ETV Bharat / entertainment

ಪ್ಯಾರಿಸ್​ ಪ್ರವಾಸದ ಖುಷಿಯಲ್ಲಿ ಮಹೇಶ್​​ ಬಾಬು ಕುಟುಂಬ - ಮಹೇಶ್​​ ಬಾಬು ಪ್ಯಾರಿಸ್​ ಫೋಟೋ

ಮಹೇಶ್​​ ಬಾಬು ಕುಟುಂಬ ಪ್ಯಾರಿಸ್​ ಪ್ರವಾಸದಲ್ಲಿದೆ. ನಮ್ರತಾ ಶಿರೋಡ್ಕರ್ ಫೋಟೋ ಶೇರ್ ಮಾಡಿದ್ದಾರೆ.

mahesh babu family picture
ಮಹೇಶ್​​ ಬಾಬು ಫ್ಯಾಮಿಲಿ
author img

By

Published : Apr 11, 2023, 3:25 PM IST

ಮಾಜಿ ನಟಿ ನಮ್ರತಾ ಶಿರೋಡ್ಕರ್ ತಮ್ಮ ಅಧಿಕೃತ ಇನ್ಸ್​​ಟಾಗ್ರಾಮ್​​ ಖಾತೆಯಲ್ಲಿ ಪತಿ ಮಹೇಶ್ ಬಾಬು ಅವರು ಮಕ್ಕಳಾದ ಸಿತಾರಾ ಮತ್ತು ಗೌತಮ್ ಅವರೊಂದಿಗೆ ಸಂವಹನ ನಡೆಸುತ್ತಿರುವ ಫೋಟೋವನ್ನು ಶೇರ್​ ಮಾಡಿದ್ದಾರೆ. ಚಿತ್ರಕ್ಕೆ "My 3 Musketeers back together" ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ. ಈ ಚಿತ್ರವೀಗ ಸಾಮಾಜಿಕ ಜಾಲತಾಣ ಸುತ್ತುವರಿಯುತ್ತಿದೆ.

ಸೂಪರ್​ ಸ್ಟಾರ್ ಮಹೇಶ್ ಬಾಬು ವೈಟ್​ ಆ್ಯಂಡ್​ ವೈಟ್ ಡ್ರೆಸ್‌ನಲ್ಲಿದ್ದು, ಕಪ್ಪು ಶೂ ಧರಿಸಿದ್ದಾರೆ. ಚಿತ್ರದಲ್ಲಿ ಮೂವರೂ ಖುಷಿಯಿಂದಿರುವುದನ್ನು ಕಾಣಬಹುದು. ಕೆಲ ದಿನಗಳ ಹಿಂದೆ ನಮ್ರತಾ ಶಿರೋಡ್ಕರ್, ಸಿತಾರಾ ತಮ್ಮ ಸಂಬಂಧಿಕರೊಂದಿಗೆ ಪ್ಯಾರಿಸ್‌ ಪ್ರವಾಸ ಕೈಗೊಂಡಿದ್ದರು. ಪುತ್ರ ಗೌತಮ್ ಜೊತೆ ಮಹೇಶ್ ಬಾಬು ತೆರಳಿದ್ದಾರೆ. ಈ ಹಿಂದೆ ಯುರೋಪಿನ ಅತ್ಯಂತ ರೊಮ್ಯಾಂಟಿಕ್ ನಗರಗಳಲ್ಲಿ ಒಂದಾದ ಪ್ಯಾರಿಸ್‌ನಲ್ಲಿ ಸ್ಮರಣೀಯ ಸಮಯ ಕಳೆದ ಫೋಟೋಗಳನ್ನು ನಮ್ರತಾ ಪೋಸ್ಟ್‌ ಮಾಡಿದ್ದರು.

mahesh babu family picture
ಮಹೇಶ್​​ ಬಾಬು ಫ್ಯಾಮಿಲಿ...ಫೋಟೋ ಶೇರ್ ಮಾಡಿದ ನಮ್ರತಾ ಶಿರೋಡ್ಕರ್

ಮಹೇಶ್ ಬಾಬು, ಮಗ ಗೌತಮ್​ ಇತ್ತೀಚೆಗೆ ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ನಮ್ರತಾ ಮತ್ತು ಸಿತಾರಾ ಅವರ ತಂಡ ಸೇರಿಕೊಳ್ಳಲು ತೆರಳುತ್ತಿರುವುದಾಗಿ ಖಚಿತಪಡಿಸಿದ್ದರು. ಅದರಂತೆ, ಇದೀಗ ಸಂಪೂರ್ಣ ಕುಟುಂಬ ಪ್ಯಾರಿಸ್​ ಪ್ರವಾಸವನ್ನು ಎಂಜಾಯ್​ ಮಾಡುತ್ತಿದೆ.

ಮಹೇಶ್​ ಬಾಬು ಮುಂದಿನ ಸಿನಿಮಾ ಯಾವುದು?: ತ್ರಿವಿಕ್ರಮ್ ಶ್ರೀನಿವಾಸ್ ಅವರ ಚಿತ್ರದಲ್ಲಿ ಇವರು ಕಾಣಿಸಿಕೊಳ್ಳಲಿದ್ದಾರೆ. SSMB28 ಸಿನಿಮಾದ ತಾತ್ಕಾಲಿಕ ಶೀರ್ಷಿಕೆ. ಅಥಡು ಮತ್ತು ಖಲೇಜಾ ಸೂಪರ್​ ಹಿಟ್ ಸಿನಿಮಾ ನಂತರ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಕೆಲಸ ಮಾಡುತ್ತಿರುವ ಮುಂದಿನ ಚಿತ್ರವಿದು. SSMB28 ಸಲುವಾಗಿ 12 ವರ್ಷಗಳ ನಂತರ ಇವರಿಬ್ಬರು ಒಂದಾಗಿದ್ದಾರೆ. ಪೂಜಾ ಹೆಗ್ಡೆ ನಾಯಕಿ ನಟಿ. ಶ್ರೀಲೀಲಾ ಕೂಡ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್​ಆರ್​ಆರ್​ ನಿರ್ದೇಶಕ ಎಸ್.​ಎಸ್.ರಾಜಮೌಳಿ ನಿರ್ದೇಶನದ ಚಿತ್ರದಲ್ಲೂ ನಟಿಸಲಿದ್ದು, SSMB29 ಚಿತ್ರದ ತಾತ್ಕಾಲಿಕ ಟೈಟಲ್​.

ಇದನ್ನೂ ಓದಿ: 'ಏ.30ರಂದು ಸಲ್ಮಾನ್ ಖಾನ್​ ಕೊಲ್ಲುತ್ತೇವೆ': ಪೊಲೀಸರಿಗೂ ಬಂತು ಕೊಲೆ ಬೆದರಿಕೆ

ಮಹೇಶ್ ಬಾಬು ಹಲವು ಸಂದರ್ಶನಗಳಲ್ಲಿ ಪತ್ನಿ ನಮ್ರತಾ ಶಿರೋಡ್ಕರ್ ಬಗ್ಗೆ ಗುಣಗಾನ ಮಾಡಿದ್ದಾರೆ. ನಾನು ಸಿನಿಮಾಗಳಲ್ಲಿ ಹೆಚ್ಚಿನ ಗಮನ ಹರಿಸುವ ಸಲುವಾಗಿ ನಮ್ರತಾ ಇತರೆ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿಕೊಂಡಿದ್ದಾರೆ. 2000ರಲ್ಲಿ ಸಿನಿಮಾವೊಂದರ ಶೂಟಿಂಗ್ ಸೆಟ್​​​ನಲ್ಲಿ ಮೊದಲ ಬಾರಿ ಭೇಟಿಯಾದ ಇವರು ಕೆಲಕಾಲ ಡೇಟಿಂಗ್​ನಲ್ಲಿದ್ದರು. 2005ರಲ್ಲಿ ವೈವಾಹಿಕ ಜೀವನ ಆರಂಭಿಸಿರುವ ಸ್ಟಾರ್ ದಂಪತಿಗೆ ಗೌತಮ್ ಘಟ್ಟಮನೇನಿ ಮತ್ತು ಸಿತಾರಾ ಘಟ್ಟಮನೇನಿ ಎಂಬ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಶಕ್ತಿ ಅನುಷ್ಕಾ ಶರ್ಮಾ: ಕ್ರೀಡಾಂಗಣದಲ್ಲಿ ಪತಿ ಹುರಿದುಂಬಿಸಿದ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.