ಮಲಯಾಳಂ ಸೂಪರ್ ಸ್ಟಾರ್ ಮೋಹನ್ಲಾಲ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ವೃಷಭ'. ಈ ದ್ವಿಭಾಷಾ ಸಿನಿಮಾದ ಚಿತ್ರೀರಣ ಶುರುವಾಗಿದೆ ಎಂದು ಚಿತ್ರತಂಡ ಭಾನುವಾರ ತಿಳಿಸಿದೆ. ಬಾಲಿವುಡ್ ಸ್ಟಾರ್ ನಿರ್ಮಾಪಕಿ ಏಕ್ತಾ ಕಪೂರ್ ಅವರು ಬಾಲಾಜಿ ಟೆಲಿಫಿಲ್ಮ್ಸ್ ಮೂಲಕ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಿಗೆ ಈಗಾಗಲೇ ಬಂಡವಾಳ ಹೂಡಿದ್ದಾರೆ. ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾಗೆ ದುಡ್ಡು ಹಾಕಲಿದ್ದಾರೆ.
ವೃಷಭ ಸಿನಿಮಾವನ್ನು ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಚಿತ್ರೀಕರಿಸಲಾಗುತ್ತಿದೆ. ಮೋಹನ್ಲಾಲ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. "ವೃಷಭ ಮೊದಲ ಹೆಜ್ಜೆ ಇಡುತ್ತಿದೆ. ವೃಷಭಕ್ಕಾಗಿ ಕ್ಲಾಪ್ ಬೋರ್ಡ್ ಮುಚ್ಚುತ್ತಿದ್ದಂತೆ, ನಾವು ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಕೇಳುತ್ತೇವೆ" ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಅಭಿಮಾನಿಗಳು ನಟ ಹಂಚಿಕೊಂಡ ಫೋಟೋಗಳ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ. ಕೆಂಪು ಹೃದಯದ ಎಮೋಜಿನೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಅನೇಕರು ಕಾಯುವುದು ಎಂದು ಬರೆದರೆ, ಇನ್ನೂ ಕೆಲವರು ತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರ ತಯಾರಕರ ಪ್ರಕಾರ, ವೃಷಭ ಚಿತ್ರೀಕರಣ ಶನಿವಾರ ಪ್ರಾರಂಭವಾಯಿತು.
-
Vrushabha takes its first step towards the frame! As the clapboard snaps shut for #Vrushabha, we ask for your love and blessings. pic.twitter.com/RM1uIkeJp2
— Mohanlal (@Mohanlal) July 23, 2023 " class="align-text-top noRightClick twitterSection" data="
">Vrushabha takes its first step towards the frame! As the clapboard snaps shut for #Vrushabha, we ask for your love and blessings. pic.twitter.com/RM1uIkeJp2
— Mohanlal (@Mohanlal) July 23, 2023Vrushabha takes its first step towards the frame! As the clapboard snaps shut for #Vrushabha, we ask for your love and blessings. pic.twitter.com/RM1uIkeJp2
— Mohanlal (@Mohanlal) July 23, 2023
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ 'ಬೇಬಿ'.. 9 ದಿನದಲ್ಲಿ 60 ಕೋಟಿ ರೂ. ಕಲೆಕ್ಷನ್
ಕನ್ನಡದಲ್ಲಿ ಅಧ್ಯಕ್ಷ, ರನ್ನ, ಪೊಗರುನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಂದ ಕಿಶೋರ್ 'ವೃಷಭ'ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಮೂಲಕ ಬೇರೆ ಭಾಷೆಯಲ್ಲೂ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಬಾಲಿವುಡ್ ನಟ ಸಂಜಯ್ ಕಪೂರ್ ಮತ್ತು ಆಭರಣ ವಿನ್ಯಾಸಕಿ ಮಹೀಪ್ ಕಪೂರ್ ಅವರ ಪುತ್ರಿ ಶನಯಾ ಕಪೂರ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಸಲ್ಮಾ ಅಘಾ ಅವರ ಪುತ್ರಿ ಜಹ್ರಾ ಎಸ್ ಖಾನ್ ಕೂಡ ಈ ಸಿನಿಮಾದ ಭಾಗವಾಗಲಿದ್ದಾರೆ.
'ವೃಷಭ' 2024ರ ಬಹುದೊಡ್ಡ ಚಿತ್ರ ಎಂದು ಹೇಳಲಾಗುತ್ತಿದೆ. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿದೆ. ನಂದ ಕಿಶೋರ್ ಅವರು ಈ ಹಿಂದೆ ಎಂಟು ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಎಲ್ಲವೂ ಸೂಪರ್ ಹಿಟ್ ಆಗಿವೆ. 'ವೃಷಭ' ಆ್ಯಕ್ಷನ್ ಎಂಟರ್‌ಟೈನರ್ ಆಗಿದ್ದು, ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ. ವೃಷಭ' ಕಥೆಯು ಆ್ಯಕ್ಷನ್ ಮತ್ತು ಭಾವನೆಗಳಿಂದ ತುಂಬಿದ ತಂದೆ ಮತ್ತು ಮಗನ ಮೇಲೆ ಕೇಂದ್ರೀಕೃತವಾಗಿದೆ ಎಂದು ವರದಿಯಾಗಿದೆ. ಮಾಲಿವುಡ್ ದಿಗ್ಗಜ ಮೋಹನ್ಲಾಲ್ ಅವರು, 'ಲೂಸಿಫರ್ 2' ಮತ್ತು 'ಮಲೈಕೊಟ್ಟೈ ವಾಲಿಬನ್' ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: 'ರಾಝಿ ಸಿನಿಮಾದಲ್ಲಿ ಆಲಿಯಾ ಭಟ್ ಅಭಿನಯ ಅಮೋಘ, ಕಣ್ಣೀರು ತಡೆಯಲಾಗಲಿಲ್ಲ': ಸುಧಾ ಮೂರ್ತಿ