ಕನ್ನಡ ಚಿತ್ರರಂಗದಲ್ಲಿ ಟಗರು ಸಿನಿಮಾದಲ್ಲಿ ಚಿಟ್ಟೆ ಎಂಬ ಪಾತ್ರದ ಮೂಲಕ ತನ್ನದೇ ಛಾಪು ಮೂಡಿಸಿರೋ ನಟ ವಸಿಷ್ಠ ಸಿಂಹ. ಸದ್ಯ ಕನ್ನಡ ಹಾಗು ತೆಲುಗು ಸಿನಿಮಾಗಳಲ್ಲಿ ಬ್ಯುಸಿಗುರೋ ವಸಿಷ್ಠ ಸಿಂಹ Love...ಲಿ ಎನ್ನುವ ಕ್ಯಾಚೀ ಟೈಟಲ್ನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ತಂಡ ಇಂಟ್ರೊಡಕ್ಷನ್ ಫೈಟ್ಸ್ ಸೀನ್ಸ್ ಚಿತ್ರೀಕರಣ ಮುಕ್ತಾಯಗೊಳಿಸಿದೆ.
Love..ಲಿ ಸಿನಿಮಾದ ಇಂಟ್ರೊಡಕ್ಷನ್ ಫೈಟ್ ಸೀನ್ಸ್, ಸಖತ್ ಅದ್ಧೂರಿಯಾಗಿ ಮೂಡಿ ಬಂದಿದೆ. ವಸಿಷ್ಠ ಸಿಂಹ, ಕಾಕ್ರೋಚ್ ಸುಧಿ, ಶೋಭರಾಜ್ ಹಾಗೂ ವರದ ನಡುವೆ ನಡೆಯುವ ಆ್ಯಕ್ಷನ್ ಸಿಕ್ವೇನ್ಸ್ನಲ್ಲಿ, ವಸಿಷ್ಠ ಸಿಂಹ ಪ್ರಾಕ್ಟೀಸ್ ಮಾಡಿ ಫೈಟ್ ದೃಶ್ಯದಲ್ಲಿ ಅಬ್ಬರಿಸಿದ್ದಾರೆ. ವಿಶೇಷ ಎಂದರೆ ವಸಿಷ್ಠ ಹಿಂದೆಂದೂ ಕಾಣದ ರೀತಿ ಸಖತ್ ಸ್ಟೈಲೀಶ್ ಲುಕ್ನಲ್ಲಿ ಮಿಂಚಿದ್ದಾರೆ. ರೋಪ್ ಬಳಕೆಯನ್ನು ಕಡಿಮೆ ಮಾಡಿ ಚಿಟ್ಟೆ ಹೆಚ್ಚು ರಿಸ್ಕ್ ತೆಗೊಂಡಿದ್ದಾರೆ.
Love..ಲಿ ಸಿನಿಮಾದಲ್ಲಿ ಟ್ರಿನಿಟಿ ಎಂಬ ಹೊಸ ಉಪಕರಣ ಬಳಸಿ 360 ಡಿಗ್ರಿ ಆ್ಯಂಗಲ್ನಲ್ಲಿ ಶೂಟಿಂಗ್ ಮಾಡಲಾಗಿದೆ. ಸಖತ್ ರಿಚ್ ಆಗಿ ಮೂಡಿ ಬಂದಿರುವ ಇಂಟ್ರೊಡಕ್ಷನ್ ಫೈಟ್ ಸೀನನ್ನು ಡ್ಯಾನಿ ಮಾಸ್ಟರ್ 40-50 ಫೈಟರ್ಗಳ ಜೊತೆ ಚಿತ್ರೀಕರಿಸಿದ್ದಾರೆ. ಇದೇ ತಿಂಗಳ 21ರಂದು ವಸಿಷ್ಠ ಸಿಂಹ ಫಸ್ಟ್ ಲುಕ್ ಚಿತ್ರತಂಡ ರಿಲೀಸ್ ಮಾಡಲಿದೆ.
ಕಮರ್ಷಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಹೊಂದಿರುವ ಈ ಸಿನಿಮಾ ರೌಡಿಸಂ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ಕಳೆದ ಎಂಟು ವರ್ಷಗಳಿಂದ ವಸಿಷ್ಠ ಸಿಂಹ ಜೊತೆಯಲ್ಲಿರುವ, ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಚೇತನ್ ಕೇಶವ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಎಂ.ಆರ್.ರವೀಂದ್ರ ಕುಮಾರ್ ಚಿತ್ರಕ್ಕೆ ನಿರ್ಮಾಣ ಮಾಡಿದ್ದು, ಅಶ್ವಿನ್ ಕೆನಡಿ ಕ್ಯಾಮೆರಾ ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಇದನ್ನೂ ಓದಿ: ಕಲಾಂ ಅವರ ಮಾತೇ ಸ್ಫೂರ್ತಿ : ಆಗ ಬಿಎಂಟಿಸಿ ಕಂಡಕ್ಟರ್ ಈಗ ಸಿನಿಮಾ ಡೈರೆಕ್ಟರ್