ETV Bharat / entertainment

'ಮಟ್ಕಾ': ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಮೆಗಾ ಪ್ರಿನ್ಸ್​ ವರುಣ್​ ತೇಜ್​

author img

By

Published : Jul 27, 2023, 8:02 PM IST

ಟಾಲಿವುಡ್​ ನಟ ವರುಣ್ ತೇಜ್ ಅಭಿನಯದ 14ನೇ ಸಿನಿಮಾ 'ಮಟ್ಕಾ'ದ ಮುಹೂರ್ತ ಸಮಾರಂಭ ಇಂದು ಅದ್ಧೂರಿಯಾಗಿ ನಡೆಯಿತು.

matka
ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಮೆಗಾ ಪ್ರಿನ್ಸ್​ ವರುಣ್​ ತೇಜ್​

ಟಾಲಿವುಡ್​ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸುಪುತ್ರ ವರುಣ್ ತೇಜ್ ನಟನೆಯ 14ನೇ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್​ನಲ್ಲಿ ಇಂದು ಅದ್ಧೂರಿಯಾಗಿ ನೆರವೇರಿದೆ. ನಿರ್ದೇಶಕ ಮಾರುತಿ ಕ್ಯಾಮೆರಾಗೆ ಚಾಲನೆ ನೀಡಿದ್ದು, ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದರು. ಹರೀಶ್ ಶಂಕರ್ 'ಮಟ್ಕಾ' ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

matka
'ಮಟ್ಕಾ' ಪೋಸ್ಟರ್​

ವರುಣ್ ತೇಜ್ ನಟನೆಯ 14ನೇ ಸಿನಿಮಾಗೆ ಮಟ್ಕಾ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಇದು ಜೂಟಾಟದ ಕಥೆಯಾಧಾರಿತ ಸಿನಿಮಾ. 1958ರಿಂದ 82ರ ಅವಧಿಯಲ್ಲಿ ವೈಜಾಗ್​ನಲ್ಲಿ ನಡೆದ ಸತ್ಯ ಘಟನೆಯಾಧಾರಿತ ಚಿತ್ರವಾಗಿದೆ. ಬರೋಬ್ಬರಿ 24 ವರ್ಷದ ಹಿಂದಿನ ಕಥೆಯಾಧಾರಿತ ಸಿನಿಮಾವಾಗಿರುವ ಮಟ್ಕಾದಲ್ಲಿ ವರುಣ್ ತೇಜ್ ನಾಲ್ಕು ವಿಭಿನ್ನ ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೆಗಾ ಪ್ರಿನ್ಸ್ ಸಿನಿ ಕೆರಿಯರ್​ನ ಅತಿ ಹೆಚ್ಚು ಬಜೆಟ್‌ನ ಚಿತ್ರ ಇದು ಎಂಬ ನಿರೀಕ್ಷೆ ಪ್ರೇಕ್ಷಕರಲ್ಲಿ ಹುಟ್ಟಿದೆ.

ಚಿತ್ರತಂಡ ಹೀಗಿದೆ.. ಫಲಾಸ ಸಿನಿಮಾ ಖ್ಯಾತಿಯ ಕರುಣ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಟ್ಕಾ ಸಿನಿಮಾದಲ್ಲಿ ನಾಯಕಿಯಾಗಿ ಮೀನಾಕ್ಷಿ ಚೌಧರಿ ನಟಿಸುತ್ತಿದ್ದಾರೆ. ಇವರಲ್ಲದೇ ನವೀನ್ ಚಂದ್ರ, ಕನ್ನಡದ ಕಿಶೋರ್, ಅಜಯ್ ಘೋಷ್, ಮೈಮ್ ಗೋಪಿ, ರೂಪಲಕ್ಷ್ಮಿ, ವಿಜಯರಾಮ ರಾಜು, ಜಗದೀಶ್, ರಾಜ್ ತಿರಂದಾಸ್ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನು ಮಟ್ಕಾದ ಸ್ಪೆಷಲ್ ಹಾಡಿಗೆ ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಮೆಗಾ ಪ್ರಿನ್ಸ್ ವರುಣ್ ತೇಜ್ ಜೊತೆ ಸೊಂಟ ಬಳುಕಿಸಲಿದ್ದಾರೆ.

matka
'ಮಟ್ಕಾ' ಚಿತ್ರತಂಡ

ಇದನ್ನೂ ಓದಿ: ಜಾಲಿ ಮೂಡ್​ನಲ್ಲಿ ಸಮಂತಾ: ಬಾಲಿಯಲ್ಲಿ ಮಂಗನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ತಾರೆ

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ: ಈ ಚಿತ್ರವನ್ನು ವೈರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ ಅಡಿ ಮೋಹನ್ ಚೆರುಕುರಿ ಮತ್ತು ಡಾ ವಿಜೇಂದರ್ ರೆಡ್ಡಿ ಟೀಗಾಲ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಜಿ ವಿ ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದು, ಪ್ರಿಯ ಸೇಠ್ ಛಾಯಾಗ್ರಹಣ, ಕಾರ್ತಿಕ್ ಶ್ರೀನಿವಾಸ್ ಆರ್ ಸಂಕಲನ, ಸುರೇಶ್ ಕಲಾ ನಿರ್ದೇಶನವಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಮಟ್ಕಾ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ.

ಇನ್ನೂ ನಟ ವರುಣ್​ ತೇಜ್ ಸಿನಿಮಾ ವಿಚಾರವಾಗಿ ನೋಡುವುದಾದರೆ,​ ಸದ್ಯ ಪ್ರವೀಣ್ ಸತ್ತಾರು ನಿರ್ದೇಶನದಲ್ಲಿ 'ಗಾಂಡಿವಧಾರಿ ಅರ್ಜುನ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ವರುಣ್ ಎದುರು ಸಾಕ್ಷಿ ನಟಿಸುತ್ತಿದ್ದಾರೆ. ಮಿಕ್ಕಿ ಜೇ ಮೇಯರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇದಲ್ಲದೇ ನಿರ್ದೇಶಕ ಶಕ್ತಿ ಪ್ರತಾಪ್ ಸಿಂಹ ಅವರ ಜೊತೆಯೂ ವರುಣ್​ ತೇಜ್​ ಸಿನಿಮಾ ಮಾಡುತ್ತಿದ್ದಾರೆ.

ಇದನ್ನೂ ಓದಿ: Bhola Shankar Trailer: ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಭೋಲಾ ಶಂಕರ್' ಟ್ರೇಲರ್​ ರಿಲೀಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.