ETV Bharat / entertainment

ಅನುಷ್ಕಾ ಅಭಿನಯದ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಟೀಸರ್​ ರಿಲೀಸ್​ - ಈಟಿವಿ ಭಾರತ ಕನ್ನಡ

ಅನುಷ್ಕಾ ಶೆಟ್ಟಿ ಅಭಿನಯದ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾದ ಟೀಸರ್​ ಬಿಡುಗಡೆ​ ಆಗಿದೆ.

Miss Shetty Mister Polioshetty
ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ
author img

By

Published : Apr 30, 2023, 2:49 PM IST

ನಟಿ ಅನುಷ್ಕಾ ಶೆಟ್ಟಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಸುಮಾರು ಐದು ವರ್ಷಗಳು ಕಳೆದಿವೆ. ದೊಡ್ಡ ಗ್ಯಾಪ್‌ನ ನಂತರ ಇದೀಗ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಜಾತಿ ರತ್ನಲು ಜನಪ್ರಿಯತೆಯ ಯುವ ನಟ ನವೀನ್ ಪೋಲಿಶೆಟ್ಟಿ ಜೊತೆ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.

ರೊಮ್ಯಾಂಟಿಕ್ ಮತ್ತು ಕಾಮಿಡಿ ಎಂಟರ್ಟೈನರ್ ಸಿನಿಮಾ ಇದಾಗಿದೆ. ಮಹೇಶ್ ಬಾಬು ಪಿ ನಿರ್ದೇಶಿಸಿದ್ದಾರೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವಂಶಿ ಪ್ರಮೋದ್ ನಿರ್ಮಾಣ ಮಾಡುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು ಟೀಸರ್ ಅನ್ನು ಶನಿವಾರ ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.

ನವೀನ್ ಪೋಲಿಶೆಟ್ಟಿ ಅವರು ಸಿದ್ದು ಪೋಲಿಶೆಟ್ಟಿ ಎಂಬ ಪಾತ್ರದಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಆಗಿ ನಟಿಸಿದ್ದಾರೆ. ಅನುಷ್ಕಾ ಶೆಟ್ಟಿ ಅವರು ಅನ್ವಿತಾ ರವಳಿಶೆಟ್ಟಿಯಾಗಿ ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.​ ಇಬ್ಬರ ನಡುವಿನ ಕಾಮಿಡಿ ಕೆಮಿಸ್ಟ್ರಿ ಆಕರ್ಷಕವಾಗಿದೆ ಎಂದು ಚಿತ್ರತಂಡ ಹೇಳುತ್ತಿದೆ. ರಾಧನ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಟೀಸರ್​ನಲ್ಲಿ ಅನುಷ್ಕಾ ಶೆಟ್ಟಿ ಬಾಣಸಿಗರಾಗಿ ಕಾಣಿಸಿಕೊಂಡಿದ್ದು, ಪ್ರಾಕ್ಟಿಕಲ್​ ಆಗಿ ಯೋಚಿಸುವ ಮಹಿಳೆ ಪಾತ್ರ ನಿಭಾಯಿಸಿದ್ದಾರೆ. 'ಆಹಾರ ಅಂದ್ರೆ ಮ್ಯಾಜಿಕ್​ ಅಲ್ಲ ಸೈನ್ಸ್​' ಅನ್ನೋ ಅನುಷ್ಕಾ ಡೈಲಾಗ್​ನೊಂದಿಗೆ ಟೀಸರ್​ ಪ್ರಾರಂಭವಾಗುತ್ತದೆ.​ ನಂತರ, ‘ನನ್ನ ಮಗಳು ಸಾಮಾನ್ಯ ಅಂದುಕೊಂಡಿದ್ದೀಯಾ.. ಅವಳು ಯಾವತ್ತೂ ಮದುವೆ ಆಗಲ್ಲ’ ಎಂದು ಅನುಷ್ಕಾ ತಾಯಿ ಎಂದು ಜಯಸುಧಾ ಹೇಳಿದ ಡೈಲಾಗ್ ಕುತೂಹಲ ಹೆಚ್ಚಿಸುತ್ತದೆ.

ಇದನ್ನೂ ಓದಿ: 'ರೈನ್​ಬೋ' ಫಸ್ಟ್​ ಶೆಡ್ಯೂಲ್​ ಕಂಪ್ಲೀಟ್​: 'ಕ್ಷಮಿಸಿ' ಎಂದಿದ್ಯಾಕೆ ರಶ್ಮಿಕಾ?

ನವೀನ್ ಪೋಲಿಶೆಟ್ಟಿ ತಮ್ಮ ಟ್ರೇಡ್‌ಮಾರ್ಕ್ ಟೈಮಿಂಗ್ ಕಾಮಿಡಿ ಮತ್ತು ಪಂಚ್ ಡೈಲಾಗ್‌ಗಳ ಮೂಲಕ ನಗು ತರಿಸಿದ್ದಾರೆ. 'ನಿನ್ನ ಶಕ್ತಿ ಏನು' ಎಂದು ಅನುಷ್ಕಾ ಪ್ರಶ್ನಿಸಿದಾಗ ಅವಕಾಶ ಸಿಕ್ಕಾಗಲೆಲ್ಲ ಕಾಮಿಡಿ ಮಾಡುತ್ತೇನೆ. ಸನ್ನಿವೇಶವನ್ನು ಲೆಕ್ಕಿಸದೆ ಹಾಸ್ಯ ಮಾಡುತ್ತೇನೆ ಎಂದು ಅವರು​ ಹೇಳುತ್ತಾರೆ.

'ಅಲ್ಲದೇ ನಿಮ್ಮ ಟೈಮಿಂಗ್ ಯಾವಾಗ?' ಎಂಬ ಅನುಷ್ಕಾ ಅವರ ಪ್ರಶ್ನೆಗೆ ಕಾಮಿಡಿ ಟೈಮಿಂಗ್ ಪರ್ಫೆಕ್ಟ್ ಎಂದು ಟೀಸರ್ ಕೊನೆಯಲ್ಲಿ ನವೀನ್ ಪೊಲಿಶೆಟ್ಟಿ ಹೇಳಿದ್ದು ಮತ್ತಷ್ಟು ನಗು ಹುಟ್ಟಿಸುತ್ತದೆ. ಇವು ಟೀಸರ್‌ನ ಹೈಲೈಟ್ಸ್. ಒಟ್ಟಿನಲ್ಲಿ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಟೀಸರ್ ಅನುಷ್ಕಾ ಅಭಿಮಾನಿಗಳ ಜೊತೆಗೆ ಟಾಲಿವುಡ್ ಪ್ರೇಕ್ಷಕರನ್ನು ಇಂಪ್ರೆಸ್ ಮಾಡುತ್ತಿದೆ.

ಚಿತ್ರಕ್ಕೆ ಮಹೇಶ್ ಬಾಬು ಪಿ.ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರಾಗಿ ಇದು ಅವರ ಎರಡನೇ ಚಿತ್ರ. ಈ ಹಿಂದೆ ಸಂದೀಪ್ ಕಿಶನ್ ಜೊತೆ ರಾರಾ ಕೃಷ್ಣಯ್ಯ ಎಂಬ ಸಿನಿಮಾ ಮಾಡಿದ್ದರು. ಇದು ಅನುಷ್ಕಾಗೆ ನಾಯಕಿಯಾಗಿ 48ನೇ ಚಿತ್ರವಾಗಿದೆ. ನವೀನ್ ಪೋಲಿಶೆಟ್ಟಿ ನಾಯಕನಾಗಿ ಇದು ಮೂರನೇ ಚಿತ್ರ. ತೆಲುಗು ಅಲ್ಲದೇ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'ಮಗುವನ್ನು ಹೊಂದುವ ಆಸೆಯಿತ್ತು'.. ಮದುವೆ, ಮಕ್ಕಳ ಬಗ್ಗೆ ಮಾತನಾಡಿದ ಬಾಲಿವುಡ್​​ ಬ್ಯಾಚುಲರ್​​ ಸಲ್ಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.