ETV Bharat / entertainment

'ನಯನತಾರಾ - ಬಿಯಾಂಡ್ ದಿ ಫೇರಿಟೇಲ್' ಟೀಸರ್​ ರಿಲೀಸ್ - ನಯನತಾರಾ ವಿಘ್ನೇಶ್ ಮದುವೆಯ ಸಾಕ್ಷ್ಯಚಿತ್ರ

ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ವಿಡಿಯೋ ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಇದೀಗ ನಯನತಾರಾ: ಬಿಯಾಂಡ್ ದಿ ಫೇರಿಟೇಲ್ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರ ಟೀಸರ್ ಬಿಡುಗಡೆಯಾಗಿದೆ.

Nayanthara Beyond The Fairytale teaser release
ನಯನತಾರಾ ಬಿಯಾಂಡ್ ದಿ ಫೇರಿಟೇಲ್ ಟೀಸರ್​ ರಿಲೀಸ್
author img

By

Published : Sep 24, 2022, 4:32 PM IST

ದಕ್ಷಿಣದ ಭಾರತ ಸಿನಿಮಾ ರಂಗದ ಸೂಪರ್‌ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್​ ಶಿವನ್ ಜೂನ್ 9ರಂದು ಮಹಾಬಲಿಪುರಂನಲ್ಲಿ ಮದುವೆ ಆಗಿ​ ವೈವಾಹಿಕ ಜೀವನದ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಮದುವೆ ಫೋಟೋಗಳನ್ನಷ್ಟೇ ನೋಡಿ ಖುಷಿಪಟ್ಟಿದ್ದ ಅಭಿಮಾನಿಗಳು ಇದೀಗ ಸಂಪೂರ್ಣ ವಿವಾಹ ಸಮಾರಂಭವನ್ನು ಆನ್​ಲೈನ್​ನಲ್ಲಿ ನೋಡಬಹುದು.

  • " class="align-text-top noRightClick twitterSection" data="">

ಓಟಿಟಿ ಪ್ಲಾಟ್​ಫಾರ್ಮ್​ ನೆಟ್​​ಫ್ಲಿಕ್ಸ್​ನಲ್ಲಿ ಶೀಘ್ರದಲ್ಲೇ ಮದುವೆ ವಿಡಿಯೋ ಸಾಕ್ಷ್ಯಚಿತ್ರ ರೂಪದಲ್ಲಿ ಪ್ರಸಾರವಾಗಲಿದ್ದು, ಇದೀಗ 'ನಯನತಾರಾ-ಬಿಯಾಂಡ್ ದಿ ಫೇರಿಟೇಲ್' ಟೀಸರ್​ ರಿಲೀಸ್ ಆಗಿದೆ. ಝಾಕಿರ್ ಖಾನ್ ಮತ್ತು ನಟ ಪ್ರಜಕ್ತಾ ಕೋಲಿ ಅವರು ಆಯೋಜಿಸಿದ್ದ ಸ್ಟ್ರೀಮಿಂಗ್ ಪೋರ್ಟಲ್‌ನ ಟುಡಮ್ 2022 ಈವೆಂಟ್‌ನಲ್ಲಿ ಟೀಸರ್ ಅನ್ನು ಅನಾವರಣಗೊಳಿಸಲಾಯಿತು.

Nayanthara Beyond The Fairytale teaser release
ಯನತಾರಾ ಹಾಗೂ ವಿಘ್ನೇಶ್​ ಶಿವನ್

ವಿಘ್ನೇಶ್ ಶಿವನ್ ತಮ್ಮ ಜೀವದ ಗೆಳತಿ ಬಗ್ಗೆ ಮಾತನಾಡುತ್ತಾ, ಅವರು ಅದ್ಭುತ ಎಂದು ಹೇಳುವುದನ್ನು ಟೀಸರ್​​ನಲ್ಲಿ ನಾವು ಕಾಣಬಹುದು. ಟೀಸರ್​​ನಲ್ಲಿ ನಯನತಾರಾ ತನ್ನ ಜೀವನದ ಮಹತ್ತರ ದಿನದ ತಯಾರಿ ನಡೆಸುವುದನ್ನು ನಾವು ಕಾಣಬಹುದು.

ಜೊತೆಗೆ ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ 100 2018 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ನಯನತಾರಾ ತಮ್ಮ ಪ್ರಯಾಣದ ಬಗ್ಗೆ ಮಾತನಾಡುತ್ತಾ, ಇದೆಲ್ಲವೂ ಪ್ರಾರಂಭವಾದಾಗ, ಹೇಗೆ ಎಂದು ನನಗೆ ತಿಳಿದಿರಲಿಲ್ಲ. ನಾನು ಚಿತ್ರರಂಗದ ಹಿನ್ನೆಲೆ ಹೊಂದಿದವಳಲ್ಲ. ನಾನೋರ್ವ ಸಾಮಾನ್ಯ ಹುಡುಗಿ. ಏನು ಮಾಡಿದರೂ ಶೇ.100ರಷ್ಟು ನೀಡಲು ಬಯಸುವ ಹುಡುಗಿ ಎಂದು ಹೇಳುವುದನ್ನು ಕಾಣಬಹುದು.

ಇದನ್ನೂ ಓದಿ: ಮಾದಕ ನಟಿ ಬಿಪಾಶಾ ಬಸು ಸೀಮಂತ.. ಭಾವುಕಳಾದ ಪತ್ನಿಗೆ ಪ್ರೀತಿಯ ಮಳೆ ಸುರಿಸಿದ ಪತಿ ಕರಣ್

ನಯನತಾರಾ ಮತ್ತು ವಿಘ್ನೇಶ್ ಶಿವನ್ 2022ರ ಜುಲೈ 21 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಯ ಮದುವೆಯ ಸಾಕ್ಷ್ಯಚಿತ್ರ 'ನಯನತಾರಾ-ಬಿಯಾಂಡ್ ದಿ ಫೇರಿಟೇಲ್' ಶೀರ್ಷಿಕೆಯಡಿ ಬರಲಿದೆ. ಈ ಸಾಕ್ಷ್ಯಚಿತ್ರವನ್ನು ಗೌತಮ್ ವಾಸುದೇವ್ ಮೆನನ್ ನಿರ್ದೇಶಿಸಿದ್ದು, ರೌಡಿ ಪಿಕ್ಚರ್ಸ್ ನಿರ್ಮಾಣ ಮಾಡಿದೆ.

ಮದುವೆ ವಿಡಿಯೋ ಮಾತ್ರವಲ್ಲದೇ ದಂಪತಿ ಪರಸ್ಪರರು ಭೇಟಿಯಾದ, ಜೋಡಿಯಾದ, ಪ್ರೀತಿಯಲ್ಲಿ ಬಿದ್ದು, ಮದುವೆಯಾಗುವವರೆಗೆ ಹಾಗೂ ಇನ್ನಷ್ಟು ತಮ್ಮ ಜೀವನದ ಕ್ಷಣಗಳ ಬಗ್ಗೆ ಮಾತನಾಡಿರುವ ವಿಡಿಯೋಗಳು ಇರಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.