ETV Bharat / entertainment

ಗೋವಾ ಕಲಾ ಉತ್ಸವದಲ್ಲಿ ಭಾರತ ಗೌರವ ಪ್ರಶಸ್ತಿ ಪಡೆದ ನಟಿ - ಮಾಡೆಲ್ ಪೂಜಾ ರಮೇಶ್ - Model Pooja Ramesh awarded India Honors Award

ಸಿನಿಮಾ, ಸೀರಿಯಲ್​, ಸಾಮಾಜಿಕ ಕಳಕಳಿ, ಮಾಡೆಲಿಂಗ್​ ಸೇರಿದಂತೆ ಹಲವು ಕ್ಷೇತ್ರದಲ್ಲಿ ಪೂಜಾ ರಮೇಶ್​ ತನ್ನದೇ ಛಾಪು ಮೂಡಿಸಿದ್ದಾರೆ. ಹೀಗಾಗಿ, ಪೂಜಾ ರಮೇಶ್​ ಅವರ ಕಾರ್ಯಗಳನ್ನು ಗುರುತಿಸಿ ಏಷ್ಯಾ ವೇದಿಕ್​ ಕಲ್ಚರ್​ ಅಕಾಡೆಮಿಯಿಂದ ಗೌರವ ಡಾಕ್ಟರೇಟ್​ ನೀಡಲಾಗಿತ್ತು.

Model Pooja Ramesh
ಮಾಡೆಲ್ ಪೂಜಾ ರಮೇಶ್
author img

By

Published : Apr 1, 2022, 4:40 PM IST

ಸ್ಯಾಂಡಲ್​ವುಡ್​ನಲ್ಲಿ ಕನ್ನಡದ ಪ್ರತಿಭೆಗಳು ಸಿನಿಮಾ, ಫ್ಯಾಷನ್, ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಸಿನಿಮಾ ಜೊತೆಗೆ ಸಾಮಾಜಿಕ ಕಳಕಳಿಯ ಕೆಲಸಗಳನ್ನ ಮಾಡುವ ಮೂಲಕ ಜನರ ಪ್ರೀತಿ ಗೌರವಕ್ಕೆ ಪಾತ್ರರಾಗುತ್ತಾರೆ‌.‌ ಇದೀಗ ಈ ಸಾಲಿಗೆ ಕನ್ನಡತಿ ಡಾ. ಪೂಜಾ ರಮೇಶ್​ ಕೂಡ ಒಬ್ಬರು. ಇವರ ಸಾಧನೆ ಗುರುತಿಸಿ ಹೊರ ರಾಜ್ಯಗಳಲ್ಲಿ ಸನ್ಮಾನ ಮಾಡಲಾಗಿದೆ.

ಗೋವಾದ ಕಲಾ ಉತ್ಸವದಲ್ಲಿ ಭಾರತ ಗೌರವ ಪ್ರಶಸ್ತಿ ಪಡೆದ ನಟಿ - ಮಾಡೆಲ್ ಪೂಜಾ ರಮೇಶ್

ಸಿನಿಮಾ, ಸೀರಿಯಲ್​, ಸಾಮಾಜಿಕ ಕಳಕಳಿ, ಮಾಡೆಲಿಂಗ್​ ಸೇರಿದಂತೆ ಹಲವು ಕ್ಷೇತ್ರದಲ್ಲಿ ಪೂಜಾ ರಮೇಶ್​ ತನ್ನದೇ ಛಾಪು ಮೂಡಿಸಿದ್ದಾರೆ. ಹೀಗಾಗಿ, ಪೂಜಾ ರಮೇಶ್​ ಅವರ ಕಾರ್ಯಗಳನ್ನು ಗುರುತಿಸಿ ಏಷ್ಯಾ ವೇದಿಕ್​ ಕಲ್ಚರ್​ ಅಕಾಡೆಮಿಯಿಂದ ಗೌರವ ಡಾಕ್ಟರೇಟ್​ ನೀಡಲಾಗಿತ್ತು. ಈಗ ಅಖಿಲ ಗೋವಾ ಕನ್ನಡಿಗರ ಮಹಾಸಂಘ ಮತ್ತು ಸ್ನೇಹ ಯುವ ಸಾಂಸ್ಕೃತಿಕ ಸಂಘ ಸೇರಿ ಗೋವಾ ಕಲಾ ಉತ್ಸವದಲ್ಲಿ ಡಾ. ಪೂಜಾ ರಮೇಶ್​ ಅವರಿಗೆ ಭಾರತ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದು ಅವರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.

ಫ್ಯಾಷನ್​ ಡಿಸೈನರ್​ ಆಗಿ ಕೆಲಸ ಮಾಡಬೇಕು ಎಂಬುದು ಪೂಜಾ ರಮೇಶ್​ ಅವರ ಉದ್ದೇಶ ಆಗಿತ್ತು. ವಿದ್ಯಾಭ್ಯಾಸಕ್ಕಾಗಿ ಅವರು 2007ರಲ್ಲಿ ಬೆಂಗಳೂರಿಗೆ ಬಂದರು. 2008ರಲ್ಲಿ ಆ್ಯಂಕರ್​ ಆಗಿ ವಾಹಿನಿಯೊಂದರಲ್ಲಿ ಕೆಲಸ ಆರಂಭಿಸಿದರು. ಅದಾಗಿ ಕೆಲವೇ ತಿಂಗಳು ಕಳೆಯುವುದರಲ್ಲಿ ಅವರಿಗೆ ಚಿತ್ರರಂಗದಿಂದ ಅವಕಾಶಗಳು ಬರಲು ಆರಂಭಿಸಿದವು. ನಿರುದ್ಯೋಗಿ, ಪೇಪರ್ ದೋಣಿ, ಲಹರಿ, ತಾಂಡವ, ಮಹಾಕಾಳಿ ಮುಂತಾದ ಸಿನಿಮಾಗಳಲ್ಲಿ ಪೂಜಾ ರಮೇಶ್ ಅಭಿನಯಿಸಿದ್ದಾರೆ.

Model Pooja Ramesh
ಮಾಡೆಲ್ ಪೂಜಾ ರಮೇಶ್

ಮೊದಲ ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಪೂಜಾ ರಮೇಶ್​ ಅವರನ್ನು ಧಾರಾವಾಹಿ ಲೋಕವೂ ಕೈಬೀಸಿ ಕರೆಯಿತು. ಖಾಸಗಿ ವಾಹಿನಿಯಲ್ಲಿ ಕಾಮಧೇನು ಸೀರಿಯಲ್​ನಲ್ಲಿ ಅವರು ಪ್ರಮುಖ ಪಾತ್ರ ಮಾಡಿದರು. ಎರಡು ವರ್ಷ ಸತತವಾಗಿ ಅವರು ಅದರಲ್ಲಿ ತೊಡಗಿಕೊಂಡರು. ನಂತರ ಧಾರಾವಾಹಿಗಳಲ್ಲೇ ಪೂಜಾ ರಮೇಶ್​ ಹೆಚ್ಚು ಬ್ಯುಸಿ ಆದರು. ಕಾಮಧೇನು, ಜಾನವಿ, ಸಂಭವಾಮಿ ಯುಗೇಯುಗೇ, ಗ್ರಹಣ, ಎಲ್ಲಿ ಜಾರಿತೋ ಮನವು, ಪಾಂಡು ರಂಗ ವಿಠ್ಠಲ, ಪಾರ್ವತಿ, ಎಸ್​ಎಸ್​ಎಲ್​ಸಿ ನನ್ ಮಕ್ಕಳು, ಪರಮೇಶ್ವರ, ಅಶ್ವಿನಿ ನಕ್ಷತ್ರ ಮತ್ತು ತೆಲುಗಿನ 2 ಧಾರಾವಾಹಿಗಳಲ್ಲಿ ಪೂಜಾ ರಮೇಶ್​ ಅಭಿನಯಿಸಿದರು.

ಈ ಎಲ್ಲ ಕಾರ್ಯಗಳ ಜೊತೆಗೆ ಪೂಜಾ ಅವರು ಮಾಡೆಲಿಂಗ್​ನಲ್ಲಿಯೂ ಸಕ್ರೀಯರಾಗಿದ್ದರು. ಹಲವು ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕಾರಣಾಂತರಗಳಿಂದ ಅವರು ನಟನೆಯಿಂದ ಒಂದಷ್ಟು ವರ್ಷಗಳ ಕಾಲ ಅಂತರ ಕಾಯ್ದುಕೊಂಡಿದ್ದರು. ಈಗ ಮತ್ತೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ. 2015ರೊಳಗೆ ನನ್ನ ದೇಹದ ತೂಕ ಸ್ವಲ್ಪ ಜಾಸ್ತಿ ಆಯಿತು.

ಅವಕಾಶಗಳು ಬರುತ್ತಿವೆ: ಮತ್ತೆ ನಾನು ಫಿಟ್​ ಆಗಿ ಇಂಡಸ್ಟ್ರಿಗೆ ಕಮ್​ಬ್ಯಾಕ್​ ಮಾಡಬೇಕು ಎನಿಸಿತು. 69 ಕೆಜಿ ಇಂದ 52 ಕೆಜಿಗೆ ತೂಕ ಇಳಿಸಿಕೊಂಡಿದ್ದೇನೆ. ಇಷ್ಟು ವರ್ಷ ಬ್ರೇಕ್ ತೆಗೆದುಕೊಂಡರೂ ಬಣ್ಣದ ಲೋಕ ನನ್ನನ್ನು ಮರೆತಿಲ್ಲ. ಮತ್ತೆ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಿಂದ ಅವಕಾಶಗಳು ಬರುತ್ತಿವೆ ಎಂದಿದ್ದಾರೆ ಪೂಜಾ ರಮೇಶ್​.

ಕೋವಿಡ್​​ ಸಂದರ್ಭದಲ್ಲಿ ಅನೇಕ ಹಿರಿಯ ಕಲಾವಿದರಿಗೆ ಪೂಜಾ ರಮೇಶ್​ ಅವರು ಸಹಾಯ ಹಸ್ತ ಚಾಚಿದರು. ಇಂಥ ಕಾರ್ಯಕ್ಕಾಗಿ ಅವರಿಗೆ ಜನ್ಮಭೂಮಿ ಫೌಂಡೇಶನ್​ನಿಂದ ಮಹಿಳಾ ಸಾಧಕಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊಡಗಿನ ಕಾಫಿ ತೋಟದ ಕೂಲಿ ಕಾರ್ಮಿಕರ ಮಕ್ಕಳಿಗೆ ಕೈಲಾದ ಸಹಾಯ ಮಾಡಿ, ಸಮವಸ್ತ್ರವನ್ನೂ ಪೂಜಾ ರಮೇಶ್​ ವಿತರಿಸಿದರು. ಅದಕ್ಕಾಗಿ ಅವರಿಗೆ ಕಾವೇರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸೌಂದರ್ಯ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಮಿಸ್​ ಇಂಡಿಯಾ, ಬೆಸ್ಟ್​ ಬ್ಯೂಟಿಫುಲ್​ ಹೇರ್​ ಟೈಟಲ್​ ಗೆದ್ದಿದ್ದರು.

ಓದಿ: 'ಗುಡ್‌ಬೈ' ಚಿತ್ರದ ಸೆಟ್‌ನಿಂದ ಹರಿದಾಡುತ್ತಿರುವ ಬಿಗ್​​ಬಿ-ರಶ್ಮಿಕಾ ಫೋಟೋ; 'ಸರ್, ಇವರು ಶ್ರೀವಲ್ಲಿ.. ಪುಷ್ಪ ಅಲ್ಲ' ಎಂದ ನೆಟಿಜನ್ಸ್​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.