ್ ಝಾ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ದೇವಗನ್, ಕತ್ರಿನಾ ಕೈಫ್, ನಾನಾ ಪಾಟೇಕರ್, ಅರ್ಜುನ್ ರಾಂಪಾಲ್ ಮತ್ತು ಮನೋಜ್ ಬಾಜ್ಪೇಯಿ ಸೇರಿದಂತೆ ದೊಡ್ಡ ತಾರಾ ಬಳಗವೇ ನಟಿಸಿದೆ.

ಸಾರಾ ಥಾಂಪ್ಸನ್

ವಿಲ್ ಸ್ಮಿತ್: ಕರಣ್ ಜೋಹರ್ ನಿರ್ದೇಶನದ 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದಲ್ಲಿ ವಿಲ್ ಸ್ಮಿತ್ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ ಹಾಡೊಂದರಲ್ಲಿ ನೃತ್ಯ ಸಹ ಮಾಡಿದ್ದಾರೆ. ದೇಶಿ ಸ್ಟೈಲ್​ನಲ್ಲಿ ಡ್ಯಾನ್ಸ್​ ಮಾಡಿರುವ ವಿಲ್ ಸ್ಮಿತ್ ನೋಡುಗರ ಗಮನ ಸೆಳೆದವರು. ಆದರೆ, ಇತ್ತೀಚೆಗೆ ಆಸ್ಕರ್ ಸಮಾರಂಭದಲ್ಲಿ ವಿಲ್​ ಸ್ಮಿತ್ ಮಾಡಿಕೊಂಡ ವಿವಾದದಿಂದ 10 ವರ್ಷ ಬ್ಯಾನ್​ಗೆ ಒಳಗಾಗಿದ್ದಾರೆ.

ವಿಲ್ ಸ್ಮಿತ್

ಸಿಲ್ವೆಸ್ಟರ್ ಸ್ಟಲ್ಲೋನ್: ಇವರು ಪ್ರಸಿದ್ಧ ಹಾಲಿವುಡ್ ನಟರಲ್ಲಿ ಒಬ್ಬರು. ಕರೀನಾ ಕಪೂರ್ ಮತ್ತು ಅಕ್ಷಯ್ ಕುಮಾರ್ ಜೊತೆಯಾಗಿ ಕಾಣಿಸಿಕೊಂಡ ಬಾಲಿವುಡ್​ ಚಲನಚಿತ್ರ 'ಕಂಬಖ್ತ್ ಇಷ್ಕ್' ನಲ್ಲಿ ಅವರು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಆಗಮ ಮತ್ತು ನಟನೆಯಿಂದ ಬಾಲಿವುಡ್​ ಚಿತ್ರರಂಗ ಹಾಲಿವುಡ್​ ನಟರಿಗೆ ಹೆಚ್ಚಿಗೆ ಒತ್ತು ನೀಡತೊಡಗಿತು.

ಸಿಲ್ವೆಸ್ಟರ್ ಸ್ಟಲ್ಲೋನ್

ಕ್ಲೈವ್ ಸ್ಟಾಂಡನ್: ಕತ್ರಿನಾ ಕೈಫ್​ ಮತ್ತು ಅಕ್ಷಯ್ ಕುಮಾರ್​ ನಟನೆಯ 'ನಮಸ್ತೆ ಲಂಡನ್' ಚಿತ್ರದ ಮೂಲಕ ಇವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಚಿತ್ರದಲ್ಲಿ ಇವರು ‘ಚಾರ್ಲಿ ಬ್ರೌನ್’ ಎಂಬ ಪಾತ್ರಕ್ಕೆ ಕತ್ರಿನಾ ಕೈಫ್ ಅವರ ಗೆಳೆಯನಾಗಿ ಬಣ್ಣ ಹಚ್ಚಿದ್ದಾರೆ. ಹಾಲಿವುಡ್​ನಲ್ಲಿ ವೆನ್​ ಸಿರೀಜ್​ ಸೇರಿದಂತೆ ಹಲವು ಚಿತ್ರಗಳ ಪಾತ್ರಕ್ಕೆ ಇವರು ಹೆಸರುವಾಸಿಯಾಗಿದ್ದಾರೆ.

ಕ್ಲೈವ್ ಸ್ಟಾಂಡನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.