ETV Bharat / entertainment

ಬಿಕಿನಿ ತೊಟ್ಟು ಬೀಚ್​ನಲ್ಲಿ ಬೇಬಿ ಬಂಪ್​ ತೋರಿಸಿದ ನಟಿ ಇಲಿಯಾನಾ ಡಿಕ್ರೂಜ್ - ಬಿಟೌನ್​ ಬೆಡಗಿ ಇಲಿಯಾನಾ ಡಿಕ್ರೂಜ್​

ಬಾಲಿವುಡ್​ ನಟಿ ಇಲಿಯಾನಾ ಡಿಕ್ರೂಜ್ ಬಿಕಿನಿ ಧರಿಸಿ ಬೀಚ್​ನಲ್ಲಿ ಕುಳಿತು ಬೇಬಿ ಬಂಪ್​ ತೋರಿಸಿದ್ದಾರೆ.

Ileana D'Cruz
ನಟಿ ಇಲಿಯಾನಾ ಡಿಕ್ರೂಜ್
author img

By

Published : Jun 6, 2023, 6:04 PM IST

Updated : Jun 6, 2023, 6:17 PM IST

ಬಿಟೌನ್​ ಬೆಡಗಿ ಇಲಿಯಾನಾ ಡಿಕ್ರೂಜ್​ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ವೆಕೇಷನ್​ ಮೂಡ್​ನಲ್ಲಿರುವ ನಟಿ ಹಳದಿ ಬಣ್ಣದ ಬಿಕಿನಿ ಧರಿಸಿ ಸೂರ್ಯ ಕಿರಣಗಳ ಸ್ಪರ್ಶವನ್ನು ಎಂಜಾಯ್​ ಮಾಡುತ್ತಿದ್ದಾರೆ. ತಾಯ್ತನದ ಪ್ರತಿ ಅಪ್​ಡೇಟ್​ ನೀಡುತ್ತಿರುವ ಇಲಿಯಾನಾ ಬೀಚ್​ನಲ್ಲಿ ಕುಳಿತು ಬೇಬಿ ಬಂಪ್​ ತೋರಿಸಿದ್ದಾರೆ. ಈ ಫೋಟೋಗಳನ್ನು ನಟಿ ಹಂಚಿಕೊಂಡಿದ್ದು, ಚೊಚ್ಚಲ ಮಗುವಿನ ಬರುವಿಕೆಯ ಖುಷಿಯಲ್ಲಿದ್ದಾರೆ. ಆದರೆ ಅವರೀಗ ಎಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಮೊದಲ ಫೋಟೋದಲ್ಲಿ ನಟಿ ಸಮುದ್ರ ತೀರದಲ್ಲಿ ಕುಳಿತು ಕಾಲನ್ನು ಚಾಚಿರುವುದು ಕಾಣಬಹುದು. ಮತ್ತೊಂದು ಚಿತ್ರದಲ್ಲಿ ಇಲಿಯಾನಾ ಹಳದಿ ಬಿಕಿನಿಯಲ್ಲಿ ತಮ್ಮ ಮುಖ ಮತ್ತು ಬೇಬಿ ಬಂಪ್​ ಕಾಣುವಂತೆ ಸೆಲ್ಫಿ ತೆಗೆದಿದ್ದಾರೆ. ಇತ್ತೀಚೆಗೆ ಅವರು ವ್ಯಕ್ತಿಯೊಬ್ಬನ ಕೈ ಹಿಡಿದು ಫೋಟೋ ತೆಗೆಸಿಕೊಂಡಿದ್ದರು. ಇಬ್ಬರ ಬೆರಳುಗಳಲ್ಲಿ ಉಂಗುರಗಳಿದ್ದು, ಇದರಿಂದಾಗಿ ನಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಊಹಾಪೋಹಗಳು ಸದ್ಯ ಹರಿದಾಡುತ್ತಿವೆ.

ಏಪ್ರಿಲ್​ 18 ರಂದು ಇಲಿಯಾನಾ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದರು. ತಮ್ಮ ಇನ್​ಸ್ಟಾ ಖಾತೆಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡು, ಶೀಘ್ರದಲ್ಲೇ ಬರಲಿದೆ. ನನ್ನ ಪುಟ್ಟ ಪ್ರಿಯತಮೆಯ ಭೇಟಿಗೆ ಕಾಯಲು ಸಾಧ್ಯವಿಲ್ಲ ಎಂಬ ಶೀರ್ಷಿಕೆಯೊಂದಿಗೆ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್​ನ ಬಹುನಿರೀಕ್ಷಿತ ಚಿತ್ರ 'ಧೂಮಂ'.. ಟ್ರೇಲರ್​ ಬಿಡುಗಡೆಗೆ ಮುಹೂರ್ತ ನಿಗದಿ

ಕತ್ರಿನಾ ಸಹೋದರನ ಜೊತೆ ಡೇಟಿಂಗ್​: ಇಲಿಯಾನಾ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಎಂದಿಗೂ ಮಾತನಾಡುವುದಿಲ್ಲ. ಆದರೆ ಅವರು ಕತ್ರಿನಾ ಕೈಫ್​​ ಸಹೋದರ ಸೆಬಾಸ್ಟಿಯನ್​ ಲಾರೆಂಟ್​ ಮಿಚ್ಚೆಲ್​ ಜೊತೆ ಡೇಟಿಂಗ್​ನಲ್ಲಿದ್ದಾರೆ ಎಂಬ ವದಂತಿ ಮುಂಚಿನಿಂದಲೇ ಇತ್ತು. ಮಾಲ್ಡೀವ್ಸ್‌ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಜೊತೆ ಸೆಬಾಸ್ಟಿಯನ್ ಮತ್ತು ಇಲಿಯಾನಾ ಕಾಣಿಸಿಕೊಂಡ ನಂತರ ಈ ಸುದ್ದಿಗಳು ಹುಟ್ಟಿಕೊಂಡಿದ್ದವು. ಆದರೆ, ತಮ್ಮ ಸಂಬಂಧದ ಬಗ್ಗೆ ಅವರಿಬ್ಬರು ಈವೆರೆಗೂ ಅಧಿಕೃತಗೊಳಿಸಿಲ್ಲ. ಅದಕ್ಕೂ ಮೊದಲು ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್​ ಅವರೊಂದಿಗೆ ಕೆಲ ವರ್ಷಗಳ ಕಾಲ ಡೇಟಿಂಗ್​ನಲ್ಲಿದ್ದರು.

ಇಲಿಯಾನಾ ಸಿನಿಮಾ ಬಗ್ಗೆ.. ಇನ್ನು ಇಲಿಯಾನಾ ಅವರ ಕೆಲಸದ ವಿಚಾರವಾಗಿ ನೋಡುವುದಾದರೆ, ಅವರು ಕೊನೆಯದಾಗಿ ದಿ ಬಿಗ್ ಬುಲ್ ನಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಕಾಣಿಸಿಕೊಂಡರು. ಈ ಚಿತ್ರವನ್ನು ನಿರ್ಮಾಪಕ ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ ಮತ್ತು ಅಜಯ್ ದೇವಗನ್ ನಿರ್ಮಿಸಿದ್ದಾರೆ. ಅವರು ಮುಂದೆ ಅನ್​ಫೇರ್​ ಅಂಡ್​ ಲವ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಲ್ವಿಂದರ್ ಸಿಂಗ್ ಜಂಜುವಾ ನಿರ್ದೇಶಿಸಿದ ಈ ಚಿತ್ರವು ಭಾರತದ ಫೇರ್ ಸ್ಕಿನ್‌ನ ಗೀಳಿನ ಮೇಲೆ ಕಾಮಿಕ್ ಟೇಕ್ ಆಗಿದೆ. ಈ ಚಿತ್ರವು ಹರಿಯಾಣದ ಹಿನ್ನೆಲೆಯಲ್ಲಿದೆ ಮತ್ತು ರಣದೀಪ್ ಹೂಡಾ ಅವರೊಂದಿಗೆ ನಟಿ ಇಲಿಯಾನಾ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಇನ್ನೂ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಿಲ್ಲ.

ಇದನ್ನೂ ಓದಿ: ಲಸ್ಟ್ ಸ್ಟೋರಿಸ್ 2 ಟೀಸರ್​: ರೊಮ್ಯಾಂಟಿಕ್​ ಮೂಡ್​ನಲ್ಲಿ ರೂಮರ್​ ಲವ್​ ಬರ್ಡ್ಸ್ ತಮನ್ನಾ ವಿಜಯ್​

Last Updated : Jun 6, 2023, 6:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.