ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದ ನಾಗಭೂಷಣ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಇಕ್ಕಟ್, ಬಡವ ರಾಸ್ಕಲ್, ಲಕ್ಕಿ ಮ್ಯಾನ್ ಸಿನಿಮಾಗಳಿಂದ ಇವರು ಖ್ಯಾತಿ ಪಡೆದಿದ್ದಾರೆ. ಸದ್ಯ ಡಾರ್ಲಿಂಗ್ ಕೃಷ್ಣ ನಟನೆಯ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಮೂಲಕ ರಾಜ್ಯದೆಲ್ಲೆಡೆ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಇವರ ಜನ್ಮದಿನದ ಸಲುವಾಗಿ ಮುಂದಿನ ಸಿನಿಮಾ 'ಟಗರು ಪಲ್ಯ'ದಿಂದ ನಾಗಭೂಷಣ್ ಅವರಿಗೆ ವಿಶೇಷ ಉಡುಗೊರೆ ಸಿಕ್ಕಿದೆ.
- " class="align-text-top noRightClick twitterSection" data="">
ನಟ ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಚಲಚಚಿತ್ರ ನಿರ್ಮಾಣ ಸಂಸ್ಥೆಯಡಿ ಈಗಾಗಲೇ ಎರಡು ಸಿನಿಮಾಗಳು ಮೂಡಿಬಂದಿವೆ. ಮೂರನೇ ಸಿನಿಮಾ 'ಟಗರು ಪಲ್ಯ' ಬಿಡುಗಡೆಯ ಹೊಸ್ತಿಲಲ್ಲಿದೆ. ಇದೀಗ ಸಿನಿಮಾದ ಟೈಟಲ್ ಟ್ರ್ಯಾಕ್ ಅನ್ನು ನಾಯಕ ನಾಗಭೂಷಣ್ ಅವರ ಬರ್ತ್ಡೇ ಸಲುವಾಗಿ ಚಿತ್ರತಂಡ ಬಿಡುಗಡೆಗೊಳಿಸಿದೆ. ಧನಂಜಯ್ ಕ್ಯಾಚಿ ಮ್ಯಾಚಿ ಪದಗಳನ್ನು ಸೇರಿಸಿ ಸಾಹಿತ್ಯ ರಚಿಸಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಹಾಡಿಗೆ ಧ್ವನಿಯಾಗಿದ್ದಾರೆ.
ಬಣ್ಣದ ಲೋಕಕ್ಕೆ ಅಮೃತಾ ಎಂಟ್ರಿ: ಹೊಸ ಪ್ರತಿಭೆಗಳಿಗೆ ಉತ್ತಮ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ 'ಟಗರು ಪಲ್ಯ' ಶುರುವಾಗಿದ್ದು, ಈ ಬಾರಿ ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಯುವ ನಿರ್ದೇಶಕ ಉಮೇಶ್ ಕೆ.ಕೃಪಾ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ ಇದಾಗಿದೆ. ನಾಗಭೂಷಣ್ ಮತ್ತು ಅಮೃತಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಶೂಟಿಂಗ್ ಕಂಪ್ಲೀಟ್
ಕಳೆದ ಡಿಸೆಂಬರ್ನಲ್ಲಿ ಚಿತ್ರೀಕರಣ ಆರಂಭಿಸಿದ್ದು, ಇತ್ತೀಚೆಗಷ್ಟೇ ಶೂಟಿಂಗ್ ಪೂರ್ಣಗೊಳಿಸಿತ್ತು. ಬಿಡುಗಡೆಗೆ ತಯಾರಿ ಆರಂಭಗೊಂಡಿದ್ದು, ಸಿನಿಮಾ ಪ್ರಮೋಶನ್ ಕೂಡ ಶುರುವಾಗಿದೆ. ಅದರ ಭಾಗವಾಗಿ, ಚಿತ್ರದ ಮೊದಲ ಹಾಡು ಇಂದು ಅನಾವರಣಗೊಂಡಿದೆ. ಇನ್ನೂ 'ಟಗರು ಪಲ್ಯ' ಚಿತ್ರದ ಕಥೆಯು ಮಂಡ್ಯ ಹಳ್ಳಿಯಲ್ಲಿ ನಡೆಯುವ ಆಚರಣೆ ಸುತ್ತ ಸುತ್ತುತ್ತದೆ.
ಕನ್ನಡ ರಾಜ್ಯೋತ್ಸವಕ್ಕೆ ಚಿತ್ರ ಬಿಡುಗಡೆ: ಹಿರಿಯ ಕಲಾವಿದರಾದ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವಿರುವ 'ಟಗರು ಪಲ್ಯ' ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಎಸ್.ಕೆ.ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ಟೈಟಲ್ ಟ್ರ್ಯಾಕ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ: ಬಿಡದಿಯ 'ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್' ಥೀಮ್ ಪಾರ್ಕ್ ಆ.20ಕ್ಕೆ ಲೋಕಾರ್ಪಣೆ; ಶಿವ ರಾಜ್‌ಕುಮಾರ್ ಸಾಥ್