ETV Bharat / entertainment

ನಿಕ್ ಜೋನಾಸ್ ಜನ್ಮದಿನ: ಪ್ರೀತಿಯ ಮಳೆಗೈದ ಪತ್ನಿ ಪ್ರಿಯಾಂಕಾ ಚೋಪ್ರಾ - ನಿಕ್ ಜೋನಾಸ್ ಬರ್ತ್​ ಡೇ

Nick Jonas Birthday: ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ಅಮೆರಿಕನ್​ ಗಾಯಕ ನಿಕ್ ಜೋನಾಸ್ 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

priyanka chopra birthday post for nick jonas
ನಿಕ್ ಜೋನಾಸ್ ಜನ್ಮದಿನಕ್ಕೆ ಶುಭ ಕೋರಿದ ಪ್ರಿಯಾಂಕಾ ಚೋಪ್ರಾ
author img

By ETV Bharat Karnataka Team

Published : Sep 17, 2023, 2:26 PM IST

ಬಾಲಿವುಡ್​​ ಹಾಗು​ ಹಾಲಿವುಡ್​​ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್​ ಗಾಯಕ ನಿಕ್​​ ಜೋನಾಸ್​ ಪವರ್​ಫುಲ್​​ ಸ್ಟಾರ್​ ಕಪಲ್​​. ಅದೆಷ್ಟೋ ಜನರಿಗೆ ಸ್ಫೂರ್ತಿಯೂ ಆಗಿದ್ದಾರೆ. ಇಂದು ಗಾಯಕ ನಿಕ್​​ ಜೋನಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಮೆರಿಕನ್​ ಗಾಯಕನಿಗೆ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದ ಸ್ನೇಹಿತರೂ ಕೂಡ ವಿಶೇಷವಾಗಿ ಶುಭ ಕೋರುತ್ತಿದ್ದಾರೆ. ಪತ್ನಿ ಪ್ರಿಯಾಂಕಾ ಚೋಪ್ರಾ ಪತಿಗೆ ಪ್ರೀತಿಪೂರ್ವಕವಾಗಿ ಶುಭ ಕೋರಿದ್ದಾರೆ.

ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಸ್ಪೆಷಲ್​ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಪತಿ ಜೊತೆಗಿರುವ ಫೋಟೋಗಳು, ನಿಕ್​​ ಜೋನಾಸ್ ಸಿಂಗಲ್​ ಫೋಟೋ, ಮಗಳು ಮಾಲ್ತಿ ಮೇರಿ ಫೋಟೋಗಳು ಈ ಪೋಸ್ಟ್​​ನಲ್ಲಿದೆ.

ಮೊದಲೆರಡು ಫೋಟೋಗಳಲ್ಲಿ ಈ ಸ್ಟಾರ್ ಕಪಲ್​ ಸಖತ್​ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿದ್ದಾರೆ. ಪತಿಗೆ ಪ್ರಿಯಾಂಕಾ ಚುಂಬಿಸುತ್ತಿರುವ ಫೋಟೋ ಜೋಡಿಯ ಪ್ರೀತಿ ವಾತ್ಸಲ್ಯದ ಬಗ್ಗೆ ಸದ್ದು ಮಾಡಿದೆ. ಅಪ್ಪುಗೆ ಜೋಡಿಯನ್ನು ಮತ್ತಷ್ಟು ಸುಂದರವಾಗಿ ಕಾಣಿಸಿಕೊಳ್ಳುವಂತೆ ಮಾಡಿದೆ. ಉಳಿದ ಫೋಟೋಗಳಲ್ಲಿ ಜೋಡಿ ಗಾಲ್ಫ್​​ ಆಡುತ್ತಿರುವಂತೆ ಕಂಡಿದೆ. ನಿಕ್​​ ಜೋನಾಸ್ ಕೇವಲ ಜನಪ್ರಿಯ ಗಾಯಕ ಮಾತ್ರವಲ್ಲ. ಗಾಲ್ಫ್ ಕ್ರೀಡೆಯಲ್ಲೂ ಬಹಳ ಆಸಕ್ತಿ ಹೊಂದಿದ್ದಾರೆ. ಗಾಲ್ಫ್​ ಮೈದಾನದಲ್ಲಿ, ತಮ್ಮ ಮೆಚ್ಚಿನ ಕ್ರೀಡೆಯಲ್ಲಿ ಬಹಳ ಉತ್ಸಾಹದಿಂದ ತೊಡಗಿರುವಂತೆ ತೋರುತ್ತಿದೆ. ಗಾಲ್ಫ್​ ಮೈದಾನದಲ್ಲಿನ ಪ್ರಿಯಾಂಕಾ ಮತ್ತು ನಿಕ್​ ಅವರ ಸಂತೋಷದ ಕ್ಷಣಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಎಲ್ಲದಕ್ಕಿಂತ ಹೆಚ್ಚು ಆಕರ್ಷಣೀಯ ಫೋಟೋ ಅಂದ್ರೆ ಅದು ಮಗಳು ಮಾಲ್ತಿ ಜೊತೆಗಿರುವ ನಿಕ್​ ಫೋಟೋ. ಕಾರಿನೊಳಗೆ ಕುಳಿತ ತಂದೆ ಮಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು, ಮಾಲ್ತಿ ಮೇರಿ ಚೋಪ್ರಾ ಜೋನಾನ್​ ಸಖತ್​ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿ ಅಭಿಮಾನಿಗಳಿಂದ ಮೆಚ್ಚುಗೆ ಸ್ವೀಕರಿಸಿದೆ.

ಇದನ್ನೂ ಓದಿ: ಸೈಮಾ ಪ್ರಶಸ್ತಿ ಪಡೆದ ತಮಿಳು, ಮಲಯಾಳಂ ಸಿನಿಮಾ ಸಾಧಕರು ಯಾರು? ಇಲ್ಲಿದೆ ಪಟ್ಟಿ

ನಿಮ್ಮನ್ನೇ ಆಚರಿಸುವುದು ನನ್ನ ಜೀವನದ ಅತ್ಯಂತ ಸಂತೋಷಕರ ಕ್ಷಣ, ನನಗೆ ತಿಳಿದಿರದ ಶಾಂತಿಯನ್ನು ನೀವು ನನಗೆ ತೋರಿಸಿದ್ದೀರಿ, ಪ್ರೀತಿ ಕೊಟ್ಟಿದ್ದೀರಿ, ಬರ್ತ್​​ ಡೇ ಬಾಯ್​​ ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ, ಹ್ಯಾಪಿ ಬರ್ತ್​ ಡೇ ಬೇಬಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಿಷಬ್​ ಶೆಟ್ಟಿ ಕೈತುಂಬಾ ಸೈಮಾ ಪ್ರಶಸ್ತಿ​; ವಿಡಿಯೋ ಶೇರ್ ಮಾಡಿದ ಡಿವೈನ್​ ಸ್ಟಾರ್- ನೋಡಿ

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​​ ಜೋನಾಸ್​ 2018ರಲ್ಲಿ ದಾಂಪತ್ಯ ಜೀವನ ಆರಂಭಿಸಿದರು. ಜೋಧ್​ಪುರದ ಉಮೈದ್​​ ಭವನ್ ಪ್ಯಾಲೆಸ್​ನಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್​​ ಶಾಸ್ತ್ರದ ಪ್ರಕಾರ ಮದುವೆ ಆದರು. ಇದೊಂದು ರಾಯಲ್​ ವೆಡ್ಡಿಂಗ್​ ಆಗಿತ್ತು. ಬಳಿಕ ದೆಹಲಿ ಮತ್ತು ಮುಂಬೈನಲ್ಲಿ ಅದ್ಧೂರಿ ಆರತಕ್ಷತೆ ಆಯೋಜಿಸಿದ್ದರು. 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗಳು ಮಾಲ್ತಿ ಮೇರಿಯನ್ನು ಸ್ವಾಗತಿಸದರು. ವಯಸ್ಸಿನ ವಿಚಾರವಾಗಿ ಕೆಲವರಿಂದ ಟೀಕೆಗೊಳಗಾದರೂ, ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.