ETV Bharat / entertainment

ನವೀನ್​ ರೆಡ್ಡಿ ನಿರ್ದೇಶನದ 'ಮೂರನೇ ಕೃಷ್ಣಪ್ಪ' ಚಿತ್ರದ ಮೆಲೋಡಿ ಸಾಂಗ್​ ಔಟ್​ - etv bharat kannada

Moorane Krishnappa movie: ನವೀನ್​ ರೆಡ್ಡಿ ನಿರ್ದೇಶನದ 'ಮೂರನೇ ಕೃಷ್ಣಪ್ಪ' ಚಿತ್ರದ 'ಬಗೆಹರಿಯದ ಒಗಟುಗಳು' ಎಂಬ ಮೆಲೋಡಿ ಸಾಂಗ್​ ಬಿಡುಗಡೆಯಾಗಿದೆ.

moorane krishnappa directed by naveen reddy
ನವೀನ್​ ರೆಡ್ಡಿ ನಿರ್ದೇಶನದ 'ಮೂರನೇ ಕೃಷ್ಣಪ್ಪ' ಚಿತ್ರದ ಮೆಲೋಡಿ ಸಾಂಗ್​ ಔಟ್​
author img

By ETV Bharat Karnataka Team

Published : Dec 7, 2023, 8:02 PM IST

'ಅಕಿರ' ಮತ್ತು 'ರಿಲ್ಯಾಕ್ಸ್​ ಸತ್ಯ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಭರವಸೆ ನಿರ್ದೇಶಕರಾಗಿ ಗುರುತಿಸಿಕೊಂಡವರು ನವೀನ್​ ರೆಡ್ಡಿ. ಪ್ರೇಮಕಥೆಗಳನ್ನು ತೆರೆಮೇಲೆ ಮೂಡಿಸಿ ನೋಡುಗರ ಹೃದಯ ಗೆದ್ದಿರುವ ಇವರು ಹೊಸ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇವರ ಮುಂದಿನ ಸಿನಿಮಾಗೆ 'ಮೂರನೇ ಕೃಷ್ಣಪ್ಪ' ಎಂಬ ವಿಭಿನ್ನ ಶೀರ್ಷಿಕೆ ಇಡಲಾಗಿದೆ. ಅನೇಕಲ್​ ಭಾಗದ ಕಥೆಯನ್ನು ಪ್ರಮುಖವಾಗಿರಿಸಿ ಈ ಚಿತ್ರ ಮಾಡಲಾಗಿದೆ.

  • " class="align-text-top noRightClick twitterSection" data="">

'ಮೂರನೇ ಕೃಷ್ಣಪ್ಪ' ಸಿನಿಮಾದ ಶೂಟಿಂಗ್​ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್​ ಕೆಲಸದಲ್ಲಿ ಚಿತ್ರತಂಡವಿದೆ. ಇದರ ಜೊತೆಗೆ ಕೃಷ್ಣಪ್ಪನ ಬಳಗ ಪ್ರಮೋಷನ್​ ಪಡಸಾಲೆಗಿಳಿದಿದೆ. ಅದರ ಮೊದಲ ಭಾಗವಾಗಿ ಇತ್ತೀಚೆಗೆ ಟೈಟಲ್​ ರಿಲೀಸ್​ ಮಾಡಲಾಗಿತ್ತು. ಇದೀಗ ಚಿತ್ರದ ಮೆಲೋಡಿ ಹಾಡೊಂದು ಅನಾವರಣಗೊಂಡಿದೆ. ಆನಂದ್ ಯೂಟ್ಯೂಬ್​ ಚಾನೆಲ್​ನಲ್ಲಿ 'ಬಗೆಹರಿಯದ ಒಗಟುಗಳು' ಎಂಬ ಸಾಹಿತ್ಯದಿಂದ ಪ್ರಾರಂಭವಾಗುವ ಸುಮಧುರ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಸುಪ್ರಿತ್​ ಶರ್ಮಾ ಎಸ್. ಸಾಹಿತ್ಯ ನೀಡುವುದರ ಜೊತೆಗೆ ಸಂಗೀತ ಒದಗಿಸಿದ್ದಾರೆ. ನಿಹಾಲ್​ ಟೌರೊ ಧ್ವನಿಯಾಗಿದ್ದಾರೆ.

ಇದನ್ನೂ ಓದಿ: 'ಯೂಸ್‌ಲೆಸ್ ಫೆಲೋ' ಸಿನಿಮಾಗೆ ನಿರ್ದೇಶಕರಾದ 'ಮೋಜೋ' ನಟ ಮನು

ಆನೇಕಲ್​ ಭಾಗದ ಭಾಷೆಯ ಸೊಬಗನ್ನು ಹೊತ್ತು ತಂದಿರುವ ಈ ಚಿತ್ರದಲ್ಲಿ ಸಂಪತ್​​ ಮೈತ್ರೀಯಾ, ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಶ್ರೀಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಅನಾವರಣಗೊಂಡಿರುವ 'ಬಗೆ ಹರಿಯದ ಒಗಟುಗಳು' ಎಂಬ ಮೆಲೋಡಿ ಹಾಡಿನಲ್ಲಿ ಸಂಪತ್​ ಹಾಗೂ ಶ್ರೀಪ್ರಿಯಾ ಗಮನ ಸೆಳೆದಿದ್ದಾರೆ. ಉಳಿದಂತೆ ತುಕಾಲಿ ಸಂತೋಷ್ ಮತ್ತು ಉಗ್ರಂ ಮಂಜು ತಾರಾ ಬಳಗದಲ್ಲಿದ್ದಾರೆ.

ರೆಡ್​ ಡ್ರಾಗ್ಯನ್​ ಫಿಲ್ಮ್ಸ್​ ಪ್ರೊಡಕ್ಷನ್​ ಹೌಸ್​ ನಿರ್ಮಾಣದ ಎರಡನೇ ಸಿನಿಮಾ 'ಮೂರನೇ ಕೃಷ್ಣಪ್ಪ'. ಈ ಹಿಂದೆ ನವೀನ್​ ರೆಡ್ಡಿ ನಿರ್ದೇಶನದ ರಿಲ್ಯಾಕ್ಸ್​ ಸತ್ಯ ಚಿತ್ರವನ್ನು ಇದೇ ಪ್ರೊಡಕ್ಷನ್ ಅಡಿ ಮೋಹನ್​ ರೆಡ್ಡಿ ಜಿ, ರವಿಶಂಕರ್​ ನಿರ್ಮಿಸಿದ್ದರು. ಇದೀಗ ಇವರಿಬ್ಬರೇ ಈ ಸಿನಿಮಾಗೂ ಬಂಡವಾಳ ಹೂಡಿದ್ದಾರೆ. ಮೂರನೇ ಕೃಷ್ಣಪ್ಪ ಚಿತ್ರಕ್ಕೆ ಆನಂದ್​ ರಾಜ ವಿಕ್ರಮ್​ ಸಂಗೀತ, ಶ್ರೀಕಾಂತ್​ ಸಂಕಲನ, ಯೋಗಿ ಛಾಯಾಗ್ರಹಣವಿದೆ. ಹೊಸತು ಮತ್ತು ವಿಭಿನ್ನ ಕಥೆಯ ಈ ಸಿನಿಮಾ ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ತೆರೆ ಕಾಣಲಿದೆ.

ಇದನ್ನೂ ಓದಿ: ಒಟಿಟಿಯಲ್ಲಿ 'ಘೋಸ್ಟ್​' ಹವಾ; ಶಿವಣ್ಣನ ಮುಂದಿನ ಸಿನಿಮಾದಲ್ಲಿ ನಾನಿ ನಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.