ETV Bharat / entertainment

ಹಾರ್ಟ್​ ಬ್ರೇಕಿಂಗ್​ ಘಟನೆ ನೆನಪಿಸಿಕೊಂಡು ಕಣ್ಣೀರಿಟ್ಟ ನೋರಾ ಪತೇಹಿ - Viral in Social Media

'ಪಚ್​ತಾವೋ' ಹಾಡು ಚಿತ್ರೀಕರಣದ ಸಮಯದಲ್ಲಿ ನಾನು ಬ್ರೇಕಪ್​ ನೋವಿನಲ್ಲಿದ್ದೆ ಎಂದು ನೋರಾ ಹೇಳಿರುವ ಡ್ಯಾನ್ಸ್ ರಿಯಾಲಿಟಿ ಶೋನ ವಿಡಿಯೋ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Bollywood star Nora Patehi
ಬಾಲಿವುಡ್​ ತಾರೆ ನೋರಾ ಪತೇಹಿ
author img

By

Published : Nov 28, 2022, 9:26 AM IST

ಮುಂಬೈ (ಮಹಾರಾಷ್ಟ್ರ): ಡ್ಯಾನ್ಸ್​ ರಿಯಾಲಿಟಿ ಶೋ ಜಲಕ್​ ದಿಖ್ಲಾ ಜಾದಲ್ಲಿ ಸ್ಪರ್ಧಿಗಳು ತಮ್ಮ 'ಪಚ್​ತಾವೋ'ಗೆ ಹಾಡಿಗೆ ನೀಡಿದ ಪರ್ಫಾರ್ಮೆನ್ಸ್​ ನೋಡಿ ಬಾಲಿವುಡ್​ನ ಸೆನ್ಸೇಷನಲ್​ ತಾರೆ ನೋರಾ ಪತೇಹಿ ಭಾವುಕರಾಗಿದ್ದಾರೆ. ಸೃತಿ ಜಾ ಅವರ ಅಭಿನಯವು 2019ರಲ್ಲಿ ಹಾಡಿನ ಚಿತ್ರೀಕರಣ ಸಮಯದ ಹಾರ್ಟ್​ ಬ್ರೇಕಿಂಗ್​ ಸನ್ನಿವೇಶವೊಂದನ್ನು ನೆನಪು ಮಾಡಿಸಿತು ಎಂದು ಡ್ಯಾನ್ಸ್​ ರಿಯಾಲಿಟಿ ಶೋ ಜಡ್ಜ್​ ಕುರ್ಚಿಯಲ್ಲಿ ಕುಳಿತಿರುವ ನೋರಾ ಪತೇಹಿ ಕಣ್ಣೀರಿಟ್ಟಿದ್ದಾರೆ.

'ಪಚ್​ತಾವೋ' ಹಾಡು ಚಿತ್ರೀಕರಣದ ಸಮಯದಲ್ಲಿ ನಾನು ಬ್ರೇಕಪ್​ ನೋವಿನಲ್ಲಿದ್ದೆ ಎಂದು ನೋರಾ ಹೇಳಿರುವ ಡ್ಯಾನ್ಸ್ ರಿಯಾಲಿಟಿ ಶೋನ ವಿಡಿಯೋ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವಿಡಿಯೋದಲ್ಲಿ ನೋರಾ, 'ಸೃತಿ ಮತ್ತು ವಿವೇಕ್ ನನ್ನ ಹಾಡಿಗೆ ನೀವು ನೀಡಿದ ಅಭಿನಯ ನನಗೆ ಬಹಳ ಹತ್ತಿರವಾಗಿದೆ. ಈ ಹಾಡಿನ ಚಿತ್ರೀಕರಣದ ನಾನೂ ಕೂಡ ಅಂತಹುದೇ ಭಾವನಾತ್ಮಕ ಸನ್ನಿವೇಶ ಎದುರಿಸುತ್ತಿದ್ದೆ. ಹಾಗಾಗಿ ಆ ಭಾವನೆ ನನ್ನ ಅಭಿನಯದಲ್ಲೂ ಬಳಸಿಕೊಳ್ಳಲು ಸಾಧ್ಯವಾಗಿತ್ತು. ಇದು ನೃತ್ಯದ ವಿಷಯದಲ್ಲಿ ನಿಮ್ಮ ಬೆಸ್ಟ್​ ಪರ್ಫಾರ್ಮೆನ್ಸ್​ ಆಗಿರದೇ ಇರಬಹುದು. ಆದರೆ ಭಾವನಾತ್ಮಕವಾಗಿ ಟಚ್​ ಮಾಡಿದೆ ಎಂದಿದ್ದಾರೆ.

2019ರಲ್ಲಿ ಬಿಡುಗಡೆಯಾಗಿದ್ದ 'ಪಚ್​ತಾವೋಗೆ' ಆಲ್ಬಮ್​ ಸಾಂಗ್​ಗೆ ಅರಿಜಿತ್​ ಸಿಂಗ್​ ಧ್ವನಿಯಾಗಿದ್ದಾರೆ. ಜಾನಿ ಬರೆದಿರುವ ಈ ಹಾಡಿಗೆ ಬಿ ಪ್ರಾಕ್​ ಸಂಗೀತ ಸಂಯೋಜನೆ ಮಾಡಿದ್ದು, ಹಾಡು ಸಖತ್​ ಹಿಟ್​ ಆಗಿತ್ತು. ನೋರಾ ಪತೇಹಿ ಜೊತೆಗೆ ವಿಕ್ಕಿ ಕೌಶಲ್ ಮತ್ತು ಪ್ರಭ್ ಉಪ್ಪಲ್ ಕೂಡ ಅಭಿನಯಿಸಿರುವ ಈ ಹಾಡು ಇಂದಿಗೂ ಹಿಟ್​ ಲಿಸ್ಟ್​ನಲ್ಲಿದೆ.

ಇತ್ತೀಚೆಗೆ ಬಿಡುಗಡೆಗೊಂಡ 'ಥ್ಯಾಂಕ್​ ಗಾಡ್'​ ಸಿನಿಮಾದ ಮನಿಕೆ ಹಾಡಿನಲ್ಲಿ ನೋರಾ ಕಾಣಿಸಿಕೊಂಡಿದ್ದರು. ಜಾನ್​ ಅಬ್ರಹಾಂ, ರಿತೇಶ್ ದೇಶಮುಖ್ ಮತ್ತು ಶೆಹನಾಜ್ ಗಿಲ್ ಜೊತೆಗೆ ನೋರಾ ಮುಂಬರುವ 100 ಪರ್ಸೆಂಟ್​ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ಹಿಂದಿ ದೃಶ್ಯಂ 2 ಅಬ್ಬರ.. 9 ದಿನಗಳಲ್ಲಿ 126 ಕೋಟಿ ಕಲೆಕ್ಷನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.