ದಿನ ಕಳೆದಂತೆ ಮನರಂಜನಾ ಉದ್ಯಮ ನಿರೀಕ್ಷೆಗೂ ಮೀರಿ ಅಭೂತಪೂರ್ವ ಸಾಧನೆಗಳನ್ನು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ಗಡಿ ದಾಟುವುದು ಸಾಮಾನ್ಯವಾಗಿಬಿಟ್ಟಿದೆ. 100, 200, 300 ಅಲ್ಲ 1,000 ಕೋಟಿ ರೂ. ಗಡಿ ದಾಟಿದ ಸಿನಿಮಾಗಳು ಕೂಡ ನಮ್ಮ ಮುಂದಿವೆ. ಒಂದೊಳ್ಳೆ ಕಂಟೆಂಟ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಕೆಲವೊಮ್ಮೆ ಕಂಟೆಂಟ್ ವರ್ಕ್ ಆಗದಿದ್ದರೂ, ಸಿನಿಮಾಗಳು ಕಮರ್ಷಿಯಲ್ ಆಗಿ ವರ್ಕ್ ಆಗುತ್ತವೆ.
ಉತ್ತರದಿಂದ ಹಿಡಿದು ದಕ್ಷಿಣ ಚಿತ್ರರಂದವರೆಗೂ ಹಲವು ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಿ 100 ಕೋಟಿ ಗಡಿ ದಾಟುವಲ್ಲಿ ಯಶಸ್ವಿ ಆಗಿವೆ. ರಾಕಿಂಗ್ ಸ್ಟಾರ್ ಯಶ್, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸಲ್ಮಾನ್ ಖಾನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಮೀರ್ ಕಾನ್, ಅಜಯ್ ದೇವ್ಗನ್, ಹೃತಿಕ್ ರೋಷನ್, ಪ್ರಭಾಸ್, ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್, ರಾಮ್ ಚರಣ್ ಸೇರಿದಂತೆ ಹಲವರ ಸಿನಿಮಾಗಳು 100 ಕೋಟಿ ಕ್ಲಬ್ ಸಾಧನೆಗೈದಿದೆ.
ಭಾರತದಲ್ಲಿ ನೂರು ಕೋಟಿ ಟ್ರೆಂಡ್ ಸೆಟ್ ಮಾಡಿದ ಮೊದಲ ಹೀರೋ: ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿ 100 ಕೋಟಿ ಟ್ರೆಂಡ್ ಸೆಟ್ ಮಾಡಿದ ಮೊದಲ ಹೀರೋಗಳು ಎಂಬ ಖ್ಯಾತಿಗೆ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಮತ್ತು ನಟ ಮಿಥುನ್ ಚಕ್ರವರ್ತಿ ಪಾತ್ರರಾಗಿದ್ದಾರೆ.. ಅವರ ಬ್ಲಾಕ್ಬಸ್ಟರ್ ಘಜನಿ ಸಿನಿಮಾದಿಂದ ಭಾರತದಲ್ಲಿ ಈ ಟ್ರೆಂಡ್ ಶರುವಾಯಿತು. 2008 ರಲ್ಲಿ ತೆರೆ ಕಂಡ ಈ ಸಿನಿಮಾ ಕೇವಲ ನೂರು ಕೋಟಿ ಗಡಿ ದಾಟಿದ್ದಲ್ಲದೇ ನಟ ಅಮೀರ್ ಖಾನ್ ಅವರ ಸ್ಟಾರ್ ಡಮ್ ಹೆಚ್ಚಿಸಿತು. ಆ ನಂತರ ಬಂದ ಅಮೀರ್ ಅವರ ತ್ರೀ ಈಡಿಯಟ್ಸ್, ಪಿಕೆ, ದಂಗಲ್ ಸೇರಿ ಕೆಲ ಸಿನಿಮಾಗಳು ಕೂಡ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವಲ್ಲಿ ಯಶಸ್ವಿ ಆದವು.
ಸಲ್ಮಾನ್ ಖಾನ್ ಸಾಧನೆ: ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಈ ಸಾಲಿನಲ್ಲಿ ಅಗ್ರ ಕ್ರಮಾಂಕದಲ್ಲಿ ನಿಲ್ಲುತ್ತಾರೆ. ಕಳೆದ 13 ವರ್ಷಗಳಲ್ಲಿ ರಾಧೆ, ಅಂತಿಮ್ ಚಿತ್ರಗಳನ್ನು ಹೊರತುಪಡಿಸಿ ನಟನ ಎಲ್ಲಾ ಸಿನಿಮಾಗಳು 100 ಕೋಟಿ ರೂ. ಗಡಿ ದಾಟುವಲ್ಲಿ ಯಶಸ್ವಿಯಾಗಿವೆ. ಸಲ್ಮಾನ್ ಖಾನ್ ಅವರ 16 ಸಿನಿಮಾಗಳು ಈ ನೂರು ಕೋಟಿ ಕ್ಲಬ್ನಲ್ಲಿರುವುದು ಗಮನಾರ್ಹ.
ಇತರರು.. ಇನ್ನು ಅಕ್ಷಮ್ ಕುಮಾರ್ ಅವರ ಓ ಮೈ ಗಾಡ್ ಉತ್ತಮ ಪ್ರದರ್ಶನ ಮುಂದುವರಿಸಿದೆ. ನಟನ ಸುಮಾರು 15 ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿ ಗಡಿ ದಾಟಿವೆ. ಸಲ್ಮಾನ್, ಅಕ್ಷಯ್ ನಂತರ ಅಜಯ್ ದೇವ್ಗನ್ ಈ ಸಾಲಿನಲ್ಲಿ ನಿಲ್ಲುತ್ತಾರೆ. ಅಜಯ್ ದೇವ್ಗನ್ ಬಳಿ ನೂರು ಕೋಟಿ ದಾಟಿರುವ 12 ಸಿನಿಮಾಗಳಿವೆ. ಬಾಲಿವುಡ್ ಕಿಂಗ್ ಶಾರುಖ್ ಅವರ ಬಳಿ 8 ಚಿತ್ರಗಳಿವೆ, ಇನ್ನು ಡ್ಯಾನ್ಸಿಂಗ್ ಸ್ಟಾರ್ ಹೃತಿಕ್ ರೋಷನ್ ಬಳಿ 6 ಸಿನಿಮಾಗಳಿವೆ. ನೂರು ಕೋಟಿ ರೂ. ದಾಟಿರುವ ರಣ್ವೀರ್ ಸಿಂಗ್ ಅವರ ಸಿನಿಮಾಗಳ ಸಂಖ್ಯೆ 5.
ಜಾಗತಿಕ ಬಾಕ್ಸ್ ಆಫೀಸ್ ಸಾಧನೆ: ಅಮೀರ್ ಅವರ ಘಜಿನಿ ಸಿನಿಮಾ ಭಾರತದಲ್ಲಿ ಈ ಟ್ರೆಂಡ್ ಪ್ರಾರಂಭಿಸಿದರೂ, ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಈ ದಾಖಲೆ ನಿರ್ಮಿಸಿರುವ ಮತ್ತೊಂದು ಸಿನಿಮಾವಿದೆ. ಅದು ಭಾರತೀಯ ಚಿತ್ರರಂಗದ ಖ್ಯಾತಿಯನ್ನು ವಿಶ್ವದಾದ್ಯಂತ ಪಸರಿಸಿತು. ಹಿರಿಯ ನಟ ಮಿಥುನ್ ಚಕ್ರವರ್ತಿ ಮುಖ್ಯಭೂಮಿಕೆಯ ಡಿಸ್ಕೋ ಡ್ಯಾನ್ಸರ್ ಸಿನಿಮಾ ಭಾರತದಲ್ಲಿ ಮಾತ್ರದಲ್ಲದೇ ವಿಶ್ವದಾದ್ಯಂತ 100 ಕೋಟಿ ಗಡಿ ದಾಟಿದ ಮೊದಲ ಚಿತ್ರವಾಗಿ ಹೊರಹೊಮ್ಮಿತು. 1982ರಲ್ಲಿ ಬಿಡುಗಡೆ ಆದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಅಂದಿನ ಸಮಯದಲ್ಲಿ ಸೂಪರ್ ಹಿಟ್ ಆಗಿದ್ದ ಶೋಲೆ ಸಿನಿಮಾದ ದಾಖಲೆಗಳನ್ನೂ ಮುರಿದಿತ್ತು.
ಇದನ್ನೂ ಓದಿ: ಶ್ರೀಲೀಲಾ-ರಾಮ್ ಪೋತಿನೇನಿ ಅಭಿನಯದ 'ಸ್ಕಂದ' ಟ್ರೇಲರ್ ಅನಾವರಣ: ಸೆ.15ಕ್ಕೆ ಸಿನಿಮಾ ತೆರೆಗೆ
ಸೌತ್ ಸಿನಿಮಾ ಸಕ್ಸಸ್: ಬಾಲಿವುಡ್ ಮಾತ್ರವಲ್ಲದೇ ಸೌತ್ ಸಿನಿಮಾ ರಂಗದಲ್ಲಿಯೂ ನೂರು ಕೋಟಿ ದಾಟಿರುವ ಹಲವು ಸಿನಿಮಾಗಳಿವೆ. ರಾಷ್ಟ್ರಪ್ರಶಸ್ತಿ ಗೌರವಕ್ಕೆ ಪಾತ್ರವಾಗಿರುವ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾ ಸೇರಿ ಕೆಲ ಚಿತ್ರಗಳು ಈ ಸಾಧನೆಗೈದಿವೆ. ರೆಬೆಲ್ ಸ್ಟಾರ್ ಪ್ರಭಾಸ್, ಜೂನಿಯರ್ ಎನ್ಟಿಆರ್, ರಾಮ್ಚರಣ್, ಯಶ್, ಸುದೀಪ್, ರಿಷಬ್ ಶೆಟ್ಟಿ ಸೇರಿದಂತೆ ಕೆಲವರ ಸಿನಿಮಾಗಳಿವೆ.
ಇದನ್ನೂ ಓದಿ: ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬಾಚರಿಸಿದ ಯಶ್ ರಾಧಿಕಾ ದಂಪತಿ: Photos!