ETV Bharat / entertainment

'ಜೀವನದಲ್ಲಿ ಯಾವುದರ ಬಗ್ಗೆಯೂ ವಿಷಾದವಿಲ್ಲ, ಎಲ್ಲವೂ ಪಾಠವಷ್ಟೇ': ನಟ ನಾಗ ಚೈತನ್ಯ ಹೀಗಂದಿದ್ಯಾಕೆ? - ತೆಲುಗು ಸೂಪರ್​ಸ್ಟಾರ್ ನಾಗ ಚೈತನ್ಯ

ನಟ ನಾಗ ಚೈತನ್ಯ ಅವರು ಸಮಂತಾ ರುತ್ ಪ್ರಭು ಅವರಿಗೆ ವಿಚ್ಛೇದನ ನೀಡಿದ ನಂತರ ತಮ್ಮ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

Naga Chaitanya
ನಟ ನಾಗ ಚೈತನ್ಯ
author img

By

Published : May 1, 2023, 8:05 PM IST

ಸೌತ್​ ಸ್ಟಾರ್​ ಸಮಂತಾ ರುತ್ ಪ್ರಭು ಅವರೊಂದಿಗೆ ವಿಚ್ಛೇದನ ಪಡೆದ ಬಳಿಕ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ತೆಲುಗು ಸೂಪರ್​ಸ್ಟಾರ್ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿ ಹಲವು ದಿನಗಳಿಂದ ಕೇಳಿಬರುತ್ತಿದೆ. ಅವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಖತ್​ ಸೌಂಡ್​ ಮಾಡುತ್ತಿವೆ. ತಮ್ಮ ಕೆಲಸದ ಜವಾಬ್ದಾರಿಗಳ ನಡುವೆ, ನಟ ನಾಗ ಚೈತನ್ಯ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ.

  • " class="align-text-top noRightClick twitterSection" data="">

ಇತ್ತೀಚೆಗೆ ಸೌತ್ ಸ್ಟಾರ್ ಸಮಂತಾ ರುತ್ ಪ್ರಭು ಅವರಿಗೆ ವಿಚ್ಛೇದನ ನೀಡಿದ ನಂತರ ನಟ ತಮ್ಮ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಯೂಟ್ಯೂಬ್ ಚಾನೆಲ್​ವೊಂದರ ಸಂದರ್ಶನದಲ್ಲಿ ನಾಗ ಚೈತನ್ಯ ಅವರಿಗೆ 'ನಿಮಗೆ ಜೀವನದಲ್ಲಿ ಯಾವುದರ ಬಗ್ಗೆ ವಿಷಾದವಿದೆ' ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ನಟ, "ನನ್ನ ಜೀವನದಲ್ಲಿ ಯಾವುದರ ಬಗ್ಗೆಯೂ ವಿಷಾದವಿಲ್ಲ ಬ್ರೋ. ನನ್ನ ಬದುಕಲ್ಲಿ ಯಾವುದೇ ನಿರ್ದಿಷ್ಟ ಪಶ್ಚಾತ್ತಾಪವಿಲ್ಲ. ಸರಳವಾಗಿ ಹೇಳುವುದಾದರೆ, ಎಲ್ಲವೂ ಪಾಠವಷ್ಟೇ" ಎಂದು ಹೇಳಿದ್ದಾರೆ.

ನಾಗ- ಶೋಭಿತಾ ಡೇಟಿಂಗ್​..?: ನಾಗ ಚೈತನ್ಯ ಮತ್ತು ಶೋಭಿತಾ ಅವರ ಇತ್ತೀಚಿನ ಫೋಟೋವೊಂದು ಆನ್​ಲೈನ್​ನಲ್ಲಿ ವೈರಲ್​ ಆಗಿದೆ. ಲಂಡನ್ ರೆಸ್ಟೋರೆಂಟ್‌ನಿಂದ ಬಂದ ಫೋಟೋ ಅದು. ಈ ಇಬ್ಬರೂ ತಮ್ಮ ಸಂಬಂಧವನ್ನು ಇನ್ನೂ ಅಧಿಕೃತಗೊಳಿಸದಿದ್ದರೂ, ಶೋಭಿತಾ ಮತ್ತು ನಾಗ ಚೈತನ್ಯ ಡೇಟಿಂಗ್​ನಲ್ಲಿದ್ದಾರೆ ಎಂಬ ಊಹಾಪೋಹ ಜೋರಾಗಿಯೇ ಹರಡಿದೆ. ಅವರು ಒಟ್ಟಿಗಿರುವ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್ ಮಾಡಿದೆ.

ಇದನ್ನೂ ಓದಿ: ಮೂರೇ ದಿನದಲ್ಲಿ 150 ಕೋಟಿ ಬಾಚಿದ 'ಪೊನ್ನಿಯನ್​ ಸೆಲ್ವನ್​ 2': ವಿಕ್ರಮ್​, ಐಶ್ವರ್ಯ ಚಿತ್ರ ಸೂಪರ್​ ಹಿಟ್​

ಇನ್ನೂ ಶೋಭಿತಾ ಧೂಳಿಪಾಲ ಅವರು ಸದ್ಯ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 2 ಚಿತ್ರದ ಇತ್ತೀಚಿನ ಬಿಡುಗಡೆಯೊಂದಿಗಿನ ಯಶಸ್ಸನ್ನು ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ, ನಾಗ ಚೈತನ್ಯ ಇತ್ತೀಚೆಗೆ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇವರಿಬ್ಬರು ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದು, ಗಾಸಿಪ್​ಗಳ ಬಗ್ಗೆ ಯಾವುದೇ ರೀತಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ.

'ಆ ಹುಡುಗಿಯಾದರೂ ಸಂತೋಷವಾಗಿರಲಿ': ಸಮಂತಾ ಅಭಿನಯದ ಶಾಕುಂತಲಂ ಚಿತ್ರ ಬಿಡುಗಡೆಗೂ ಮುನ್ನ ಪ್ರಚಾರದ ಸಂದರ್ಶನವೊಂದರಲ್ಲಿ ಅವರು ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್​ ವದಂತಿಗಳಿಗೆ ಪ್ರತಿಕ್ರಿಯಿಸಿದ್ದರು. ಯಾರು ಯಾರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಯಾರ ಹೆಸರನ್ನೂ ಉಲ್ಲೇಖಿಸದ ಸಮಂತಾ, ಪ್ರೀತಿಯ ಮೌಲ್ಯವನ್ನು ತಿಳಿದಿಲ್ಲದವರು "ಎಷ್ಟು ಜನರೊಂದಿಗೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ" ಎಂದು ಹೇಳಿದ್ದರು. "ಕನಿಷ್ಠ ಆ ಹುಡುಗಿಯಾದರೂ ಸಂತೋಷವಾಗಿರಬೇಕು, ಅವರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡು ಆ ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು" ಎಂದು ನುಡಿದಿದ್ದರು.

ಇದನ್ನೂ ಓದಿ: 'ದಿ ಕೇರಳ ಸ್ಟೋರಿ'ಯಲ್ಲಿನ ಆರೋಪ ಸಾಬೀತು ಮಾಡಿದ್ರೆ 1 ಕೋಟಿ ರೂ. ಬಹುಮಾನ: ಎಂವೈಎಲ್ ಮುಖಂಡ ಫಿರೋಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.