ETV Bharat / entertainment

'ಹಾಯ್​ ನಾನ್ನ' ರಿಲೀಸ್​: ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಅಪ್ಪ-ಮಗಳ ಬಾಂಧವ್ಯ

Hi nanna Telugu movie released: ನಾನಿ ಮತ್ತು ಮೃಣಾಲ್​ ಠಾಕೂರ್​ ಮುಖ್ಯಭೂಮಿಕೆಯ 'ಹಾಯ್​ ನಾನ್ನ' ಸಿನಿಮಾ ಇಂದು ತೆರೆ ಕಂಡಿದೆ.

nani starrer Hi nanna movie release today
'ಹಾಯ್​ ನಾನ್ನ' ರಿಲೀಸ್​: ಪ್ರೇಕ್ಷಕರನ್ನು ಮೆಚ್ಚಿಸಿದ ಅಪ್ಪ-ಮಗಳ ಬಾಂಧವ್ಯದ ಕಥೆ
author img

By ETV Bharat Karnataka Team

Published : Dec 7, 2023, 4:13 PM IST

Updated : Dec 7, 2023, 4:53 PM IST

ಟಾಲಿವುಡ್​ ನಟ, ನಿರ್ಮಾಪಕ ನಾನಿ ಅವರ ಹೊಸ ಸಿನಿಮಾ 'ಹಾಯ್​ ನಾನ್ನ' ಇಂದು ಅದ್ಧೂರಿಯಾಗಿ ತೆರೆ ಕಂಡಿತು. 'ದಸರಾ' ಬ್ಲಾಕ್​ಬಸ್ಟರ್​ ಹಿಟ್​ ಬಳಿಕ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಪ್ಪ ಮತ್ತು ಮಗಳ ಬಾಂಧವ್ಯದ ಸುತ್ತ ಸುತ್ತುವ ಈ ಎಮೋಷನಲ್​ ಫ್ಯಾಮಿಲಿ ಎಂಟರ್ಟೈನ್‌ಮೆಂಟ್​ ಚಿತ್ರ ಬಿಡುಗಡೆಯಾದ ಮೊದಲ ದಿನವೇ ವೀಕ್ಷಕರ ಮೆಚ್ಚುಗೆ ಸ್ವೀಕರಿಸಿದೆ.

ಹೊಸ ನಿರ್ದೇಶಕರೊಂದಿಗೆ ಸಿನಿಮಾ ಮಾಡುವ ನಾನಿ ಈ ಬಾರಿಯೂ ಅದೇ ಹಾದಿಯಲ್ಲಿ ಸಾಗಿದ್ದಾರೆ. 'ಹಾಯ್ ನಾನ್ನ'ಗೆ ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಣ್ಣದ ಲೋಕದಲ್ಲಿ ನಿರ್ದೇಶಕನಾಗಿ ಇದು ಇವರ ಚೊಚ್ಚಲ ಚಿತ್ರ. ಸಿನಿಮಾದಲ್ಲಿ ನಾನಿಗೆ ನಾಯಕಿಯಾಗಿ 'ಸೀತಾರಾಮಂ' ಖ್ಯಾತಿಯ ಮೃಣಾಲ್​ ಠಾಕೂರ್ ನಟಿಸಿದ್ದಾರೆ. ಬೇಬಿ ಕಿಯಾರಾ ಖಾನ್ ಮುಖ್ಯ ಪಾತ್ರ ಮಾಡಿದ್ದು, ನಾನಿ ಮಗಳಾಗಿ ಕಾಣಿಸಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಸಿನಿಮಾ ಹೇಗಿದೆ?: ಟಾಲಿವುಡ್​ನಲ್ಲಿ ಲವ್​ ಸ್ಟೋರಿ ಸಿನಿಮಾಗಳು ಹೊಸತೇನಲ್ಲ. ಆದರೆ, ಚಿತ್ರದ ಸನ್ನಿವೇಶಗಳು ಹಾಗೂ ತಿರುವುಗಳು ಮಾತ್ರ ಬೇರೆಯೇ ಆಗಿರುತ್ತವೆ. ಈ ಕಾನ್ಸೆಪ್ಟ್​ಗಳೇ ಪ್ರೇಕ್ಷಕರನ್ನು ಬಲವಾಗಿ ಆಕರ್ಷಿಸುತ್ತದೆ. 'ಹಾಯ್​ ನಾನ್ನ' ಕೂಡ ಇದಕ್ಕೆ ಹೊರತಾಗಿಲ್ಲ. ಹೃದಯಸ್ಪರ್ಶಿ ಸಿನಿಮಾಗಳು ನೋಡುಗರ ಭಾವನೆಗಳನ್ನು ಬಡಿದೆಬ್ಬಿಸುತ್ತದೆ. ಮಗುವು ನಾಯಕಿಯನ್ನು ತನ್ನ ತಾಯಿಯಂತೆ ಕಾಣಲು ಪ್ರಾರಂಭಿಸಿದ ಕ್ಷಣದಿಂದ, ಕಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಕಲ್ಪನೆ ಪ್ರೇಕ್ಷಕರಿಗೆ ಸಿಗುತ್ತದೆ.

  • #HiNannaReview 🌟🌟🌟🌟✨/5

    Just loved the movie 😍Emotion ni baaga handle chesaru..
    Acting was too good by Nani,chinna papa baga cute ga undhi..For me hi nana is the best film of this year Everyone should watch with their families 🥳🧨.Don't miss out in theatres#HiNanna

    — 𝙿𝚂𝚈𝙲𝙷𝙾 𝚁𝙴𝙳𝙳𝚈™ 🌶️ (@Psycho_9045) December 6, 2023 " class="align-text-top noRightClick twitterSection" data=" ">

ಚಿತ್ರದಲ್ಲಿ ಎರಡು ಪ್ರೇಮ ಕಥೆಗಳಿವೆ. ಮೊದಲಾರ್ಧದಲ್ಲಿ ಎರಡು ಜೋಡಿಯ ಕೆಮಿಸ್ಟ್ರಿ ನಿಧಾನಗತಿಯಲ್ಲಿ ಸಾಗುತ್ತದೆ. ಪ್ರೀತಿಯಲ್ಲಿ ಬೀಳುವುದು, ನಂತರ ಬ್ರೇಕಪ್​.. ಇವೆಲ್ಲಾ ಸಾಮಾನ್ಯವಾಗಿ ಎಲ್ಲಾ ಸಿನಿಮಾದಲ್ಲಿ ಇರುವಂತೆಯೇ ತೋರಿಸಲಾಗಿದೆ. ನಂತರ ಕಥೆಗೊಂದು ಟ್ವಿಸ್ಟ್​ ನೀಡಿದ್ದು, ಸಿನಿಮಾವನ್ನು ಕುತೂಹಲಕರವಾಗಿಸುತ್ತದೆ. ದ್ವಿತೀಯಾರ್ಧದಲ್ಲಿ ನಿರ್ದೇಶಕರು ಎಮೋಷನಲ್​ ಸನ್ನಿವೇಶಗಳ ಜೊತೆಗೆ ತಮ್ಮ ಕಥೆಯ ಮೇಲಿನ ಹಿಡಿತವನ್ನು ತೋರಿಸಿದ್ದಾರೆ. ಅಪ್ಪ ಮತ್ತು ಮಗಳ ಭಾವನೆಗಳೇ ಈ ಸಿನಿಮಾ ಹೈಲೈಟ್​. ಕೌಟುಂಬಿಕ ಪ್ರೇಕ್ಷಕರಿಗೆ ಇಷ್ಟವಾಗುವ ಈ ರೀತಿಯಲ್ಲೇ ಚಿತ್ರಕಥೆಯನ್ನು ಕಟ್ಟಿಕೊಡಲಾಗಿದೆ.

'ಹಾಯ್​ ನಾನ್ನ' ಚಿತ್ರವನ್ನು ವೈರ ಎಂಟರ್ಟೈನ್​ಮೆಂಟ್ಸ್​ ಬ್ಯಾನರ್​ ಅಡಿ ಮೋಹನ್​ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ನಿರ್ಮಾಣ ಮಾಡಿದ್ದು, ಶೌರ್ಯುವ್​ ನಿರ್ದೇಶಿಸಿದ್ದಾರೆ. ಸಾನು ಜಾನ್​ ವಗೀಸ್​ ಐಎಸ್​ಸಿ ಕ್ಯಾಮರಾ ವರ್ಕ್​, ಹೇಶಮ್​ ಅಬ್ದುಲ್​ ವಹಾಬ್​ ಸಂಗೀತ ನಿರ್ದೇಶನ, ಪ್ರವೀಣ್​ ಆಂಥೋನಿ ಸಂಕಲನ ಚಿತ್ರಕ್ಕಿದೆ. ನಾನಿ, ಮೃಣಾಲ್​ ಜೊತೆ ಶ್ರುತಿ ಹಾಸನ್​ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಲಯಾಳಂ ನಟ ಜಯರಾಮ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಂಡ ಚಿತ್ರ ಪಂಚ ಭಾಷೆಗಳಲ್ಲಿ ಇಂದು ತೆರೆಕಂಡಿದೆ.

ಇದನ್ನೂ ಓದಿ: 'ಸ್ಟಾರ್​ ನಿರ್ದೇಶಕರ ಜೊತೆ ಯಾಕೆ ಸಿನಿಮಾ ಮಾಡಲ್ಲ?' ಫ್ಯಾನ್ಸ್​ ಪ್ರಶ್ನೆಗೆ ನಾನಿ ಉತ್ತರ ಹೀಗಿತ್ತು

Last Updated : Dec 7, 2023, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.