ETV Bharat / entertainment

'ಚೌಕಾಬಾರ' ರೊಮ್ಯಾಂಟಿಕ್ ಸಾಂಗ್​​ ಬಿಡುಗಡೆ: ಪ್ರೇಮಿಗಳ ದಿನದಂದು ಯೂಟ್ಯೂಬ್​ನಲ್ಲಿ ಲಭ್ಯ - ಚೌಕಾಬಾರ ಚಿತ್ರದ ರೊಮ್ಯಾಂಟಿಕ್ ಸಾಂಗ್​​ ಬಿಡುಗಡೆ

ವಿಕ್ರಮ್ ಸೂರಿ ನಿರ್ದೇಶನದ 'ಚೌಕಾಬಾರ' ಚಿತ್ರದ ರೊಮ್ಯಾಂಟಿಕ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಫೆ.14, ಪ್ರೇಮಿಗಳ ದಿನಾಚರಣೆಯಂದು ಈ ಹಾಡನ್ನು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್​​ನಲ್ಲಿ ವೀಕ್ಷಿಸಬಹುದು.

MLA M Krishnappa released chowka baara movie song
'ಚೌಕಾಬಾರ' ಚಿತ್ರದ ರೊಮ್ಯಾಂಟಿಕ್ ಸಾಂಗ್​​ ಬಿಡುಗಡೆ ಮಾಡಿದ ಶಾಸಕ ಎಂ.ಕೃಷ್ಣಪ್ಪ
author img

By

Published : Feb 12, 2023, 8:06 AM IST

ಕಿರುತೆರೆ‌ ಲೋಕದಲ್ಲಿ ಕನ್ನಡಿಗರ ಮನಗೆದ್ದಿರುವ ವಿಕ್ರಮ್ ಸೂರಿ ಹಾಗು ನಮಿತಾ ರಾವ್ ಜೋಡಿ 'ಚೌಕಾಬಾರ' ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.‌ ವಿಕ್ರಮ್ ಸೂರಿ ಚಿತ್ರ ನಿರ್ದೇಶನ ಮಾಡುತ್ತಿದ್ರೆ, ಪತ್ನಿ ನಮಿತಾ ರಾವ್ ನಿರ್ಮಾಣ ಹೊಣೆ ಹೊತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿದ್ದು ಚಿತ್ರದ ರೊಮ್ಯಾಂಟಿಕ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಶಾಸಕ ಎಂ.ಕೃಷ್ಣಪ್ಪ ಶನಿವಾರ ಹಾಡು ಬಿಡುಗಡೆ ಮಾಡಿ ಶುಭಕೋರಿದರು.

ನಿರ್ದೇಶಕ ವಿಕ್ರಮ್ ಸೂರಿ ಮಾತನಾಡಿ, "ಮಣಿ ಆರ್.ರಾವ್ ಅವರ ಕಾದಂಬರಿ ಆಧಾರಿತ ಚಿತ್ರದ ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದೆ. ನಮ್ಮ ಮೇಲೆ ಪ್ರೀತಿಯಿಟ್ಟು ಹಾಡು ಬಿಡುಗಡೆ ಮಾಡಿಕೊಟ್ಟ ಜನಪ್ರಿಯ ಶಾಸಕರಿಗೆ ಧನ್ಯವಾದ" ಎಂದರು.

Vikram Suri and Namitha Rao
ವಿಕ್ರಮ್ ಸೂರಿ ಹಾಗು ನಮಿತಾ ರಾವ್

ಇದನ್ನೂ ಓದಿ: 'ಚೌಕಾಬಾರ' ಚಿತ್ರಕ್ಕೆ ಪವರ್ ತುಂಬಿದ ಪುನೀತ್...ಫೋಟೋ ಗ್ಯಾಲರಿ

ನಿರ್ಮಾಪಕಿ ನಮಿತಾ ರಾವ್ ಮಾತನಾಡಿ, "ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ. ಯುಎಸ್​​ಎಯಲ್ಲೂ ಮಾರ್ಚ್ ತಿಂಗಳಿನಲ್ಲೇ ತೆರೆ ಕಾಣಲಿದೆ. ಏಪ್ರಿಲ್​​ನಲ್ಲಿ ದುಬೈ, ಆಸ್ಟ್ರೇಲಿಯಾ ಮುಂತಾದ ಕಡೆ ಬಿಡುಗಡೆ ಮಾಡಲು ಸಿದ್ದತೆ ನಡೆಯುತ್ತಿದೆ. ಫೆ.28 ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ತಂಡಕ್ಕೆ ಧನ್ಯವಾದ" ಎಂದರು.

ಇದನ್ನೂ ಓದಿ: ವಿಕ್ರಮ್ ಸೂರಿ ನಿರ್ದೇನದ ಚೌಕಬಾರ ಸಿನಿಮಾಕ್ಕೆ ಪವರ್ ಸ್ಟಾರ್ ಸಾಥ್!

ಚಿತ್ರದಲ್ಲಿ ಮೂರು ಹಾಡುಗಳಿವೆ. ಈಗ ಬಿಡುಗಡೆಯಾಗಿರುವ ಹಾಡನ್ನು ನಕುಲ್ ಅಭಯಂಕರ್ ಹಾಗೂ ರಮ್ಯ ಭಟ್ ಹಾಡಿದ್ದಾರೆ. ಬಿ.ಆರ್.ಲಕ್ಷ್ಮಣರಾವ್ ಸಾಹಿತ್ಯ ನೀಡಿದ್ದಾರೆ. ಸಂಗೀತ ನಿರ್ದೇಶಕ ಅಶ್ವಿನ್ ಪಿ. ಕುಮಾರ್ ಸಂಗೀತ ನೀಡಿದ್ದಾರೆ. ಚಿತ್ರದ ನಾಯಕ ವಿಹಾನ್ ಪ್ರಭಂಜನ್, ಕಾವ್ಯ ರಮೇಶ್, ಸಂಜಯ್ ಸೂರಿ, ಸುಮಾ ರಾವ್, ಪ್ರಥಮ ಪ್ರಸಾದ್, ಮಧು ಹೆಗಡೆ, ದಮಯಂತಿ ನಾಗರಾಜ್ ಸೇರಿದಂತೆ ಅನೇಕ ಕಲಾವಿದರು ಹಾಗೂ ಕಾದಂಬರಿ ಬರೆದಿರುವ ಮಣಿ ಆರ್.ರಾವ್, ಸಂಭಾಷಣೆ ಬರೆದಿರುವ ರೂಪ ಪ್ರಭಾಕರ್, ಛಾಯಾಗ್ರಾಹಕ ರವಿರಾಜ್ ಹಾಗೂ ಸಂಕಲನಕಾರ ಶಶಿಧರ್ ಸೇರಿದಂತೆ ಹಲವು ತಂತ್ರಜ್ಞರು ಚೌಕಾಬಾರಕ್ಕಾರಿ ಕೆಲಸ ಮಾಡಿದ್ದಾರೆ.

MLA M Krishnappa released chowka baara movie song
'ಚೌಕಾಬಾರ' ಚಿತ್ರ ತಂಡ

ನವಿ ನಿರ್ಮಿತಿ ಲಾಂಛನದಲ್ಲಿ ನಮಿತಾರಾವ್ ನಿರ್ಮಿಸಿರುವ ಚೌಕಾಬಾರ ಚಿತ್ರದ ರೊಮ್ಯಾಂಟಿಕ್ ಹಾಡು ಫೆ.14 ಪ್ರೇಮಿಗಳ ದಿನಾಚರಣೆಯಂದು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್​​ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: ವಿಕ್ರಮ್ ಸೂರಿ-ನಮಿತಾ ದಂಪತಿಯ 'ಚೌಕಾಬಾರ'ದ ಚಿತ್ರೀಕರಣ ಮುಕ್ತಾಯ

'ಎಳೆಯರು ನಾವು ಗೆಳೆಯರು’ ಮಕ್ಕಳ ಸಿನಿಮಾ ಮೂಲಕ ರಾಜ್ಯ ಪ್ರಶಸ್ತಿ ಪಡೆದುಕೊಂಡಿರುವ ನಿರ್ದೇಶಕ ವಿಕ್ರಮ್​ ಸೂರಿ ಅವರ ಮತ್ತೊಂದು ಸಿನಿಮಾ 'ಚೌಕಾಬಾರ'. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಸೂರಿ ಅವರ ಈ ಚಿತ್ರಕ್ಕೆ ಪತ್ನಿ ನಮಿತಾ ರಾವ್​​ ಅವರೇ ಬಂಡವಾಳ ಹೂಡಿರುವುದು ವಿಶೇಷ. ಇದು ಮಣಿ ಆರ್.ರಾವ್ ರಚನೆಯ 'ಭಾವನ' ಕಾದಂಬರಿ ಆಧಾರಿತ ಚಿತ್ರವಾಗಿದೆ. ನಟಿ ರೂಪ ಪ್ರಭಾಕರ್ ಸಂಭಾಷಣೆ ನೀಡಿದ್ದಾರೆ. ಹದಿಹರೆಯದ ಮನಸ್ಸಿನ ತಾಕಲಾಟ, ಪ್ರಸ್ತುತ ಸಮಾಜದಲ್ಲಿರುವ ಪ್ರೀತಿ, ತ್ಯಾಗ, ಕಾಮ ಹಾಗೂ ಸಾಮಾಜಿಕ ಪ್ರಜ್ಞೆಯ ಕುರಿತು ವಿಭಿನ್ನವಾಗಿ ತೋರಿಸಲಿದ್ದಾರೆ ನಿರ್ದೇಶಕರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.