ETV Bharat / entertainment

ವಿಚ್ಛೇದನಕ್ಕಿಂತಲೂ ಹೆಚ್ಚು ನೋವಾಗಿದ್ದು ನನ್ನ ಹೆಸರು ಬೇರೆಯವರೊಂದಿಗೆ ತಳುಕು ಹಾಕಿದಾಗ; ನಾಗ ಚೈತನ್ಯ - ಯೂ ಟ್ಯೂಬ್​ ಚಾನೆಲ್​ವೊಂದರ ಸಂದರ್ಶನ

ಸಮಂತಾರಿಂದ ವಿಚ್ಛೇದನ ಪಡೆದ ಬಳಿಕ ನಟ ನಾಗಚೈತನ್ಯ ನಟಿ ಶೋಭಿತಾ ಧುಲಿಪಲ್ ಜೊತೆಗೆ ಡೇಟಿಂಗ್​ ನಡೆಸುತ್ತಿದ್ದರು ಎಂಬ ಊಹಾಪೋಹಾಗಳು ಕೇಳಿ ಬಂದಿದ್ದವು.

Naga Chaitanya reveals what 'hurt' him most about divorce from Samantha and 'dating' Sobhita Dhulipala

author img

By

Published : May 10, 2023, 3:36 PM IST

ಹೈದರಾಬಾದ್​: ನಟ ನಾಗ ಚೈತನ್ಯ ಸದ್ಯ ತಮ್ಮ ಬಿಡುಗಡೆಯಾಗಲಿರುವ ಚಿತ್ರ 'ಕಸ್ಟಡಿ'ಯ ಪ್ರಚಾರದ ಬ್ಯುಸಿಯಲ್ಲಿದ್ದಾರೆ. ಇದೇ ವೇಳೆ ಯೂ ಟ್ಯೂಬ್​ ಚಾನೆಲ್​ವೊಂದರ ಸಂದರ್ಶನದಲ್ಲಿ ತಮ್ಮ ಸಮಂತಾ ರುತ್​ ಪ್ರಭು ಜೊತೆಗಿನ ಮುಗಿದು ಹೋದ ವೈವಾಹಿಕ ಜೀವನದ ಬಗ್ಗೆ ಕೂಡ ಹೇಳಿದ್ದಾರೆ. ಇದು ದುರದೃಷ್ಟಕರ ಎಂದಿರುವ ಅವರು ಜೀವನದ ಈ ಅವಧಿಗೆ ಅತ್ಯಂತ ಗೌರವ ಇದೆ. ಸಮಂತಾರಿಂದ ವಿಚ್ಛೇದನ ಪಡೆದ ಬಳಿಕ ನಟ ನಾಗಚೈತನ್ಯ ನಟಿ ಶೋಭಿತಾ ಧುಲಿಪಲ್​ ಜೊತೆಗೆ ಡೇಟಿಂಗ್​ ನಡೆಸುತ್ತಿದ್ದರು ಎಂಬ ಊಹಾಪೋಹಾಗಳು ಕೇಳಿ ಬಂದಿದ್ದವು.

ನಟಿ ಸಮಂತಾ ಜೊತೆಗಿನ ಸಂಬಂಧಗಳು ಮುರಿದ ಕೊಂಡ ಬಗ್ಗೆ ಇತ್ತೀಚಿಗೆ ಮಾಧ್ಯಮಗಳಲ್ಲಿ ಮಾತನಾಡುತ್ತಿರುವ ನಾಗ ಚೈತನ್ಯ, ನನ್ನ ವೈಯಕ್ತಿಕ ಜೀವನ ಜೊತೆಗೆ ನಮ್ಮ ಮದುವೆಯಿಂದ ಏನಾಯಿತು ಅದು ದುರಾದೃಷ್ಟಕರ. ಆದರೆ, ನನ್ನ ಆ ಜೀವನದ ಘಟ್ಟದ ಬಗ್ಗೆ ನನಗೆ ಗೌರವವಿದೆ. ಆದರೆ, ಈ ವಿಚ್ಚೇದನ ಕುರಿತು ಮಾಧ್ಯಮಗಳು ಮಾಡಿದ ವರದಿ. ಊಹಾಪೋಹಾಗಳ ಹರಡುವಿಕೆಯಿಂದ ನನ್ನ ಕುಟುಂಬ ಗೌರವ ಸಾರ್ವಜನಿಕರ ದೃಷ್ಟಿಯಲ್ಲಿ ಕುಸಿದು ಹೋಯಿತು. ಇದು ನನಗೆ ಹೆಚ್ಚು ನೋವುಂಟು ಮಾಡಿತು. ನ್ಯಾಯಾಲಯ ಪರಸ್ಪರ ಒಪ್ಪಿಗೆ ಆಧಾರದ ಮೇಲೆ ಇದೀಗ ವರ್ಷದ ಹಿಂದ ವಿಚ್ಛೇದನ ನೀಡಿದೆ ಎಂದಿದ್ದಾರೆ.

ಇದಾದ ಬಳಿಕ ಮತ್ತಷ್ಟು ನೋವಾಗಿದ್ದ ವಿಷಯ ಎಂದರೆ, ನನ್ನ ಹೆಸರನ್ನು ಬೇರೆಯವರ ಜೊತೆಗೆ ಸಂಬಂಧ ತಳುಕು ಹಾಕಿದ್ದು, ಹೆಚ್ಚು ಬೇಸರ ಮೂಡಿಸಿದೆ. ಕೇವಲ ಹೆಡ್​ಲೈನ್​ಗಾಗಿ ಅವರು ಮೂರನೇ ವ್ಯಕ್ತಿ ಜೊತೆಗೆ ನನ್ನ ಹೆಸರನ್ನು ತಳುಕು ಹಾಕಿದರು. ಇದರಿಂದ ಹೆಚ್ಚು ನೋವುಂಟಾಯಿತು. ಯಾವುದೇ ಉದ್ದೇಶವಿಲ್ಲದೇ ಅಥವಾ ತಪ್ಪಿನಿಂದಾಗಿ ಮೂರನೇ ವ್ಯಕ್ತಿಯನ್ನು ಈ ಸಂಪೂರ್ಣ ದೃಶ್ಯದಲ್ಲಿ ಕರೆ ತರಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಹಿಂದೆ ಏನಾಯಿತು ಅದು ಆಗಿ ಹೋಗಿದೆ. ಅದನ್ನು ಸ್ಪಷ್ಟೀಕರಣದೊಂದಿಗೆ ಮುಗಿಸಿ, ಇದೀಗ ಮುನ್ನಡೆಯ ಬೇಕಿದೆ ಎಂದರು

ಸಮಂತಾ ನಾಗಚೈತನ್ಯ 2017ರಲ್ಲಿ ಮೊದಲ ಬಾರಿಗೆ ಯೇ ಮಾಯೇ ಚೆಸಾವೇ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಇಬ್ಬರಿಗೂ ಮೊದಲ ಚಿತ್ರವಾಗಿದ್ದು, ಇದೇ ಚಿತ್ರದಿಂದ ಅವರಿಬ್ಬರ ನಡುವೆ ಪ್ರೀತಿ ಮೊಳಕೆಯೊಡೆಯಿತು. 2019ರಲ್ಲಿ ಈ ಜೋಡಿ ಗೋವಾದಲ್ಲಿ ಅದ್ದೂರಿಯಾಗಿ ಭಾರತೀಯ ಮತ್ತು ಕ್ರಿಶ್ಚಿಯನ್​ ಸಂಪ್ರದಾಯದಂತೆ ಮದುವೆಯಾಗಿದ್ದರು. ಇದಾದ ನಾಲ್ಕು ವರ್ಷಗಳ ಬಳಿಕ ಅವರು ಪರಸ್ಪರ ಬೇರೆಯಾಗುತ್ತಿರುವ ಕುರಿತು ಘೋಷಿಸಿದರು. ಕಳೆದ ವರ್ಷ ಇಬ್ಬರು ಕಾನೂನಾತ್ಮಕವಾಗಿ ವಿಚ್ಛೇದನ ಪಡೆದರು.

ಇನ್ನು ಇವರ ವಿಚ್ಛೇದನಕ್ಕೆ ಕಾರಣ ಏನು ಎಂಬುದು ಇಬ್ಬರು ಬಹಿರಂಗಪಡಿಸಿಲ್ಲ. ಇವರ ಆಪ್ತವಲಯದಲ್ಲಿ ಚರ್ಚೆಯ ಅನುಸಾರ, ನಟಿ ತುಂಬಾ ಬೋಲ್ಡ್​​ ಪಾತ್ರಗಳಲ್ಲಿ ನಟಿಸಿದ್ದು ಈ ವಿಚ್ಛೇದನ ಪ್ರಮುಖ ಕಾರಣ ಎನ್ನಲಾಗಿತ್ತು. ಇನ್ನು ಈ ವಿಚ್ಛೇದನ ಕುರಿತು ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಸಮಂತಾ, ಜೀವನವೂ ಕಷ್ಟವಾಗಿತ್ತು. ಆದರೆ ಇದೀಗ ಹೆಚ್ಚು ಬಲಶಾಲಿಯಾಗಿದ್ದೇನೆ ಎಂದಿದ್ದರು.

ಇದನ್ನೂ ಓದಿ: 'ಅಹಂ, ಭಯ ನಮ್ಮನ್ನು ಬೇರ್ಪಡಿಸುತ್ತವೆ': ಮಾಜಿ ಪತಿಯ ಮೆಚ್ಚುಗೆಗೆ ಸಮಂತಾ ಪರೋಕ್ಷ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.