ETV Bharat / entertainment

ಲಂಡನ್​ ಪ್ರವಾಸದಲ್ಲಿ ಮಹೇಶ್​ ಬಾಬು ಫ್ಯಾಮಿಲಿ: 'ಸ್ಪೆಷಲ್'​ ಫೋಟೋ ಹಂಚಿಕೊಂಡ ನಮ್ರತಾ ಶಿರೋಡ್ಕರ್ - ಈಟಿವಿ ಭಾರತ ಕನ್ನಡ

ನಟ ಮಹೇಶ್​ ಬಾಬು ಫ್ಯಾಮಿಲಿ ಜೊತೆ ಲಂಡನ್​ ಪ್ರವಾಸಕ್ಕೆ ತೆರಳಿದ್ದಾರೆ. ಅಲ್ಲಿ ಎಂಜಾಯ್​​ ಮಾಡುತ್ತಿರುವ ಫೋಟೋಗಳನ್ನು ಅವರ ಪತ್ನಿ ನಮ್ರತಾ ಶಿರೋಡ್ಕರ್ ಹಂಚಿಕೊಂಡಿದ್ದಾರೆ.

London tour
ಲಂಡನ್​ ಪ್ರವಾಸದಲ್ಲಿ ಮಹೇಶ್​ ಬಾಬು ಫ್ಯಾಮಿಲಿ
author img

By

Published : Jul 28, 2023, 7:53 PM IST

ತೆಲುಗು ಸೂಪರ್​ಸ್ಟಾರ್​ ಮಹೇಶ್​ ಬಾಬು ನಟ ಮಾತ್ರವಲ್ಲದೇ, ಒಬ್ಬ ತಂದೆಯಾಗಿ, ಪತಿಯಾಗಿ ಎಂದಿಗೂ ಪರ್ಫೆಕ್ಟ್​. ಸಿನಿಮಾಗಳಿಗೆ ಮಾತ್ರವಲ್ಲದೇ ತಮ್ಮ ಕುಟುಂಬಕ್ಕೂ ಇಂತಿಷ್ಟು ಸಮಯ ಮೀಸಲಿಡುತ್ತಾರೆ. ಪ್ರವಾಸಕ್ಕೆ ಹೆಚ್ಚಿನ ಆದ್ಯತೆ ಕೊಡುವ ನಟ ಫ್ಯಾಮಿಲಿ ಜೊತೆಗೆ ಟ್ರಿಪ್​ ಹೋಗುತ್ತಾರೆ. ರಜಾದಿನಗಳನ್ನು ಎಂಜಾಯ್​ ಮಾಡುತ್ತಾರೆ. ಕಳೆದ ವಾರವಷ್ಟೇ ಮಹೇಶ್​, ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಮಕ್ಕಳಾದ ಗೌತಮ್, ಸಿತಾರಾ ಜೊತೆ ಲಂಡನ್​ಗೆ ತೆರಳಿದ್ದರು. ಈ ವೇಳೆ ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.

London tour
ಲಂಡನ್​ ಪ್ರವಾಸದಲ್ಲಿ ಮಹೇಶ್​ ಬಾಬು ಫ್ಯಾಮಿಲಿ

ಮಹೇಶ್ ಅವರ ಪತ್ನಿ ನಮ್ರತಾ ನಟಿ ಮತ್ತು ಮಾಜಿ ಮಾಡೆಲ್​ ಕೂಡ ಹೌದು. ಲಂಡನ್​ನಲ್ಲಿ ಎಂಜಾಯ್​ ಮಾಡುತ್ತಿರುವ ಫೋಟೋಗಳನ್ನು ಅವರು ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬದವರು ಮತ್ತು ಸ್ನೇಹಿತರೊಂದಿಗಿನ ಚಿತ್ರಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ನಮ್ರತಾ ಶಿರೋಡ್ಕರ್, ಪತಿ ಮಹೇಶ್​ ಬಾಬು, ಮಕ್ಕಳಾದ ಗೌತಮ್​ ಮತ್ತು ಸಿತಾರಾ, ನಮ್ರತಾ ಅವರ ಸಹೋದರಿ ಶಿಲ್ಪಾ ಶಿರೋಡ್ಕರ್​ ಹಾಗೂ ಸ್ನೇಹಿತರು ಇದ್ದಾರೆ.

ಈ ಸುಂದರ ಫೋಟೋಗಳಿಗೆ ನಮ್ರತಾ, "ಕೆಲವು ಸಂಜೆಗಳು ತುಂಬಾ ಸ್ಪೆಷಲ್​.. ಲಂಡನ್​" ಎಂದು ಕ್ಯಾಪ್ಶನ್​ ನೀಡಿದ್ದಾರೆ. ಮತ್ತೊಂದು ಗ್ರೂಪ್​ ಫೋಟೋಗೆ, "ಕೆಲವು ಸ್ಪೆಷಲ್​ ಸಂಜೆಗಳು.. ಲಂಡನ್​" ಎಂದು ಶೀರ್ಷಿಕೆ ಬರೆದಿದ್ದಾರೆ. ಮಹೇಶ್​ ಬಾಬು ಕುಟುಂಬ ಮತ್ತು ಸ್ನೇಹಿತರು ಎಲ್ಲರೂ ಜೊತೆಯಾಗಿ ಸೇರಿ ಎಂಜಾಯ್​ ಮಾಡಿದ್ದಾರೆ. ಹಂಚಿಕೊಂಡ ಫೋಟೋದಲ್ಲಿ ಎಲ್ಲರೂ ಮಿಲಿಯನ್​ ಡಾಲರ್​ ಸ್ಮೈಲ್​ ನೀಡುತ್ತಿರುವುದನ್ನು ಕಾಣಬಹುದು.

London tour
ಲಂಡನ್​ ಪ್ರವಾಸದಲ್ಲಿ ಮಹೇಶ್​ ಬಾಬು ಫ್ಯಾಮಿಲಿ

ಇದನ್ನೂ ಓದಿ: ಫಿಟ್ನೆಸ್​ ಕಾಪಾಡಿಕೊಳ್ಳುವುದರಲ್ಲಿ ಮಹೇಶ್​ ಬಾಬು ಪರ್ಫೆಕ್ಟ್​: ಅವರ ಬ್ರೇಕ್​ಫಾಸ್ಟ್​ನಲ್ಲಿ ಏನಿರುತ್ತೆ ಗೊತ್ತಾ?

ನಮ್ರತಾ ಮತ್ತು ಮಹೇಶ್​ ಲಂಡನ್​ನಲ್ಲಿ ಜೊತೆಯಾಗಿ ಸುತ್ತಾಡಿದ ದಿನಗಳಿವೆ. ಇವರಿಬ್ಬರು 2000 ದಲ್ಲಿ ವಂಶಿ ಚಿತ್ರದ ಸೆಟ್​ನಲ್ಲಿ ಭೇಟಿಯಾದರು. 5 ವರ್ಷಗಳ ಕಾಲ ಡೇಟಿಂಗ್​ನಲ್ಲಿದ್ದ ಜೋಡಿ 2005 ರಲ್ಲಿ ಮದುವೆಯಾದರು. ಬಳಿಕ ಮಹೇಶ್​ ಬಾಬು ಸಿನಿಮಾದಲ್ಲಿ ಮುಂದುವರೆದರು. ಆದರೆ ಮದುವೆಯ ನಂತರ ನಮ್ರತಾ ಶಿರೋಡ್ಕರ್​ ಸಿನಿಮಾದಿಂದ ಹಿಂದೆ ಸರಿದು ನಟನೆಗೆ ವಿದಾಯ ಹೇಳಿದರು.

London tour
ಲಂಡನ್​ ಪ್ರವಾಸದಲ್ಲಿ ಮಹೇಶ್​ ಬಾಬು ಫ್ಯಾಮಿಲಿ

ಗುಂಟೂರು ಖಾರಂ: ಇನ್ನೂ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಸಿನಿ ಕೆಲಸ ಗಮನಿಸುವುದಾದರೆ, 'ಗುಂಟೂರು ಖಾರಂ' ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಸಿನಿಮಾದಲ್ಲಿ ಮಹೇಶ್ ಬಾಬು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವರದಿಗಳ ಪ್ರಕಾರ, ಸ್ಕ್ರಿಪ್ಟ್​ ಸೇರಿದಂತೆ ಚಿತ್ರತಂಡದಲ್ಲಿ ಕೆಲ ಬದಲಾವಣೆ ಆಗುತ್ತಿದ್ದು, ಚಿತ್ರೀಕರಣ ವಿಳಂಬವಾಗುತ್ತಿದೆ. ಪೂಜಾ ಹೆಗ್ಡೆ ಚಿತ್ರದಿಂದ ನಿರ್ಗಮಿಸಿದ್ದಾರೆ. ಮೀನಾಕ್ಷಿ ಚೌಧರಿ ಚಿತ್ರತಂಡ ಸೇರಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮೀನಾಕ್ಷಿ ಚೌಧರಿ ಇದನ್ನು ದೃಢಪಡಿಸಿದ್ದಾರೆ. ಇದಲ್ಲದೇ ಕೆಲವು ದಿನಗಳ ಹಿಂದೆ ಈ ಬಹುನಿರೀಕ್ಷಿತ ಪ್ರಾಜೆಕ್ಟ್‌ನಿಂದ ಸಂಗೀತ ಸಂಯೋಜಕ ತಮನ್ ಕೂಡ ಹೊರಗುಳಿದಿದ್ದಾರೆ.

ಇದನ್ನೂ ಓದಿ: ಮಹೇಶ್​ ಚಿತ್ರಕ್ಕೆ ಸಂಕಷ್ಟ: 'ಗುಂಟೂರು ಖಾರಂ' ಸಿನಿಮಾದಿಂದ ಸಂಗೀತ ಸಂಯೋಜಕ ತಮನ್ ಔಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.